ಕುಡಿದ ಮತ್ತಲ್ಲಿ ಶಾರುಖ್ ಖಾನ್ ಕಾಜೋಲ್ ಜೊತೆ ಹೀಗೆ ನೆಡೆದು ಕೊಂಡಿದ್ದರಂತೆ!

Suvarna News   | Asianet News
Published : Jun 28, 2021, 11:25 AM IST

ಬಾಲಿವುಡ್‌ನ ಕಿಂಗ್ ಆಫ್ ರೋಮ್ಯಾನ್ಸ್ ಶಾರುಖ್ ಖಾನ್ ಚಿತ್ರರಂಗದಲ್ಲಿ 29 ವರ್ಷಗಳನ್ನು ಪೂರೈಸಿದ್ದಾರೆ. ರಿಷಿ ಕಪೂರ್ ಮತ್ತು ದಿವ್ಯಾ ಭಾರತಿ ಜೊತೆ ದಿವಾನಾ ಚಿತ್ರದ ಮೂಲಕ ಬಾಲಿವುಡ್ ಬಣ್ಣದ ಜಗತ್ತಿಗೆ ಕಾಲಿಟ್ಟರು. ಅವರು ಈ ಉದ್ಯಮದಲ್ಲಿ 29 ವರ್ಷಗಳನ್ನು ಪೂರೈಸಿದ್ದರೂ, ಇದುವರೆಗೂ ಅವರ ಚೊಚ್ಚಲ ಚಿತ್ರವನ್ನು ನೋಡಿಲ್ಲವಂತೆ. ಈ ನಡುವೆ ಶಾರುಖ್‌ಗೆ ಸಂಬಂಧಿಸಿದ ಒಂದು ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಏನದು? ಮುಂದೆ ಓದಿ.

PREV
113
ಕುಡಿದ ಮತ್ತಲ್ಲಿ ಶಾರುಖ್ ಖಾನ್ ಕಾಜೋಲ್ ಜೊತೆ ಹೀಗೆ ನೆಡೆದು ಕೊಂಡಿದ್ದರಂತೆ!

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಜೀವನದ ಈ ಘಟನೆ ಅವರ ಬ್ಲಾಕ್‌ಬಸ್ಟರ್‌ ಸಿನಿಮಾ ಬಾಜಿಗರ್‌ಗೆ ಸಂಬಂಧಿಸಿದೆ. 

213

ಉದ್ಯಮದಲ್ಲಿ 29 ವರ್ಷಗಳು ಪೂರ್ಣಗೊಂಡ ನಂತರ ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಂಚಿಕೊಂಡ ಶಾರುಖ್ ಖಾನ್ ಹೀಗೆ ಬರೆದಿದ್ದಾರೆ.
 
313

ನೀವು 30 ವರ್ಷಗಳಿಂದ ನನ್ನ ಮೇಲೆ ಸಾಕಷ್ಟು ಪ್ರೀತಿಯನ್ನು ಸುರಿಸುತ್ತಿದ್ದೀರಿ. ನಾನು ನಿಮ್ಮನ್ನು ರಂಜಿಸಲು ನನ್ನ ಜೀವನದ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಕಳೆದಿದ್ದೇನೆ. ನಾಳೆ ನಾನು ನಿಮ್ಮೊಂದಿಗೆ ಮಾತನಾಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೇನೆ. ಈ ಪ್ರೀತಿಗೆ ಧನ್ಯವಾದಗಳು.

413

ಶಾರುಖ್-ಕಾಜೋಲ್ ಒಟ್ಟಿಗೆ ಅನೇಕ ಅದ್ಭುತ ಸಿನಿಮಾಗಳನ್ನು ನೀಡಿದ್ದಾರೆ. ಕಾಜೋಲ್ ಮತ್ತು ಶಾರುಖ್ ಅವರ ಅನ್‌ಸ್ಕ್ರೀನ್‌ ಕೆಮಿಸ್ಟ್ರಿಗೆ ಫ್ಯಾನ್ಸ್‌ ಫಿದಾ ಆಗಿದ್ದರು.

513

ತೆರೆಯ ಮೇಲೆ ಹಿಟ್ ಆಗಿರುವ ಈ ಜೋಡಿ ಆಫ್‌ಸ್ಕ್ರೀನ್‌ನಲ್ಲಿ ಉತ್ತಮ ಸ್ನೇಹಿತರು. ಇಬ್ಬರ ಮೊದಲ ಭೇಟಿ ಬಾಜಿಗರ್ ಚಿತ್ರದ ಸೆಟ್‌ನಲ್ಲಿ ನಡೆಯಿತು. ಮೊಟ್ಟ ಮೊದಲ ಮಿಟಿಂಗ್‌ನಲ್ಲಿ ಕಾಜೋಲ್‌ಗೆ ಶಾರುಖ್ ಸ್ವಭಾವ ಇಷ್ಟವಾಗಿರಲಿಲ್ಲವಂತೆ. 
 
613

ಸಂದರ್ಶನವೊಂದರಲ್ಲಿ ಬಾಜಿಗರ್ ಚಿತ್ರದ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡ ಕಾಜೋಲ್, ಶಾರುಖ್ ಮೊದಲ ಭೇಟಿಯ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

713

ಹೊಸ ವರ್ಷದ ಸಂಭ್ರಮಾಚರಣೆ ನಂತರ, ಸಿನಿಮಾದ ಶೂಟಿಂಗ್ ಇರಿಸಲಾಗಿತ್ತು. ನಾನು ಸೆಟ್ ತಲುಪಿದಾಗ ಎಲ್ಲರೂ ಡಾರ್ಕ್ ಗ್ಲಾಸ್ ಧರಿಸಿದ್ದರು. ಶಾರುಖ್ ಕೂಡ ಅಲ್ಲಿದ್ದರಂತೆ.

813

ಈ ಸಮಯದಲ್ಲಿ ಶಾರುಖ್ ತುಂಬಾ ಕುಡಿದಿದ್ದರು. ರಾತ್ರಿಯ ಪಾರ್ಟಿ ಮಾಡಿದ ಹ್ಯಾಂಗ್ ಓವರ್ ಇಳಿದಂತೆ ಕಾಣುತ್ತಿರಲಿಲ್ಲ. ನಾನು ತುಂಬಾ ವೇಗವಾಗಿ ಮಾತನಾಡುತ್ತಿದ್ದೆ ಮತ್ತು ಯಾರೂ ನನ್ನನ್ನು ತಡೆಯುವ ಧೈರ್ಯ ಮಾಡಲಿಲ್ಲ. ನಾವು ಒಂದು ದೃಶ್ಯವನ್ನು ಚಿತ್ರೀಕರಿಸಬೇಕಾಗಿತ್ತು ಎಂದು ಕಾಜೋಲ್ ಹೇಳಿದ್ದರು.
 
913

ಒಂದು ಸೀನ್‌ ಶೂಟ್‌ ಮಾಡುತ್ತಿದ್ದಾಗ ಶಾರುಖ್‌ಗೆ ಅವನ ಡೈಲಾಗ್‌ ಹೇಳು ಎಂದು ಹೇಳಿದಾಗ, ಶಟಪ್‌ ಎಂದು ಕಿರುಚಿದ್ದ. ಇವನು ತುಂಬಾ ರೂಡ್‌ ಎಂದು ಕೊಂಡಿದ್ದೆ. ಹೀಗೆ ನಮ್ಮ ಸ್ನೇಹ ಪ್ರಾರಂಭವಾಯಿತು ಎಂದು ಶಾರುಖ್‌ ಜೊತೆಯ ಫ್ರೆಂಡ್‌ಶಿಪ್‌ ಬಗ್ಗೆ ಹಂಚಿಕೊಂಡಿದ್ದಾರೆ ನಟಿ.

1013

ಶಾರುಖ್‌ ಮೊದಲು ಹೇಮಾ ಮಾಲಿನಿ ಅವರ ಚಿತ್ರ ದಿಲ್ ಆಶ್ನಾ ಹೈ ಚಿತ್ರಕ್ಕೆ ಸಹಿ ಹಾಕಿದ್ದರು. ಆದರೆ ಮೊದಲು ಬಿಡುಗಡೆಯಾಗಿ ದಿವಾನಾ ಚೊಚ್ಚಲ ಸಿನಿಮಾವಾಯಿತು. ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಸಾಕಷ್ಟು ಕಷ್ಟಪಟ್ಟ ಶಾರುಖ್ ನಂತರ ಅನೇಕ  ಹಿಟ್ ಸಿನಿಮಾಗಳನ್ನು ನೀಡಿ ಬಾಲಿವುಡ್‌ನ ಕಿಂಗ್‌ ಖಾನ್‌ ಆಗಿದ್ದಾರೆ.

1113

ಶಾರುಖ್ ಖಾನ್ ತಮ್ಮ ವೃತ್ತಿ ಜೀವನವನ್ನು ಟಿವಿ ಧಾರಾವಾಹಿಗಳಾದ ಫೌಜಿ ಮತ್ತು ಸರ್ಕಸ್ ಮೂಲಕ ಪ್ರಾರಂಭಿಸಿದರು. ಟಿವಿಯಿಂದ ಬಾಲಿವುಡ್‌ಗೆ ತೆರಳಿದ ನಂತರ ಅವರು ಹಿಂದಿರುಗಿ ನೋಡಲಿಲ್ಲ. ಒಂದರ ನಂತರ ಒಂದರಂತೆ ಹಿಟ್ ಚಲನಚಿತ್ರಗಳನ್ನು ನೀಡಿದ ಶಾರುಖ್ ಟಿವಿಯಿಂದ ಬಾಲಿವುಡ್‌ಗೆ ಬರಲು ಅವಕಾಶ ನೀಡಿದವರು ಹೇಮಾ ಮಾಲಿನಿ ಎಂಬ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ. 

1213

ಶಾರುಖ್ ಕೊನೆಯ ಬಾರಿಗೆ 2018ರ ಡಿಸೆಂಬರ್‌ನಲ್ಲಿ 'ಜೀರೋ' ಸಿನಿಮಾದಲ್ಲಿ ಕಾಣಿಸಿಕೊಂಡರು. ಜೀರೋ ಫ್ಲಾಪ್ ನಂತರ, ಈಗ ಶಾರುಖ್ 'ಪಠಾಣ್' ಚಿತ್ರದೊಂದಿಗೆ ಪುನರಾಗಮನ ಮಾಡಲಿದ್ದಾರೆ.

1313

ಸಿದ್ಧಾರ್ಥ್ ಆನಂದ್ ನಿರ್ದೇಶನದ ಬಿಗ್‌ ದೊಡ್ಡ ಬಜೆಟ್‌ನಲ್ಲಿ ಸಿದ್ಧಪಡಿಸಲಾಗುರುವ ಈ ಸಿನಿಮಾಕ್ಕೆ ಶಾರುಖ್ ಇದುವರೆಗೆ ಅತಿ ಹೆಚ್ಚು ಶುಲ್ಕ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಶಾರುಖ್ 100 ಕೋಟಿ ರೂ.ಪಡೆಯಲಿದ್ದಾರೆ ಎಂದು ವರದಿಗಳು ಹೇಳುತ್ತಿವೆ.

click me!

Recommended Stories