ಲೈಂಗಿಕ ಕಿರುಕುಳ ಅರೋಪ ಎದುರಿಸಿದ ಬಾಲಿವುಡ್‌ನ ಸೆಲೆಬ್ರೆಟಿಗಳು!

First Published | Sep 23, 2020, 8:04 PM IST

ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಅನುರಾಗ್ ಕಶ್ಯಪ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಪಾಯಲ್ ಘೋಷ್ ಆರೋಪಿಸಿದ್ದಾರೆ. ಇದರ ನಂತರ ಬಿ-ಟೌನ್‌ನಲ್ಲಿ #Metoo ಗದ್ದಲ ಮತ್ತೊಮ್ಮೆ ಸದ್ದುಮಾಡುತ್ತಿದೆ  ಅಲೋಕ್ ನಾಥ್, ಕೈಲಾಶ್ ಖೇರ್, ಅಭಿಜೀತ್ ಭಟ್ಟಾಚಾರ್ಯ, ವಿಕಾಸ್ ಬಹ್ಲ್ ಮುಂತಾದ ಸೆಲೆಬ್ರೆಟಿಗಳ ಮೇಲೆ  ಸೆಕ್ಷುಯಲ್ ಅಬ್ಯೂಸ್‌ ಅರೋಪ ಕೇಳಿಬಂದಿದೆ. 

ಹಿಂದೊಮ್ಮೆ #MeToo ಆರೋಪಗಳು ಬಾಲಿವುಡ್, ಸ್ಯಾಂಡಲ್‌ವುಡ್‌ನಲ್ಲಿ ಸುದ್ದಿ ಮಾಡಿತ್ತು. ಅದು ಅಲ್ಲಿಗೇ ತಣ್ಣಗಾಗಿತ್ತು. ಯಾರ ಮೇಲೆ ಶಿಕ್ಷೆ ಆಗಿದ್ದಿಲ್ಲ. ಇದೀಗ ಸುಶಾಂತ್ ಆತ್ಮಹತ್ಯೆ ಬೆನ್ನಲ್ಲೇ ಬಾಲಿವುಡ್‌ನ ಕರಾಳ ಮುಖಗಳು ಅನಾವರಣಗೊಳ್ಳುತ್ತಿವೆ.
undefined
ನಿರ್ದೇಶಕ ಅನುರಾಗ್ ಕಶ್ಯಪ್ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಪಾಯಲ್ ಆರೋಪಿಸಿದ್ದಾರೆ. ಅವರು ಸೋಶಿಯಲ್‌ ಮೀಡಿಯಾ ಪೋಸ್ಟ್ ಮೂಲಕ ನ್ಯಾಯಕ್ಕಾಗಿ ಪ್ರಧಾನಮಂತ್ರಿಗೆ ಮನವಿ ಮಾಡಿದ್ದಾರೆ.
undefined
Tap to resize

'ಅನುರಾಗ್ ಕಶ್ಯಪ್ ನನ್ನ ಮೇಲೆ ತುಂಬಾ ಕೆಟ್ಟ ರೀತಿಯಲ್ಲಿ ವರ್ತಿಸಿದ್ದಾರೆ.ನರೇಂದ್ರ ಮೋದಿ ಅವರೇ ದಯವಿಟ್ಟು ಈ ನಿರ್ದೇಶಕನ ವಿರುದ್ಧ ಕ್ರಮ ತೆಗೆದುಕೊಳ್ಳಿ ಮತ್ತು ಈ ಸೃಜನಶೀಲ ವ್ಯಕ್ತಿಯ ಹಿಂದಿನ ಕ್ರೂರ ಮುಖವನ್ನುದೇಶ ನೋಡಲಿ. ಅದು ನನಗೆ ಹಾನಿ ಮಾಡುತ್ತದೆ ಎಂದು ನನಗೆ ಗೊತ್ತು. ನನ್ನ ಸುರಕ್ಷತೆ ಅಪಾಯದಲ್ಲಿದೆ ದಯವಿಟ್ಟು ಸಹಾಯ ಮಾಡಿ' ಎಂದು ಪಾಯಲ್‌ ಟ್ವೀಟ್‌ ಮಾಡಿದ್ದಾರೆ.
undefined
ಚಲನಚಿತ್ರ ನಿರ್ಮಾಪಕ ಮತ್ತು ಚಿತ್ರಕಥೆಗಾರ ವಿಕಾಸ್ ಬಹ್ಲ್ ಮೇಲೆ ಕೂಡ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಫ್ಯಾಂಟಮ್ ಫಿಲ್ಮ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ವಿಕಾಸ್ ಮೇಲೆ ದೈಹಿಕ ಕಿರುಕುಳ ಆರೋಪ ಮಾಡಿದ್ದರು.ಈ ಸಂದರ್ಭದಲ್ಲಿ, ಫ್ಯಾಂಟಮ್ ಫಿಲ್ಮ್ಸ್ ಕೋ ಅನರ್ಸ್‌ ಅನುರಾಗ್ ಕಶ್ಯಪ್ ಮತ್ತು ವಿಕ್ರಮಾದಿತ್ಯ ಮೋಟ್ವಾನೆ ಸಹ ವಿಕಾಸ್ ಬಹ್ಲ್ ವಿರುದ್ಧ ಧ್ವನಿ ಎತ್ತಿದ್ದರು.
undefined
ನಟ ಶೈನಿ ಅಹುಜಾ ಮೇಲೆ ಕೇವಲ ಅತ್ಯಾಚಾರದ ಆರೋಪ ಮಾತ್ರವಲ್ಲ, ಅದು ಸಾಬೀತಾಗಿದೆ. 2009 ರಲ್ಲಿ, ಶೈನಿ ಅಹುಜಾರ ಮೇಲೆ ಮನೆಯ ಕೆಲಸದವಳು ಅತ್ಯಾಚಾರದ ಆರೋಪ ಹೊರಿಸಿದ್ದರು. ಈ ಪ್ರಕರಣದಲ್ಲಿ ಅವರನ್ನು 2011ರಲ್ಲಿ ವಿಚಾರಣಾ ನ್ಯಾಯಾಲಯವು ಶಿಕ್ಷೆಗೊಳಪಡಿಸಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಈ ಕಾರಣದಿಂದಾಗಿ ಅವರ ಕೆರಿಯರ್‌ ಹಾಳು ಮಾಡಿಕೊಂಡರು.
undefined
2018 ರಲ್ಲಿ ತನುಶ್ರೀ ದತ್ತಾ ನಾನಾ ಪಟೇಕರ್ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಎಲ್ಲರನ್ನೂ ಎಚ್ಚರಿಸಿದ್ದರು. 2008 ರಲ್ಲಿ 'ಹಾರ್ನ್ ಒಕೆ ಪ್ಲೀಸ್' ಚಿತ್ರದ ಸೆಟ್‌ಗಳಲ್ಲಿ ನಾನಾ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಿದರು. ಆದರೆ, ಎಲ್ಲಾ ಆರೋಪಗಳನ್ನು ನಾನಾ ನಿರಾಕರಿಸಿದ್ದಾರೆ.
undefined
ಸಂಸ್ಕಾರಿ ಬಾಬುಜಿ ಎಂದೇ ಫೇಮಸ್‌ ಆಗಿದ್ದ ಅಲೋಕ್ನಾಥ್ ಅವರ ಹೆಸರೂ ಇಂತಹ ಪ್ರಕರಣಗಳಲ್ಲಿ ಕೇಳಿ ಬಂದಿದೆ. ಟಿವಿ ಬರಹಗಾರ್ತಿ ವಿಂಡಾ ನಂದಾ ಫೇಸ್‌ಬುಕ್ ಪೋಸ್ಟ್ ಮೂಲಕ ಅಲೋಕ್ ನಾಥ್ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಸಿದ್ದಾರೆ . 19 ವರ್ಷಗಳ ಹಿಂದೆ ಶೋನ ಸೆಟ್‌ನಲ್ಲಿ ಅಲೋಕ್ ನಾಥ್ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ವಿಂಡಾ ಹೇಳಿದ್ದಾರೆ.
undefined
ಗಾಯಕ ಕೈಲಾಶ್ ಖೇರ್ ಅವರ ಮೇಲೆ ಸೆಕ್ಷುಯಲ್‌ ಹರಾಸ್ಮೆಂಟ್‌ ಹಾಗೂ ಮೊಲೆಸ್ಟೇಶನ್‌ ಆರೋಪವೂ ಇದೆ. 2018 ರಲ್ಲಿ ಗಾಯಕಿ ಸೋನಾ ಮೊಹಾಪಾತ್ರಾ ಮತ್ತು ಇನ್ನೊಬ್ಬ ಮಹಿಳೆ ಕೈಲಾಶ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. 2004 ರಲ್ಲಿ ಕೈಲಾಶ್ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ.
undefined
ಸ್ಟ್ಯಾಂಡಪ್‌ ಕಾಮಿಡಿಯನ್‌ ಮತ್ತು ಚಲನಚಿತ್ರ ಬರಹಗಾರ ವರುಣ್ ಗ್ರೋವರ್ ಕೂಡ ಈ ಪಟ್ಟಿಯಲ್ಲಿದ್ದಾರೆ. 2001ರಲ್ಲಿ ನಾಟಕವೊಂದರ ರಿಹರ್ಸಲ್‌ ವೇಳೆ, ವರುಣ್ ಅವಳನ್ನು ತಪ್ಪಾದ ರೀತಿಯಲ್ಲಿ ಮುಟ್ಟಿದನು ಮತ್ತು ಅವಳೊಂದಿಗೆ ಕೆಟ್ಟದಾಗಿ ವರ್ತಿಸಿದನು ಎಂದು ಮಹಿಳೆ ಹೇಳಿದಳು. ಈ ಆರೋಪಗಳನ್ನು ವರುಣ್ ನಿರಾಕರಿಸಿದ್ದಾರೆ.
undefined
2018 ರಲ್ಲಿ ಫ್ಲೈಟ್ ಅಟೆಂಡೆಂಟ್ ಗಾಯಕ ಅಭಿಜೀತ್ ಭಟ್ಟಾಚಾರ್ಯ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. 20 ವರ್ಷಗಳ ಹಿಂದೆ ಅಭಿಜೀತ್ ಕೋಲ್ಕತ್ತಾದ ಪಬ್‌ನಲ್ಲಿ ಅವನನ್ನು ಬಹುತೇಕ ಮುತ್ತಿಕ್ಕಿ ಎಡ ಕಿವಿಯನ್ನು ಪರಚಿದನೆಂದು ಅಟೆಂಡೆಂಟ್ ಹೇಳಿದ್ದಾರೆ.ಆದರೆ, ಆ ಸಮಯದಲ್ಲಿ ತಾನು ಇನ್ನೂ ಜನಿಸಿರಲಿಲ್ಲ ಮತ್ತು ತಾನು ಎಂದಿಗೂ ಪಬ್‌ಗೆಹೋಗಿಲ್ಲ ಎಂದು ಅಭಿಜೀತ್ ಎಲ್ಲ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
undefined
ನಿರ್ದೇಶಕ ಮತ್ತು ನಿರ್ಮಾಪಕ ಅನುರಾಗ್ ಕಶ್ಯಪ್ ಮೇಲೆ ಪಾಯಲ್ ಘೋಷ್ ಲೈಂಗಿಕ ಕಿರುಕುಳದ ಆರೋಪವಿದೆ. ಅನುರಾಗ್ ತನ್ನ ಮನೆಗೆ ಕರೆದು ಅವಳೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾನೆ ಎಂದು ಸಂದರ್ಶನವೊಂದರಲ್ಲಿ ಪಾಯಲ್ ಹೇಳಿದ್ದಾರೆ. ಆದರೆ, ಈ ಸಂದರ್ಭದಲ್ಲಿ ಅನುರಾಗ್‌ಗೆ ಅನೇಕ ಮಹಿಳಾ ನಟರಿಂದ ಮುಕ್ತ ಬೆಂಬಲ ದೊರೆತಿದೆ.
undefined

Latest Videos

click me!