ಮದುವೆಯಾದ ಹೀರೋಗಳ ಜೊತೆ ಅಫೇರ್ ಹೊಂದಿದ್ದ ಸ್ಟಾರ್ ಹೀರೋಯಿನ್‌ಗಳು

First Published | Jul 4, 2024, 6:59 PM IST

ಚಿತ್ರರಂಗದಲ್ಲಿ ಅಫೇರ್, ಲವ್ ಟ್ರ್ಯಾಕ್, ಗಾಸಿಪ್‌ಗಳು ಸಾಮಾನ್ಯ. ಒಂದಷ್ಟು ಸತ್ಯವಾಗಿದ್ರೂ, ಕೊನೆಗೆ ಏನೂ ಇಲ್ಲ ಅನ್ನೋ ರೀತಿಯಾಗುತ್ತದೆ. ಒಂದೇ ಪದದಲ್ಲಿ ಹೇಳಬೇಕಾದ್ರೆ ಸಿನಿಮಾ ಇಂಡಸ್ಟ್ರಿ ಮಾಯಾಲೋಕ ಅಂತ ಹೇಳಬಹುದು. ಈ ನಟಿಯರು ಮದುವೆಯಾದ ಸ್ಟಾರ್ ಹೀರೋಗಳ ಜೊತೆ ಸಂಬಂಧದಲ್ಲಿದ್ದರು.

ಸ್ಟಾರ್ ಹೀರೋಗಳು, ಸ್ಟಾರ್ ಹೀರೋಯಿನ್ ಗಳ ನಡುವೆ ನಾನಾ ರೀತಿಯ ಅಫೇರ್ ಗಳ ಸುದ್ದಿ ಕೇಳುತ್ತಲೇ ಇರುತ್ತೇವೆ. ಅದರಲ್ಲಿ ಕೆಲವು ನಿಜವಾಗಿದ್ದರೆ, ಇನ್ನು ಕೆಲವು ವದಂತಿಗಳಾಗಿ ಕೊನೆಯವರೆಗೂ ಉಳಿಯುತ್ತವೆ. ಹೆಚ್ಚು ಗಾಸಿಪ್ ಜೋಡಿಗಳು ಯಾವುದು ಎಂಬುದನ್ನು ನೋಡೋಣ ಬನ್ನಿ.

ಟಾಲಿವುಡ್ ಸ್ಟಾರ್ ನಾಗಚೈತನ್ಯ ಪತ್ನಿಯಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಪತ್ನಿ ಸಮಂತಾರಿಂದ ದೂರವಾದ ಬಳಿಕ ನಟಿ ಶೋಭಿತಾ ಜತೆಯಲ್ಲಿ ನಾಗಚೈತನ್ಯ ಹೆಸರು ಕೇಳಿ ಬರುತ್ತಿದೆ. ಇವರಿಬ್ಬರ ಸಂಬಂಧ ಬಗ್ಗೆ ಹಲವು ಮಾಧ್ಯಮಗಳು ವರದಿ ಮಾಡಿವೆ. ಇಬ್ಬರು ಜೊತೆಯಾಗಿ ವಿದೇಶ ಪ್ರವಾಸಕ್ಕೆ ತೆರಳಿದ್ರು ಎನ್ನಲಾಗಿದೆ. ಈವರೆಗೂ ಶೋಭಿತಾ-ನಾಗಚೈತನ್ಯ ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.

Tap to resize

ನಾಗ ಚೈತನ್ಯ  ತಂದೆ ನಾಗಾರ್ಜುನ್ ಮತ್ತು ಬಾಲಿವುಡ್ ನಟಿ ತಬು ರಿಲೇಶನ್‌ಶಿಪ್‌ನಲ್ಲಿದ್ದರು ಎಂದು ಹಲವು ವರದಿಗಳು ಪ್ರಕಟವಾಗಿದೆ. ಆದ್ರೆ ನಾವಿಬ್ಬರೂ ಇಂದಿಗೂ ಒಳ್ಳೆಯ ಸ್ನೇಹಿತರು ಎಂದು ನಾಗಾರ್ಜುನ್ ಮತ್ತು ತಬು ಹೇಳಿಕೊಳ್ಳುತ್ತಾರೆ.

ನಯನತಾರಾ-ಪ್ರಭುದೇವ ಈ ಪಟ್ಟಿಯಲ್ಲಿದ್ದಾರೆ. ನಯನತಾರಾ-ಪ್ರಭುದೇವ ಪ್ರೀತಿಸುತ್ತಿದ್ದ, ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗಿತ್ತು. ಪ್ರಭುದೇವ ಅವರ ಮೊದಲ ಪತ್ನಿ ಇವರಿಬ್ಬರ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಇಬ್ಬರ ಸಂಬಂಧ ಮುರಿದು ಬಿತ್ತು ಎಂದು ಸಿನಿಮಾ ಇಂಡಸ್ಟ್ರಿ ಹೇಳುತ್ತದೆ. ವಿಘ್ನೇಶ್ ಶಿವನ್ ಅವರನ್ನು ಮದುವೆಯಾಗಿರುವ ನಯನತಾರಾ ಇಬ್ಬರು ಮಕ್ಕಳ ತಾಯಿಯಾಗಿದ್ದು, ಸಂತೋಷದ ಜೀವನ ನಡೆಸುತ್ತಿದ್ದಾರೆ.

ತಮಿಳಿನ ಸ್ಟಾರ್ ಹೀರೋ ಧನುಷ್, ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾರನ್ನು ಮದುವೆಯಾಗಿದ್ದರು. ಮದುವೆಯಾದ 18 ವರ್ಷದ ನಂತರ ಇಬ್ಬರು ಬೇರೆ ಬೇರೆಯಾಗಿದ್ದಾರೆ. ಇಬ್ಬರ ಡಿವೋರ್ಸ್‌ಗೆ ನಟಿ ಅಮಲಾ ಪೌಲ್ ಜೊತೆ ಧನುಷ್ ಸಂಬಂಧ ಕಾರಣ ಎಂಬ ಮಾತುಗಳು ಕೇಳಿ ಬಂದಿದ್ದವು. ಸದ್ಯ ಧನುಷ್ ಮತ್ತು ಐಶ್ವರ್ಯಾ ಕಾನೂನುಬದ್ಧವಾಗಿ ಪ್ರತ್ಯೇಕವಾಗಿದ್ದಾರೆ.

ಬಾಲಿವುಡ್‌ನ ದಿವಂಗತ ಸ್ಟಾರ್ ಹೀರೋಯಿನ್ ಶ್ರೀದೇವಿಗೂ ನಿರ್ಮಾಪಕ ಬೋನಿ ಕಪೂರ್ ಜೊತೆ ಇದೇ ರೀತಿಯ ಸಂಬಂಧವಿದೆ. ಮೊದಲ ಪತ್ನಿಗೆ ವಿಚ್ಛೇದನ ನೀಡುವ ಮುನ್ನ ಶ್ರೀದೇವಿ ಬೋನಿ ಕಪೂರ್ ಅವರನ್ನು ರಹಸ್ಯವಾಗಿ ಮದುವೆಯಾಗಿದ್ದರು. ಬೋನಿ ಕಪೂರ್ 13 ವರ್ಷಗಳ ನಂತರ ಮೋನಾ ಕಪೂರ್‌ಗೆ ವಿಚ್ಛೇದನ ನೀಡಿ ಶ್ರೀದೇವಿಯನ್ನು ವಿವಾಹವಾದರು.

ಗ್ಲೋಬಲ್ ಹೀರೋ ಕಮಲ್ ಹಾಸನ್ ಹೆಸರಿನ ಜೊತೆ ಹಲವು ನಟಿಯರ ಹೆಸರು ಕೇಳಿ ಬಂದಿವೆ. ಕಮಲ್ ಹಾಸನ್ ಮೊದಲ ಪತ್ನಿ ವಾಣಿ ಗಣಪತಿ, ಎರಡನೇ ಪತ್ನಿ ಸರಿತಾ. ಕಮಲ್ ಹಾಸನ್ ಇಬ್ಬರ ಜೊತೆಗೂ ಡಿವೋರ್ಸ್ ಪಡೆದುಕೊಂಡಿದ್ದಾರೆ. ಆ ಬಳಿಕ ಕಮಲ್ ಹಾಸನ್ ಜೊತೆ ನಾಯಕಿ ಗೌತಮಿ ಹೆಸರು ಕೇಳಿ ಬಂದಿತ್ತು. ಇತ್ತೀಚೆಗೆ ನಟಿ ಸಿಮ್ರಾನ್ ಮತ್ತು ಕಮಲ್ ಹಾಸನ್ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ನಟಿ ಪವಿತ್ರಾ ಲೋಕೇಶ್ ಎರಡು ಬಾರಿ ವಿವಾಹವಾದ ನಟ ನರೇಶ್ ಜೊತೆ ಸಂಸಾರ ನಡೆಸುತ್ತಿದ್ದಾರೆ. ಪವಿತ್ರಾ ಲೋಕೇಶ್ ಅವರಿಗೂ ಇದು ಎರಡನೇ ಮದುವೆಯಾಗಿದೆ. ಇಬ್ಬರ ಸಂಬಂಧಕ್ಕೆ ನರೇಶ್ ಪತ್ನಿ ರಮ್ಯಾ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

Latest Videos

click me!