ಸುಶಾಂತ್ ಆತ್ಮಹತ್ಯೆ ಪ್ರಕರಣ: ತನಿಖೆ ನಡೆದು ಬಂದ ಹಾದಿ ಇದು..!

First Published Aug 7, 2020, 5:54 PM IST

ಜೂನ್.14 ರಂದು ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಈಗ ವಿಭಿನ್ನ ತಿರವು ಪಡೆಯುತ್ತಿದೆ. ಈಗಾಗಲೇ 50ಕ್ಕೂ ಹೆಚ್ಚು ಜನರ ಹೇಳಿಕೆ ಪಡೆಯಲಾಗಿದ್ದು, ಪ್ರಕರಣವನ್ನು ಸಿಬಿಐ ವಹಿಸಿಕೊಂಡಿದೆ. ಈ ನಡುವೆ ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯವೂ ತನಿಖೆಯ ಭಾಗವಾಗಿದೆ. ಸುಶಾಂತ್ ಸಾವಿನ ನಂತರ ತನಿಖೆ ನಡೆದು ಬಂದ ರೀತಿ ಇದು. ಇಲ್ಲಿದೆ ಸುಶಾಂತ್ ಸಾವಿನ ತನಿಖೆಯ ಪ್ರಮುಖ ಘಟ್ಟಗಳು

ರಿಯಾ ಚಕ್ರವರ್ತಿ: ಸುಶಾಂತ್‌ ಆತ್ಮಹತ್ಯೆ ಮಾಡಿಕೊಳ್ಳಲು ರಿಯಾ ಚಕ್ರವರ್ತಿಯೇ ಕಾರಣ ಎಂದು ಸುಶಾಂತ್ ತಂದೆ ಕೆಕೆ ಸಿಂಗ್ ದೂರಿನಲ್ಲಿ ತಿಳಿಸಿದ್ದಾರೆ. ಸಾವಿನ ಒಂದು ತಿಂಗಳ ನಂತರ ಸಾವಿನ ತನಿಖೆಯನ್ನ ಸಿಬಿಐಗೆ ವಹಿಸುವಂತೆ ಅವರು ಅಮಿತ್‌ ಶಾ ಅವರಿಗೆ ಮನವಿ ಮಾಡಿದ್ದರು. ಪಟ್ನಾದಲ್ಲಿ ರಿಯಾ ವಿರುದ್ಧ ಎಫ್‌ಐಆರ್ ದಾಖಲಾದಾಗ ಪ್ರಕರಣವನ್ನು ಮುಂಬೈ ಪೊಲೀಸರಿಗೆ ಒಪ್ಪಿಸಬೇಕೆಂದು ನಟಿ ಸುಪ್ರೀಂ ಮೆಟ್ಟಿಲೇರಿದ್ದರು. ಬಿಹಾರ್ ಪೊಲೀಸ್ ನಟಿಯ ಮನೆಗೆ ಬಂದಾಗ ರಿಯಾ ಅವರ ಮನೆಯಿಂದಲೇ ಗಾಯಬ್ ಆಗಿದ್ದರು.
undefined
ಕಂಗನಾ ರಣಾವತ್: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಸುಶಾಂತ್ ಸಾವಿನ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಅರ್ನಬ್ ಗೋಸ್ವಾಮಿ ಸಂದರ್ಶನದಲ್ಲಿ ಮೂವಿ ಮಾಫಿಯಾವೇ ಸುಶಾಂತ್ ಸಾವಿಗೆ ಕಾರಣ ಎಂದು ಅವರು ಹೇಳಿದ್ದರು. ಆದಿತ್ಯ ಚೋಪ್ರಾ, ಕರಣ್ ಜೋಹರ್, ರಾಜೀವ್ ಮಸಂದ್, ಮಹೇಶ್ ಭಟ್‌ ಬಗ್ಗೆಯೂ ಕಂಗನಾ ಕಿಡಿ ಕಾರಿದ್ದರು.
undefined
ಸಂಜಯ್ ಲೀಲಾ ಬನ್ಸಾಲಿ: ರಾಮ್‌ ಲೀಲಾ ಸಿನಿಮಾದಲ್ಲಿ ಸಂಜಯ್ ಲೀಲಾ ಬನ್ಸಾಲಿ ಸುಶಾಂತ್‌ನನ್ನು ತೆಗೆದುಕೊಳ್ಳಲು ಬಯಸಿದ್ದರು. ಇದಕ್ಕಾಗಿ ಆತನನ್ನು ಕೇಳಿದಾಗ ಆತ ಆಗಲೇ ಯಶ್‌ ರಾಜ್‌ ಫಿಲ್ಮ್ ಜೊತೆ ಪ್ರಾಜೆಕ್ಟ್ ಒಪ್ಪಿಕೊಂಡಿದ್ದ. ಇದಕ್ಕೆ ಹೊರತಾಗಿ ಯಾವುದೇ ಕಾಂಟ್ಯಾಕ್ಟ್‌ ಇಲ್ಲ ಎಂದು ಅವರು ತಿಳಿಸಿದ್ದಾರೆ.
undefined
ಶೇಖರ್ ಕಪೂರ್: ಶೇಖರ್ ಕಪೂರ್ ಸುಶಾಂತ್‌ ಜೊತೆ ಹತ್ತಿರದಲ್ಲಿ ಕೆಲಸ ಮಾಡಿದ್ದರು. ನಟ ಬೇಸರದಲ್ಲಿದ್ದ, ಕೆಲವರಿಂದ ನಿರ್ಲಕ್ಷ್ಯಕ್ಕೊಳಗಾಗಿ ನನ್ನ ಬಳಿ ಕಣ್ಣೀರೊರೆಸಿಕೊಂಡಿದ್ದ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದಕೊಂಡಿದ್ದರು.
undefined
ಅಪೂರ್ವ ಮೆಹ್ತಾ: ಕರಣ್ ಜೋಹರ್ ವಿರುದ್ಧ ನೆಪೊಟಿಸಂ ವಾಗ್ದಾಳಿ ಹೆಚ್ಚಾಗಿದೆ. ಕಂಗಾನ ರಣಾವತ್ ಕೂಡಾ ಕರಣ್ ಜೋಹರ್ ಸುಶಾಂತ್ ಕೆರಿಯರ್ ಹಾಳು ಮಾಡಿದ ಎಂದು ಆರೋಪಿಸಿದ್ದಾರೆ. ಆದರೆ ಇದುವರೆಗೂ ಕರಣ್ ಹೇಳಿಕೆ ತೆಗೆದುಕೊಂಡಿಲ್ಲ. ಧರ್ಮ ಪ್ರೊಡಕ್ಷನ್‌ ಸಿಇಒ ಅಪೂರ್ವ ಮೆಹ್ತಾ ಅವರು ತಮ್ಮ ಹೇಳಿಕೆ ಕೊಟ್ಟಿದ್ದಾರೆ.
undefined
ಆದಿತ್ಯ ಚೋಪ್ರಾ: ಯಶ್‌ ರಾಜ್‌ ಫಿಲ್ಮ್ಸ್ ಮುಖ್ಯಸ್ಥ ಆದಿತ್ಯ ಚೋಪ್ರಾ ಪಾನಿ ಸಿನಿಮಾಗೆ ಹೊರತಾಗಿ ಯಾವ ಸಂಬಂಧವೂ ಇಲ್ಲ ಎಂದಿದ್ದಾರೆ.
undefined
ಕೇಸರಿ ಚೌಡ: ಸುಶಾಂತ್ ಸೈಕ್ರ್ಟಿಯಾಟಿಸ್ಟ್ ಕೇಸರಿಚೌಡ, ಸುಶಾಂತ್ ಮೆಡಿಕೇಷನಲ್ಲಿದ್ದರು ಎಂದಿದ್ದಾರೆ.ಕೆಲವು ವರದಿಗಳು ಸುಶಾಂತ್‌ಗೆ ಬೈಪೊಲಾರ್ ಡಿಸಾರ್ಡರ್‌ ಇತ್ತು ಎಂದಿವೆ.
undefined
ಮಹೇಶ್ ಭಟ್‌: ಮಹೇಶ್ ಭಟ್‌ ಎರಡೇ ಬಾರಿ ಸುಶಾಂತ್‌ನನ್ನು ಭೇಟಿಯಾಗಿದ್ದಾರೆ ಎಂದು ತಿಳಿಸಿದ್ದಾರೆ. 2018 ಮತ್ತು 2020ರಲ್ಲಿ ಮಾತ್ರ ಭೇಟಿಯಾಗಿದ್ದೇನೆ ಎಂದಿದ್ದಾರೆ. ಇದಕ್ಕೆ ಹೊರತು ಪಡಿಸಿ ಔದ್ಯೋಗಿಕವಾಗಿ ಅಥವಾ ವೈಯಕ್ತಿಕವಾಗಿ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.
undefined
ಸಿದ್ಧಾರ್ಥ್ಪಿತನಿ: ಸಿದ್ಧಾರ್ಥ್‌ ಪಿತನಿ ಸುಶಾಂತ್‌ ಫ್ಲಾಟ್‌ ಮೇಟ್ ಆಗಿದ್ದ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಾಗಲು ಜೊತೆಗಿದ್ದಾತ ಈತನೇ. ರಿಯಾಗೆದುರಾಗಿ ಹೇಳಿಕೆ ನೀಡುವಂತೆ ಒತ್ತಡ ಬರುತ್ತಿದೆ ಎಂದು ಆತನ ಮುಂಬೈ ಪೊಲೀಸರಿಗೆ ಮೇಲ್ ಕಳುಹಿಸಿದ್ದ.
undefined
ಅಂಕಿತಾ ಲೋಖಂಡೆ: ಸುಶಾಂತ್ ಸಾವಿನ ನಂತರ ಅಂಕಿತಾ ಲೋಖಂಡೆ ಬಿಹಾರದ ಸುಶಾಂತ್ ಮನೆಗೆ ಭೇಟಿ ನೀಡಿದ್ದರು. ಮಣಿಕರ್ಣಿಕಾ ಸಿನಿಮಾ ರಿಲೀಸ್ ಸಂದರ್ಭ ಕರೆ ಮಾಡಿ ರಿಯಾ ಜೊತೆ ಖುಷಿಯಾಗಿಲ್ಲ ಎಂದಿದ್ದರು ಎಂದು ಅಂಕಿತಾ ತಿಳಿಸಿದ್ದಾರೆ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬುದನ್ನು ಒಪ್ಪುವುದಿಲ್ಲ ಎಂದು ಅವರು ಅರ್ನಾಬ್ ಶೋನಲ್ಲಿ ಬಹಿರಂಗವಾಗಿ ಹೇಳಿದ್ದರು.
undefined
ಬಾಡಿಗಾರ್ಡ್: ಸುಶಾಂತ್ ಅವರ ಬಾಡಿಗಾರ್ಡ್‌ಗಳನ್ನು ಪ್ರಶ್ನಿಸಲಾಗಿದೆ. ಯುರೋಪ್‌ ಟ್ರಿಪ್‌ನಿಂದ ಬಂದ ಮೇಲೆ ಸುಶಾಂತ್ ಹುಷಾರಿಲ್ಲದಂತಿದ್ದರು. ಸುಶಾಂತ್ ಹೆಚ್ಚು ಮಲಗಿಯೇ ಇರುತ್ತಿದ್ದರು. ರಿಯಾ ಪಾರ್ಟಿ ಮಾಡುತ್ತಿದ್ದರು. ಈ ಸಂದರ್ಭ ರಿಯಾ ಕುಟುಂಬಸ್ಥರೂ ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದರು ಎಂದಿದ್ದಾರೆ.
undefined
ಮಹೇಶ್ ಶೆಟ್ಟಿ: ಸುಶಾಂತ್ ಗೆಳೆಯ ಮಹೇಶ್ ಶೆಟ್ಟಿ ಹಲವು ಬಾರಿ ಮನೆಯವರೊಂದಿಗೆ ಮಾತನಾಡುವಂತೆ ಸುಶಾಂತ್‌ಗೆ ತಿಳಿಸಿದ್ದರು. ಆದರೆ ರಿಯಾ ಒಪ್ಪೋದಿಲ್ಲ ಎನ್ನುತ್ತಿದ್ದರು ಸುಶಾಂತ್. ರಿಯಾ ಸುಶಾಂತ್ ಫೋನನ್ನೂ ಚೆಕ್ ಮಾಡುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ.
undefined
ಸಂದೀಪ್ ಸಿಂಗ್: ಸಂದೀಪ್ ಸಿಂಗ್ ಹೇಳಿಕೆಯನ್ನು ಮಾತ್ರ ಮುಂಬೈ ಪೊಲೀಸರು ದಾಖಲಿಸಕೊಂಡಿಲ್ಲ. ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನಂಬುದಿಲ್ಲ ಎಂದೇ ಅವರು ಹೇಳಿದ್ದರು.
undefined
ಅನ್ಬ್ ಗೋಸ್ವಾಮಿ: ಸುಶಾಂತ್ ಸಾವಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಅರ್ನಬ್ ಸಿಕ್ಕಾಪಟ್ಟೆ ಶ್ರಮ ವಹಿಸುತ್ತಿದ್ದಾರೆ
undefined
click me!