ರೆಡ್ ಡ್ರೆಸ್‌ನಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಸಖತ್ ಹಾಟ್: ರಾ.. ರಾ.. ರಕ್ಕಮ್ಮ.. ನೀ ತುಂಬಾ ಕ್ಯೂಟಮ್ಮಾ ಎಂದ ಫ್ಯಾನ್ಸ್‌

First Published | Mar 15, 2024, 11:05 AM IST

ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ. ಸುಂದರಿ ಸೌಂದರ್ಯ ಕಂಡ ಬಾಯ್ಸ್‌ ರಾ.. ರಾ.. ರಕ್ಕಮ್ಮ.. ನೀ ತುಂಬಾ ಕ್ಯೂಟಮ್ಮಾ ಅಂತ ಹಾಡು ಹಾಡುತ್ತಿದ್ದಾರೆ.

ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಯಾವುದೇ ಉಡುಗೆ ಧರಿಸಿದರೂ ತುಂಬಾ ಸ್ಟೈಲಿಶ್‌ ಆಗಿ ಕಾಣಿಸುತ್ತಾರೆ. ಇತ್ತೀಚೆಗೆ ಶೇರ್ ಮಾಡಿರುವ ಫೋಟೋಗಳು ಸಖತ್‌ ವೈರಲ್‌ ಆಗಿವೆ.  

ಜಾಕ್ವೆಲಿನ್ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರೆಡ್ ಡ್ರೆಸ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರು ಸ್ಯಾಂಡಲ್‌ವುಡ್‌ನ ಕಿಚ್ಚ ಸುದೀಪ್‌ ಜತೆಗೆ ವಿಕ್ರಾಂತ್‌ ರೋಣದಲ್ಲಿ ನಟಿಸಿದ್ದರು.

Tap to resize

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಜಾಕ್ವೆಲಿನ್ ಆಗಾಗ ಫೋಟೋಸ್‌ ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯನ್ನು ಹೆಚ್ಚಿಸುತ್ತಲೇ ಇರುತ್ತಾರೆ. 

ಹಾಟ್ ಸುಂದರಿಯ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದು ಬಂದಿದೆ. ಜಾಕ್ವೆಲಿನ್ ಫೋಟೋ ಶೇರ್ ಮಾಡಿ ಕೆಲವೇ ಕ್ಷಣಕ್ಕೆ ಸಿಕ್ಕಾಪಟ್ಟೆ ಲೈಕ್ಸ್ ಬಂದಿದೆ. 

ಜಾಕ್ವೆಲಿನ್ ಫೆರ್ನಾಂಡಿಸ್ 2009 ರ 'ಅಲ್ಲಾದ್ದೀನ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಜೊತೆಗೆ ಹೌಸ್ ಪುಲ್ 2 ಮತ್ತು ರೇಸ್ 2 ಚಿತ್ರಗಳಲ್ಲಿ ನಟಿಸಿ ಉತ್ತಮ ಮನ್ನಣೆ ಪಡೆದರು.

ಜಾಕ್ವೆಲಿನ್ ಹುಟ್ಟಿ ಬೆಳೆದದ್ದು ಬಹ್ರೇನ್‌ನಲ್ಲಿ. ನಂತರ ಅವರು ಶ್ರೀಲಂಕಾದಲ್ಲಿ ಟಿವಿ ವರದಿಗಾರರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು.2006 ರಲ್ಲಿ ಮಿಸ್ ಯೂನಿವರ್ಸ್ ಶ್ರೀಲಂಕಾ ಕಿರೀಟವನ್ನು ಗೆದ್ದರು. ಸದ್ಯ ಬಾಲಿವುಡ್‌ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ.      

ಜಾಕ್ವೆಲಿನ್ ಮುಂದಿನ ಸಿನಿಮಾ ಬಗ್ಗೆ ಹೇಳುವುದಾದ್ರೆ. ಅಕ್ಷಯ್ ಕುಮಾರ್ ಜೊತೆ ‘ವೆಲ್‌ಕಮ್ ಟು ಜಂಗಲ್’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಅವರು ‘ಫತೇ’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಜಾಕ್ವೆಲಿನ್ ಇತ್ತೀಚಿಗೆ ಅಕ್ಷಯ್ ಕುಮಾರ್ ಅಭಿನಯದ ‘ಸೆಲ್ಫಿ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ನಟಿ ಒಂದು ಹಾಡಿನಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 

Latest Videos

click me!