ಸಲ್ಮಾನ್- ಆಲಿಯಾ.. ಬಾಲಿವುಡ್ ಸೆಲೆಬ್ರಿಟಿಗಳಿಗೆ ನಿರ್ದೇಶಕರ ದುಬಾರಿ ಉಡುಗೊರೆ

First Published | Aug 7, 2020, 5:31 PM IST

ನಿರ್ದೇಶಕರು ತಮ್ಮ ಸಿನಿಮಾಗಳು ಹಿಟ್‌ ಆದ  ಖುಷಿಗೆ ನಟ-ನಟಿಯರಿಗೆ ಗಿಫ್ಟ್‌ಗಳನ್ನು ನೀಡುವುದು ಸಿನಿಮಾರಂಗದಲ್ಲಿ ವಾಡಿಕೆ. ಹೀಗೆ ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳು ಪಡೆದ ದುಬಾರಿ ಉಡುಗೊರೆಗಳ ಬಗ್ಗೆ ಸುದ್ದಿ ಇಲ್ಲಿದೆ. ಇಂದು, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಅವರಿಂದ ಅಮಿತಾಬ್ ಬಚ್ಚನ್, ಆಲಿಯಾ ಭಟ್‌‌ವರೆಗೂ ಹಲವರು ತುಂಬಾ ಕಾಸ್ಟ್ಲಿ ಗಿಫ್ಟ್‌ಗಳನ್ನು ಸ್ವೀಕರಿಸಿದ್ದಾರೆ. 

ಸಲ್ಮಾನ್ ಖಾನ್‌ ಕೋಟ್ಯಂತರ ಬೆಲೆಯ ಕಾರುಗಳು, ಅಮಿತಾಬ್ ಬಚ್ಚನ್ಬಂಗಲೆ, ರಣವೀರ್ ಸಿಂಗ್ ಅಮೂಲ್ಯ ವಾಚ್ ಮುಂತಾದ ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ.
1982ರಲ್ಲಿ ಬಿಡುಗಡೆಯಾದ ಸತ್ತಾ ಸಿನಿಮಾ ಸೂಪರ್ ಹಿಟ್ ಆದ ಸಮಯದಲ್ಲಿ ನಿರ್ದೇಶಕ ರಮೇಶ್ ಸಿಪ್ಪಿಜಲ್ಸಾ ಬಂಗಲೆಯನ್ನು ಅಮಿತಾಬ್ ಬಚ್ಚನ್‌ಗೆ ಉಡುಗೊರೆಯಾಗಿ ನೀಡಿದರು. ಅಮಿತಾಬ್ ಇಂದಿಗೂ ಈ ಬಂಗಲೆಯಲ್ಲಿಯೇ ವಾಸಿಸುತ್ತಿದ್ದಾರೆ.
Tap to resize

ನಿರ್ದೇಶಕ ವಿಪುಲ್ ಷಾ ಅಕ್ಷಯ್ ಕುಮಾರ್‌ರಿಗೆ 18 ಲಕ್ಷ ರೂ.ಗಳ ವಿಂಟೇಜ್ ವಾಚ್ ಉಡುಗೊರೆಯಾಗಿ ನೀಡಿದ್ದಾರೆ.
ಆಲ್ ದಿ ಬೆಸ್ಟ್ ಚಿತ್ರದ ಶೂಟಿಂಗ್‌ ಸಮಯದಲ್ಲಿ ನಿರ್ದೇಶಕ ರೋಹಿತ್ ಶೆಟ್ಟಿಅಜಯ್ ದೇವಗನ್ ಜನ್ಮದಿನದಂದು ಸ್ಪೋರ್ಟ್ಸ್ ಕಾರ್ ಗಿಫ್ಟ್‌ ಮಾಡಿದ್ದರು.
ಕಿಕ್ ಸಿನಿಮಾ ಸೂಪರ್ ಹಿಟ್ ನಂತರ, ಸಾಜಿದ್ ನಾಡಿಯಾಡ್ವಾಲಾ ಸಲ್ಮಾನ್ ಖಾನ್ ಅವರಿಗೆ 3 ಕೋಟಿ ರೂ. ರಾಯಲ್ ಕಾರ್ ಉಡುಗೊರೆಯಾಗಿ ನೀಡಿದ್ದರು.
ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಆಲಿಯಾ ಭಟ್ ಜನ್ಮದಿನದಂದು ದುಬಾರಿ ಕ್ಲಚ್ನೀಡಿದರು.
ಸಿಂಬಾ ಚಿತ್ರೀಕರಣದ ವೇಳೆ ನಿರ್ದೇಶಕ ರೋಹಿತ್ ಶೆಟ್ಟಿ 8 ಲಕ್ಷ ರೂ ವಾಚ್‌ ಗಿಫ್ಟ್‌ ನೀಡಿದ್ದರು ರಣವೀರ್ ಸಿಂಗ್‌ಗೆ.
ಏಕಲವ್ಯ ಚಿತ್ರದ ಶೂಟಿಂಗ್ ನಂತರ ನಿರ್ದೇಶಕ ವಿಧು ವಿನೋದ್ ಚೋಪ್ರಾ ಅಮಿತಾಬ್‌ಗೆ ಫೀಸ್‌ ಬದಲು ಸಿಲ್ವರ್ ರೋಲ್ಸ್ ರಾಯ್ಸ್ ಫ್ಯಾಂಟಮ್ ಅನ್ನು ಉಡುಗೊರೆಯಾಗಿ ನೀಡಿದರು.

Latest Videos

click me!