ತೆಲುಗು ನಟ ಪ್ರಭಾಸ್‌ಗೆ ₹1000 ಕೋಟಿ ಸಂಭಾವನೆ ಕೊಡುತ್ತಿದೆಯೇ ಕನ್ನಡದ ಹೊಂಬಾಳೆ ಪಿಲಂಸ್?

First Published | Nov 8, 2024, 8:23 PM IST

ಕರ್ನಾಟಕದ ಮೂಲದ ಹೋಂಬಾಳೆ ಫಿಲ್ಮ್ಸ್ ತೆಲುಗು ಸ್ಟಾರ್ ನಟ ಪ್ರಭಾಸ್ ಜೊತೆ ಸತತ ಮೂರು ಸಿನಿಮಾಗಳನ್ನು ನಿರ್ಮಿಸಲಿದೆ. ಮುಂದಿನ 2028ರವರೆಗೆ ಮೂರು ಸಿನಿಮಾಗಳಲ್ಲಿ ನಟಿಸುವುದಾಗಿ ಪ್ರಭಾಸ್ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ. ಆದರೆ, ಈ ಮೂರು ಸಿನಿಮಾಗಳಿಗೆ ಪ್ರಭಾಸ್‌ಗೆ ಸುಮಾರು ₹1000 ಕೋಟಿ ಸಂಭಾವನೆ ನೀಡಲಾಗುವುದು ಎಂಬ ಮಾಹಿತಿ ಹರಿದಾಡುತ್ತಿದೆ. ಇದು ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ದೊಡ್ಡ ಸದ್ದು ಮಾಡುತ್ತಿದೆ...

ಪ್ರಭಾಸ್, ಹೊಂಬಾಳೆ ಫಿಲ್ಮ್ಸ್ ಜೊತೆ ಒಪ್ಪಂದ

ಪ್ರಭಾಸ್ ನಂತಹ ಪ್ಯಾನ್ ಇಂಡಿಯಾ ಸ್ಟಾರ್ ಜೊತೆ ಸಿನಿಮಾ ಮಾಡಬೇಕೆಂಬ ಆಸೆ ಪ್ರತಿ ನಿರ್ಮಾಣ ಸಂಸ್ಥೆಗೂ ಇರುತ್ತದೆ. ಆದರೆ ಆ ಅವಕಾಶ ಕೆಲವರಿಗೆ ಮಾತ್ರ ಸಿಗುತ್ತದೆ. ಅಂತಹ ಅದ್ಭುತ ಅವಕಾಶವನ್ನು ಕನ್ನಡ ಹೊಂಬಾಳೆ ಪ್ರೊಡಕ್ಷನ್ ಹೌಸ್ ಪಡೆದುಕೊಂಡಿದೆ. ಸತತ ಮೂರು ಸಿನಿಮಾಗಳಿಗೆ ಪ್ರಭಾಸ್‌ರನ್ನು ಒಪ್ಪಿಸಿ, ಅವರ ಒಪ್ಪಿಗೆ ಪಡೆದುಕೊಂಡಿದೆ.

ಇದರಿಂದಾಗಿ ಈಗ ತೆಲುಗು ಮತ್ತು ಕನ್ನಡದಲ್ಲಿ ಹೊಂಬಾಳೆ ಟಾಪ್ ಪ್ರೊಡಕ್ಷನ್ ಹೌಸ್ ಆಗಿ ಹೊರಹೊಮ್ಮಲಿದೆ. ಈ ಹಿನ್ನೆಲೆಯಲ್ಲಿ ಪ್ರಭಾಸ್‌ಗೆ ಎಷ್ಟು ಸಂಭಾವನೆ ನೀಡಲಾಗುವುದು, ಯಾವ ನಿರ್ದೇಶಕರು ಆ 3 ಸಿನಿಮಾಗಳನ್ನು ನಿರ್ದೇಶಿಸಲಿದ್ದಾರೆ ಎಂಬುದು ಭಾರೀ ಕುತೂಹಲ ಕೆರಳಿಸಿದೆ.

ಹೊಂಬಾಳೆ ಫಿಲ್ಮ್ಸ್‌ನ ಯಶಸ್ಸಿನ ಪಯಣ

ಕರ್ನಾಟಕ ಸೇರಿದಂತೆ ದೇಶದಲ್ಲಿ ಪ್ರಾರಂಭದಿಂದಲೂ ವಿಭಿನ್ನ ಕಥೆಗಳೊಂದಿಗೆ ಪ್ರೇಕ್ಷಕರನ್ನು ರಂಜಿಸಬೇಕೆಂಬ ಗುರಿಯೊಂದಿಗೆ ವಿಜಯ್ ಕಿರಂಗದೂರ್ ‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದರು. ಪುನೀತ್ ರಾಜ್‌ಕುಮಾರ್ ನಟಿಸಿದ್ದ ‘ನಿನ್ನಿಂದಲೇ’ ಚಿತ್ರದೊಂದಿಗೆ ವಿಜಯ್ ಅವರ ನಿರ್ಮಾಣ ಪಯಣ ಆರಂಭವಾಯಿತು.

2018 ರಲ್ಲಿ ಬಿಡುಗಡೆಯಾದ ‘ಕೆಜಿಎಫ್’ ಈ ಸಂಸ್ಥೆಗೆ ಖ್ಯಾತಿಯನ್ನು ತಂದುಕೊಟ್ಟಿತು. ಇದರ ನಂತರ ‘ಕಾಂತಾರ’, ‘ಸಲಾರ್ ಸೀಜ್ ಫೈರ್’ ನಂತಹ ಚಿತ್ರಗಳು ಈ ಬ್ಯಾನರ್‌ನಲ್ಲಿ ನಿರ್ಮಾಣಗೊಂಡು ಭರ್ಜರಿ ಯಶಸ್ಸನ್ನು ಗಳಿಸಿವೆ.

Tap to resize

ಪ್ರಭಾಸ್ ಜೊತೆ ಮೂರು ಚಿತ್ರಗಳ ಒಪ್ಪಂದ

‘ಕೆಜಿಎಫ್’, ‘ಕಾಂತಾರ’, ‘ಸಲಾರ್’ ಚಿತ್ರಗಳನ್ನು ನಿರ್ಮಿಸಿದ ಹೊಂಬಾಳೆ ಫಿಲ್ಮ್ಸ್ ಇದೀಗ ಪ್ರಭಾಸ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಪ್ರಭಾಸ್ ಜೊತೆ 3 ಸಿನಿಮಾಗಳನ್ನು ನಿರ್ಮಿಸುವುದಾಗಿ ಘೋಷಿಸಿದೆ. ಭಾರತೀಯ ಸಿನಿಮಾವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವಂತಹ ಯೋಜನೆಗಳಿವು ಎಂದು ತಿಳಿಸಿದೆ. ಇದಲ್ಲದೆ, ಹಿಂದೆಂದೂ ಕಾಣದ ಸಿನಿಮಾಟಿಕ್ ಅನುಭವ ನೀಡಲಿದೆ ಎಂದು ಹೇಳಿದೆ.

ಹೊಂಬಾಳೆ ಫಿಲ್ಮ್ಸ್ ಹೇಳಿಕೆ

'ಭಾರತೀಯ ಸಿನಿಮಾದ ಖ್ಯಾತಿಯನ್ನು ವಿಶ್ವದಾದ್ಯಂತ ಹರಡುವಂತೆ ಮೂರು ಚಿತ್ರಗಳ ಒಪ್ಪಂದದಲ್ಲಿ ಪ್ರಭಾಸ್ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ. ಎಂದಿಗೂ ಮರೆಯಲಾಗದ ಸಿನಿಮಾಟಿಕ್ ಅನುಭವ ಸೃಷ್ಟಿಸುವ ನಮ್ಮ ಬದ್ಧತೆಗೆ ಸಂಬಂಧಿಸಿದ ಘೋಷಣೆ ಇದು. ಸಿನಿಮಾಗೆ ವೇದಿಕೆ ಸಿದ್ಧವಾಗಿದೆ. ಮುಂದೆ ಸಾಗುವ ದಾರಿಯು ಅಪರಿಮಿತವಾಗಿದೆ. #Salaar2 ಚಿತ್ರದೊಂದಿಗೆ ಈ ಪಯಣ ಆರಂಭವಾಗಲಿದೆ. ಹಾಗಾಗಿ ಸಿದ್ಧರಾಗಿರಿ' ಎಂದು ಹೊಂಬಾಳೆ ಪಿಲ್ಮ್ಸ್‌ ತಿಳಿಸಿದೆ.  
 

ಹೊಂಬಾಳೆ ಪ್ರಭಾಸ್‌ ಒಪ್ಪಂದ

ಇನ್ನು ಪ್ರಭಾಸ್ ಮತ್ತು ಹೊಂಬಾಳೆ ನಡುವಿನ ಒಪ್ಪಂದಕ್ಕೆ ‘ದಿ ಹೋಂಬಾಳೆ ಈಸ್ ಕಾಲಿಂಗ್ ಪ್ರಭಾಸ್’ ಎಂದು ಹೇಳಿದೆ. 2026, 2027, 2028ರಲ್ಲಿ ಈ ಚಿತ್ರಗಳು ಬರಲಿವೆ ಎಂದು ಹೇಳಿದೆ. ‘ಸಲಾರ್ 2’ ಹೊರತುಪಡಿಸಿ ಉಳಿದ ಯೋಜನೆಗಳೇನೆಂಬುದನ್ನು ನಿರ್ಮಾಣ ಸಂಸ್ಥೆ ತಿಳಿಸಿಲ್ಲ. ಮತ್ತೊಂದೆಡೆ, ಈ ಬಗ್ಗೆ ಪ್ರಭಾಸ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

 ಕಳೆದ ವರ್ಷ ಬಿಡುಗಡೆಯಾದ ‘ಸಲಾರ್’ ಚಿತ್ರಕ್ಕಾಗಿ ಪ್ರಭಾಸ್ ಮೊದಲ ಬಾರಿಗೆ ಈ ನಿರ್ಮಾಣ ಸಂಸ್ಥೆಯೊಂದಿಗೆ ಕೆಲಸ ಮಾಡಿದ್ದರು. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರಕ್ಕೆ ಮುಂದುವರಿದ ಭಾಗವಾಗಿ ‘ಸಲಾರ್ ಶೌರ್ಯಂ ಪರ್ವ’ ತೆರೆಗೆ ಬರಲಿದೆ.  

ಪ್ರಭಾಸ್ ಸಂಭಾವನೆ ₹1000 ಕೋಟಿ

ಇನ್ನು ಕನ್ನಡದ ಹೊಂಬಾಳೆ ಸಂಸ್ಥೆಯು ನಟ ಪ್ರಭಾಸ್‌ಗೆ ಮೂರು ಸಿನಿಮಾಗಳಿಗೆ ಎಷ್ಟು ಸಂಭಾವನೆ ನೀಡಲಾಗುತ್ತಿದೆ ಎಂಬುದು ಸಿನಿ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಮೂಲಗಳ ಪ್ರಕಾರ, ಈ ಮೂರು ಸಿನಿಮಾಗಳಿಗೆ ಸುಮಾರು ₹1000 ಕೋಟಿ ಪ್ಯಾಕೇಜ್ ಆಗಿ ಪ್ರಭಾಸ್‌ಗೆ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಆದರೆ, ಮೂರು ಸಿನಿಮಾಗಳಿಗೆ ಒಂದೇ ಸಂಭಾವನೆ ಅಲ್ಲ ಎನ್ನಲಾಗಿದೆ. ಮೊದಲ ಸಿನಿಮಾದ ಸಂಭಾವನೆಯ ಎರಡು ಪಟ್ಟು ಎರಡನೇ ಸಿನಿಮಾಕ್ಕೆ, ಎರಡನೇ ಸಿನಿಮಾದ ಎರಡು ಪಟ್ಟು ಮೂರನೇ ಸಿನಿಮಾಕ್ಕೆ ನೀಡಲಾಗುವುದು (ಉದಾಹರಣೆಗೆ ಮೊದಲ ಸಿನಿಮಾಗೆ 200 ಕೋಟಿ ರೂ. ಕೊಟ್ಟರೆ, 2ನೇ ಸಿನಿಮಾಗೆ 400 ಕೋಟಿ ರೂ. ಇನ್ನು ಮೂರನೇ ಸಿನಿಮಾಗೆ 600 ಕೋಟಿ ರೂ.) ಎಂದು ಹೇಳಲಾಗುತ್ತಿದೆ. ಒಟ್ಟಾರೆಯಾಗಿ ₹1000 ಕೋಟಿ ಎಂದು ತಿಳಿದುಬಂದಿದೆ. ಪ್ರಭಾಸ್ ಅವರ ಸಂಭಾವನೆ ಸದಾ ಹೆಚ್ಚುತ್ತಲೇ ಇರುತ್ತದೆ. ಅದನ್ನು ಗಮನದಲ್ಲಿಟ್ಟುಕೊಂಡು ಲೆಕ್ಕ ಹಾಕಿ ನೀಡಲಾಗುತ್ತಿದೆ ಎನ್ನಲಾಗಿದೆ. ಮುಂಗಡವಾಗಿ ₹200 ಕೋಟಿವರೆಗೂ ಪಾವತಿಸಲಾಗುವುದು ಎನ್ನಲಾಗಿದೆ.

ಸೂಚನೆ: ಈ ಬಗ್ಗೆ ನಟ ಪ್ರಭಾಸ್ ಅವರಾಗಲೀ, ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯಿಂದಾಗಲೀ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಪ್ರಭಾಸ್ ಜೊತೆ 3 ಚಿತ್ರಗಳ ಒಪ್ಪಂದ

ಈ ಮೂರು ಸಿನಿಮಾಗಳ ಪೈಕಿ ಮೊದಲೆರೆಡು ಸಿನಿಮಾಗಳಿಗೆ ಪ್ರಶಾಂತ್ ನೀಲ್ ಮತ್ತು ಲೋಕೇಶ್ ಕನಕರಾಜ್ ನಿರ್ದೇಶಕರು ಎಂದು ಹೇಳಲಾಗುತ್ತಿದೆ. ಮೂರನೇಸಿನಿಮಾದ ನಿರ್ದೇಶಕರು ಯಾರೆಂಬುದು ಇನ್ನೂ ತಿಳಿದುಬರಬೇಕಿದೆ. ಆದಿಪುರುಷ್ ನಿರ್ದೇಶಕ ಓಂ ರಾವತ್ ಒಂದು ಐತಿಹಾಸಿಕ ಕಥೆಯೊಂದಿಗೆ ಪ್ರಭಾಸ್ ಮೂಲಕ ಈ ಸಂಸ್ಥೆಯನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ.

ಒಪ್ಪಂದ ಅಂತಿಮವಾಗಿದೆಯೇ ಇಲ್ಲವೇ ಎಂಬುದು ತಿಳಿದುಬರಬೇಕಿದೆ. ಇನ್ನೂ ಸಮಯ ಇರುವುದರಿಂದ, ಪ್ರಸ್ತುತ ನಿರ್ದೇಶಕರು ತಮ್ಮ ಕಥೆಗಳನ್ನು ಸ್ಕ್ರಿಪ್ಟ್ ರೂಪದಲ್ಲಿ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಮೂರು ಸಿನಿಮಾಗಳು ಮೂರು ವಿಭಿನ್ನ ಕಥೆಗಳು ಎಂದು ಹೇಳಲಾಗುತ್ತಿದೆ.

Latest Videos

click me!