ತಮ್ಮ ಪಾತ್ರಗಳ ಜೊತೆಗೆ ವೈಯಕ್ತಿಕ ಜೀವನದಿಂದಲೂ ಸಖತ್ ಫೇಮಸ್ ಬಾಲಿವುಡ್ ನಟಿ ಮಂದಾಕಿನಿ .
ಅವರ ರಾಮ್ ತೇರಿ ಗಂಗಾ ಮೈಲಿ ಸಿನಿಮಾದ ಬೋಲ್ಡ್ ಆವತಾರ ಯುವಕರ ನಿದ್ದೆಗೆಡಿಸಿತ್ತು.
ದಾವೂದ್ ಇಬ್ರಾಹಿಂ ಜೊತೆಕ್ಲೋಸ್ನೆಸ್‌ಕಾರಣದಿಂದ ಮಂದಾಕಿನಿ ಬಹಳ ಪ್ರಚಾರ ಪಡೆದಿದ್ದಾರೆ.
ಇತ್ತೀಚೆಗೆ, ಅವರ ಒಂದು ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು ತಕ್ಷಣವೇ ಸಖತ್ ವೈರಲ್ ಆಗಿದೆ. ಫೋಟೋದಲ್ಲಿ ಮಂದಾಕಿನಿ ಸಿಂಪಲ್ ನೀಲಿ ಲಕ್ನೋವಿ ಚಿಕಂಕರಿ ಕುರ್ತಾ ಮತ್ತು ದೊಡ್ಡ ಸನ್‌ಗ್ಲಾಸ್‌ಧರಿಸಿರುವುದು ಕಾಣಬಹುದು. ಈ ಫೋಟೋ ಏಪ್ರಿಲ್‌ನಲ್ಲಿ ಕೋಲ್ಕತ್ತಾದಲ್ಲಿ ಕ್ಲಿಕ್ ಮಾಡಲಾಗಿದೆ.
ಮಂದಾಕಿನಿಯವರ ಈ ಫೋಟೋ ಸಿಕ್ಕಾಪಟ್ಟೆ ಕಾಮೆಂಟ್ ಹಾಗೂ ಲೈಕ್ಸ್ ಗಿಟ್ಟಿಸಿದೆ. ಫ್ಯಾನ್ಸ್ ನಟಿಯ ಈ ಲುಕ್‌ಗೆ ಫುಲ್ ಫಿದಾ ಆಗಿದ್ದಾರೆ. ಬ್ಯೂಟಿಫುಲ್, ಗಾರ್ಜಿಯಸ್ ಎಂದು ಹೇಳಿದ್ದಾರೆ
ರಾಮ್ ತೇರಿ ಗಂಗಾ ಮೈಲಿ ಚಲನಚಿತ್ರದಿಂದ ಪಾರದರ್ಶಕ ಬಿಳಿ ಸೀರೆಯಲ್ಲಿ ಕಾಣಿಸಿಕೊಂಡ ಫೋಟೋ ಮತ್ತುಇನ್ನೊಂದು ಕಡೆ ನಟಿ ಈಗಿನ ಫೋಟೋವನ್ನು ಫ್ಯಾನ್ಸ್ ಶೇರ್ ಮಾಡಿದ್ದಾರೆ.
ರಾಜ್ ಕಪೂರ್ ಅವರ ರಾಮ್ ತೇರಿ ಗಂಗಾ ಮೈಲಿ ಸಿನಿಮಾದಲ್ಲಿ ಮಂದಾಕಿನಿ ಬಿಳಿ ಸೀರೆಯಲ್ಲಿ ಜಲಪಾತದ ಕೆಳಗೆ ಡ್ಯಾನ್ಸ್ ಮಾಡುವ ಸೀನ್ ಎಲ್ಲರಿಗೂ ಶಾಕ್ ನೀಡಿತ್ತು.
ತನ್ನ ಬೋಲ್ದ್ ಅವತಾರಕ್ಕಾಗಿ ಸುದ್ದಿಯಲ್ಲಿದ್ದ ನಟಿ ಭೂಗತ ಡಾನ್ ದಾವೂದ್ ಇಬ್ರಾಹಿಂಗೆ ಹತ್ತಿರವಾಗಿದ್ದರು. ಒಂದು ಸಮಯದಲ್ಲಿ ಇಬ್ರಾಹಿಂ ಮತ್ತು ಮಂದಾಕಿನಿ ಸಿರಿಯಸ್ ರಿಲೆಷನ್‌ಶಿಪ್‌ನಲ್ಲಿದ್ದಾರೆ ಎಂಬವರದಿಗಳಿದ್ದವು.
ಅವರು ವರದಿಗಳನ್ನು ಸ್ಪಷ್ಟವಾಗಿ ತಳ್ಳಿಹಾಕಿ, ದಾವೂದ್ ಕೇವಲ ಫ್ರೆಂಡ್ ಮತ್ತು ನಾವಿಬ್ಬರೂಮದುವೆಯಾಗಿಲ್ಲ ಎಂದು ಹೇಳಿದ್ದರು.
ನಂತರ, ಮಂದಾಕಿನಿ ಮಾಜಿ ಬೌದ್ಧ ಸನ್ಯಾಸಿಯನ್ನು ವಿವಾಹವಾದರು ಎಂಬ ವರದಿಗಳು ಬಂದವು ಮತ್ತು ಈಗ ನಟಿ ಯೋಗ ಗುರುಗಳಾಗಿದ್ದಾರೆ.