ನೀತಾ ಎಂದಿಗೂ ಪಾದರಕ್ಷೆ ರಿಪೀಟ್ ಮಾಡಲ್ಲ! ಅಂಬಾನಿ ಕುಟುಂಬದ ಕೆಲ ವಿಲಕ್ಷಣ ಅಭ್ಯಾಸಗಳಿವು..

Published : Mar 15, 2024, 02:01 PM ISTUpdated : Mar 15, 2024, 02:16 PM IST

ಅನಂತ್ ಅಂಬಾನಿಯ ಪ್ರಿ ವೆಡ್ಡಿಂಗ್ ಕಾರ್ಯಕ್ರಮಗಳಾದಾಗಿನಿಂದಲೂ ಅಂಬಾನಿ ಕುಟುಂಬದ ಪ್ರತಿ ವಿಷಯವೂ ದೊಡ್ಡ ಮಟ್ಟದ ಗಮನ ಸೆಳೆಯುತ್ತಿದೆ. ಅಂದ ಹಾಗೆ ಈ ಕುಟುಂಬದ ಕೆಲ ವಿಶೇಷ ಹಾಗೂ ಕೆಲ ವಿಲಕ್ಷಣ ಅಭ್ಯಾಸಗಳು ಹೇಗಿವೆ ಗೊತ್ತಾ?

PREV
111
ನೀತಾ ಎಂದಿಗೂ ಪಾದರಕ್ಷೆ ರಿಪೀಟ್ ಮಾಡಲ್ಲ! ಅಂಬಾನಿ ಕುಟುಂಬದ ಕೆಲ ವಿಲಕ್ಷಣ ಅಭ್ಯಾಸಗಳಿವು..
ambani family

ಶ್ರೀಮಂತ ಕುಟುಂಬ, ಮಧ್ಯಮವರ್ಗಗಳಲ್ಲಿ ಜಗಳಗಳು ಜಾಸ್ತಿ. ಆದರೆ, ಎಲ್ಲ ಶ್ರೀಮಂತಿಕೆಯ ನಡುವೆಯೂ ಕೌಟುಂಬಿಕ ಮೌಲ್ಯವನ್ನು ಅರಿತು- ಇಡೀ ಕುಟುಂಬವನ್ನು ಒಟ್ಟಾಗಿ ನಡೆಸಿಕೊಂಡು ಹೋಗುತ್ತಿದೆ ಭಾರತದ ಅತಿ ಶ್ರೀಮಂತ ಅಂಬಾನಿ ಕುಟುಂಬ. 

211

ಬಿಲಿಯನೇರ್ ಭಾರತೀಯ ಉದ್ಯಮಿ ಮುಕೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಮತ್ತು ಕುಟುಂಬವು ಅವರ ಅನೇಕ ಅಭಿಮಾನಿಗಳಿಗೆ ತಿಳಿದಿಲ್ಲದ ಕೆಲವು ಆಶ್ಚರ್ಯಕರ ಅಭ್ಯಾಸಗಳನ್ನು ಹೊಂದಿದ್ದಾರೆ. ಅವೇನೆಂದು ನೋಡೋಣ.

311

ಮುಕೇಶ್ ಅಂಬಾನಿಯ ಪತ್ನಿ ನೀತಾ ಅಂಬಾನಿಯ ಒಮ್ಮೆ ಧರಿಸಿದ ಪಾದರಕ್ಷೆಯನ್ನು ಮತ್ತೆ ಧರಿಸುವುದಿಲ್ಲ. ಆಕೆ ಸ್ವಭಾವತಃ ಗತ್ತು, ಶ್ರೀಮಂತಿಕೆಯ ಅಹಂ ತೋರದಿದ್ದರೂ, ಪಾದರಕ್ಷೆಯ ವಿಷಯವಾಗಿ ಇದೊಂದು ಮೋಹ ಅವರಿಗಿದೆ. 

411
Ambani family

ಇನ್ನು ಮುಕೇಶ್ ಅಂಬಾನಿ ಕೂಡಾ ಕುಟುಂಬದ ವ್ಯಕ್ತಿ. ಎಷ್ಟೇ ಉದ್ಮದ ಟೆನ್ಷನ್ ಇರಲಿ, ಭಾನುವಾರವನ್ನು ಮನೆಯಲ್ಲೇ ಇದ್ದು ಮನೆಯವರ ಜೊತೆ ಕಳೆಯುವುದು ಅವರಿಗಿಷ್ಟ. ಬೆಳಗ್ಗೆ ತಾಯಿಯೊಡನೆ ಸಮಯ ಕಳೆದರೆ ಸಂಜೆ ಪತ್ನಿ ಬಳಿ ಕಚೇರಿಯ ವಿಷಯಗಳನ್ನೆಲ್ಲ ಮಾತನಾಡಿಯೇ ಮಲಗುತ್ತಾರಂತೆ.

511

ಅಷ್ಟಾದರೂ ಮುಕೇಶ್ ಅಂಬಾನಿಗೂ ಪತ್ನಿಯ ಚಪ್ಪಲಿ ಮೋಹದಂತೆ ಮತ್ತೊಂದು ಕ್ರೇಜ್ ಇದೆ. ಅದೇ ಕಾರುಗಳದ್ದು. ಅವರ ಬಳಿ 170ಕ್ಕೂ ಅಧಿಕ ಐಶಾರಾಮಿ ಕಾರುಗಳಿವೆ. 

611

ಮಗಳು ಇಶಾ ಅಂಬಾನಿಯ ವಿಷಯಕ್ಕೆ ಬಂದರೆ ಆಕೆಗೆ ಪಾರ್ಟಿ ಮಾಡುವುದರಲ್ಲಿ ಎಲ್ಲಿಲ್ಲದ ಉತ್ಸಾಹ. ಮೊದಲು ಬಟ್ಟೆಗಳನ್ನು ಪುನರಾವರ್ತಿಸುತ್ತಿರಲಿಲ್ಲ. ಆದರೆ, ಅತ್ತಿಗೆ ಶ್ಲೋಕಾ ಹೇಳಿಕೊಟ್ಟ ಮೇಲೆ ಕೆಲ ಬಟ್ಟೆಗಳನ್ನು ಪುನರಾವರ್ತಿಸಿ ಧರಿಸುವುದನ್ನು ಇಶಾ ಅಭ್ಯಾಸ ಮಾಡಿಕೊಂಡಿದ್ದಾರೆ. 

711

ಮುಖೇಶ್ ಅಂಬಾನಿಯ ಸಂಪೂರ್ಣ ಕುಟುಂಬ ಪೂರ್ಣ ಸಸ್ಯಾಹಾರಿ ಆಹಾರವನ್ನು ಸೇವಿಸುತ್ತಾರೆ. ಇದರಲ್ಲಿ ನೀತಾ ಅಂಬಾನಿ ಮತ್ತು ಆಕಾಶ್ ಅಂಬಾನಿ ಡಯಟ್ ಆಹಾರಕ್ಕೆ ಹೆಚ್ಚು ಆದ್ಯತೆ ಕೊಡುತ್ತಾರೆ. 

811

ಅಂಬಾನಿ ಕುಟುಂಬದಲ್ಲಿ ತಂದೆ ತಾಯಿ ಮಕ್ಕಳು, ಸೊಸೆ, ಅಳಿಯ ಮುಂತಾದವರು ಎಷ್ಟೇ ಬ್ಯುಸಿ ಇರಲಿ, ರಾತ್ರಿಯ ಊಟಕ್ಕಾಗಿ ಎಲ್ಲರೂ ಒಟ್ಟಿಗೇ ಸೇರುತ್ತಾರೆ. ಜೊತೆಯಲ್ಲೇ ಕುಳಿತು ಊಟ ಸವಿಯುತ್ತಾರೆ. 

911

ತನ್ನ ಹೆಂಡತಿಯನ್ನು ಅತಿಯಾಗಿ ಪ್ರೀತಿಸುವ ಮುಖೇಶ್ ಅಂಬಾನಿ, ಈಗಲೂ ಪತ್ನಿಯೊಡನೆ ಡೇಟಿಂಗ್ ಪ್ಲ್ಯಾನ್ ಮಾಡುತ್ತಲೇ ಇರುತ್ತಾರೆ. ಅವರು ಸ್ಟ್ರೀಟ್ ಫುಡ್ಡನ್ನು ಕೂಡಾ ಜೊತೆಯಾಗಿ ಆನಂದಿಸುತ್ತಾರೆ. 

1011

ಮುಖೇಶ್ ಅಂಬಾನಿಯ ಮಕ್ಕಳಾದ ಆಕಾಶ್, ಅನಂತ್ ಹಾಗೂ ಇಶಾ ಯಾವುದೇ ಸಾಮಾಜಿಕ ತಾಣದಲ್ಲಿ ಅಧಿಕೃತ ಖಾತೆ ಹೊಂದಿಲ್ಲ. ಆದರೆ ರಹಸ್ಯವಾಗಿ ತಮ್ಮ ಖಾತೆ ಹೊಂದಿದ್ದು, ಸೋಷ್ಯಲ್ ಮೀಡಿಯಾ ಪೋಸ್ಟ್ ನೋಡುತ್ತಾರಂತೆ. 

1111

ನೀತಾ ಅಂಬಾನಿ ಮಕ್ಕಳಿಗೆ ಒಂದೊಂದು ರುಪಾಯಿ ಹಣದ ಬೆಲೆಯನ್ನೂ ಹೇಳಿಕೊಟ್ಟಿದ್ದಾರಂತೆ. ಅವರು ಬಹಳ ದೊಡ್ಡ ಆಗುವವರೆಗೂ ದಿನಕ್ಕೆ 5 ರೂ. ಪಾಕೆಟ್ ಮನಿ ನೀಡಿ, ಅದರಲ್ಲೇ ಬೇಕಾದ್ದು ಕೊಳ್ಳಲು ಹೇಳುತ್ತಿದ್ದರಂತೆ. 

Read more Photos on
click me!

Recommended Stories