ಅಟ್ಲೀ ಪತ್ನಿ ಸೀಮಂತದಲ್ಲಿ ಕಾಣಿಸಿಕೊಂಡ ವಿಜಯ್ ದಳಪತಿ; ಹೊಟ್ಟೆ ಕಾಣಿಸುತ್ತಿಲ್ಲ ಎಂದು ಕಾಲೆಳೆದ ನೆಟ್ಟಿಗರು

Published : Dec 20, 2022, 11:20 AM IST

ಮೊದಲ ಮಗುವಿನ ನಿರೀಕ್ಷೆಯಲ್ಲಿ ನಿರ್ದೇಶಕ ಅಟ್ಲೀ ಮತ್ತು ಪ್ರಿಯಾ. ಅದ್ಧೂರಿಯಾಗಿ ನಡೆದ ಸೀಮಂತದಲ್ಲಿ ಸ್ಟಾರ್ ನಟರು ಭಾಗಿ...

PREV
17
ಅಟ್ಲೀ ಪತ್ನಿ ಸೀಮಂತದಲ್ಲಿ ಕಾಣಿಸಿಕೊಂಡ ವಿಜಯ್ ದಳಪತಿ; ಹೊಟ್ಟೆ ಕಾಣಿಸುತ್ತಿಲ್ಲ ಎಂದು ಕಾಲೆಳೆದ ನೆಟ್ಟಿಗರು

ಸೌತ್ ಚಿತ್ರರಂಗದ ಖ್ಯಾತ ನಿರ್ದೇಶ  ಅಟ್ಲೀ ಕುಮಾರ್ ಮತ್ತು ಕೃಷ್ಣ ಪ್ರಿಯಾ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. 
 

27

ಕೃಷ್ಣ ಪ್ರಿಯಾ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತ್ತು. ತಮಿಳು ಮತ್ತು ತೆಲುಗು ಚಿತ್ರರಂಗದ ಸ್ಟಾರ್ ನಟ- ನಟಿಯರು, ನಿರ್ದೇಶಕರು ಮತ್ತು ನಿರ್ಮಾಪಕರು ಭಾಗಿಯಾಗಿದ್ದರು.
 

37

ಕಾರ್ಯಕ್ರಮ ಮುಖ್ಯ ಹೈಲೈಟ್ ಆಗಿದ್ದ ಸೆಲೆಬ್ರಿಟಿ ವಿಜಯ್ ದಳಪತಿ. ವಿಜಯ್ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋ ಹಂಚಿಕೊಂಡಿದ್ದಾರೆ. ಹೀಗಾಗಿ ಸೀಮಂತ ನಡೆಯಿತ್ತು ಅನ್ನೋ ವಿಚಾರ ಎಲ್ಲರಿಗೂ ತಿಳಿಯಿತ್ತು. 
 

47

ಸೀಮಂತದಲ್ಲಿ ಬಳಿ ಬಣ್ಣದ ಲೆಹೆಂಗಾದಲ್ಲಿ ಪ್ರಿಯಾ ಮಿಂಚಿದ್ದಾರೆ, ರೇಶ್ಮೆ ಪಂಚೆ ಮತ್ತು ಶಲ್ಯೆ ಧರಿಸಿ ಅಟ್ಲೀ ಕಾಣಿಸಿಕೊಂಡಿದ್ದಾರೆ. ವೇದಿಕೆಯನ್ನು ಶ್ವೇತ ಬಣ್ಣದ ಹೂಗಳಿಂದ ಅಲಂಕಾರ ಮಾಡಲಾಗಿತ್ತು.

57

'ನಮ್ಮ ಕುಟುಂಬ ದೊಡ್ಡದಾಗುತ್ತಿದೆ. ಗರ್ಭಿಣಿಯಾಗಿರುವ ವಿಚಾರ ಘೇಷಿಸಲು ಸಂತೋಷವಾಗುತ್ತಿದೆ. ನಿಮ್ಮೆಲ್ಲರ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲಿರಲಿ' ಎಂದು ಬರೆದುಕೊಳ್ಳುವ ಮೂಲಕ ಪೋಷಕರಾಗುತ್ತಿರುವ ವಿಚಾರ ರಿವೀಲ್ ಮಾಡಿದ್ದರು.

67

ಆಟ್ಲೀ ಮತ್ತು ಪ್ರಿಯಾ ಇಬ್ಬರೂ 2014ರಲ್ಲಿ ಮದುವೆಯಾದರು. 8 ವರ್ಷಗಳ ಬಳಿಕ ಅಟ್ಲೀ ಮತ್ತು ಪ್ರಿಯಾ ದಂಪತಿ ಗುಡ್ ನ್ಯೂಸ್ ನೀಡಿದ್ದು ತಂದೆ-ತಾಯಿ ಆಗುತ್ತಿದ್ದಾರೆ. ಈ ಬಗ್ಗೆ ದೀರ್ಘವಾದ ಪೋಸ್ಟ್ ಶೇರ್ ಮಾಡಿದ್ದಾರೆ.

77

 'ನೀವು ವರ್ಷಗಳಿಂದ ನಮ್ಮ ಮೇಲೆ ತೋರಿದ ಎಲ್ಲಾ ಪ್ರೀತಿ ಮತ್ತು ಬೆಂಬಲಕ್ಕೆ ನಾವು ಕೃತಜ್ಞರಾಗಿರುತ್ತೇವೆ. ನಮ್ಮ ಚಿಕ್ಕ ಮಗುವಿಗೂ ನಿಮ್ಮ ಪ್ರೀತಿಯನ್ನು ಮುಂದುವರಿಸಬೇಕೆಂದು ನಾವು ಬಯಸುತ್ತೇವೆ. ನಿಮ್ಮೆಲ್ಲರ ಆಶೀರ್ವಾದದೊಂದಿಗೆ ನಾವು ಈ ಪುಟ್ಟ ಕಂದನನ್ನು ಸ್ವಾಗತಿಸಲು ಕಾಯುತ್ತಿದ್ದೀವಿ' ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories