ಗುಡ್ ನ್ಯೂಸ್ ನೀಡಿದ ಕೆಎಲ್ ರಾಹುಲ್-ಅಥಿಯಾ, ಹೊಸ ವರ್ಷಕ್ಕೆ ಮೊದಲ ಮಗುವಿನ ನಿರೀಕ್ಷೆ!

First Published | Nov 8, 2024, 6:41 PM IST

ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಜೋಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. 2025ರ ಹೊಸ ವರ್ಷಕ್ಕೆ ಈ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 

ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಸದ್ಯ ಆಸ್ಟ್ರೇಲಿಯಾ ವಿರುದ್ಧ ಭಾರತ ಎ ತಂಡದಲ್ಲಿ ಆಡುತ್ತಿದ್ದಾರೆ. ಇದರ ನಡುವೆ ಕೆಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಜೋಡಿ ಗುಡ್ ನ್ಯೂಸ್ ನೀಡಿದೆ. ಹೌದು, ಈ ಸೆಲೆಬ್ರೆಟಿ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದೆ. ಹೊಸ ವರ್ಷಕ್ಕೆ ಹೊಸ ಅತಿಥಿಯ ಆಗಮನಕ್ಕೆ ಈ ಜೋಡಿ ಸಜ್ಜಾಗಿದೆ.

ಅಥಿಯಾ ಶೆಟ್ಟಿ ಇನ್‌ಸ್ಟಾಗ್ರಾಂ ಮೂಲಕ ಮೊದಲ ಮಗುವಿನ ನಿರೀಕ್ಷೆಯನ್ನು ಅಧಿಕೃತಗೊಳಿಸಿದ್ದಾರೆ. ಈ ಕುರಿತು ಪೋಸ್ಟ್ ಹಾಕಿರುವ ಅಥಿಯಾ ಶೆಟ್ಟಿ 2025ಕ್ಕೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಧಿಕೃತ ಮಾಹಿತಿ ಹೊರಬೀಳುತ್ತಿದ್ದಂತೆ ಬಾಲಿವುಡ್ ಸೆಲೆಬ್ರೆಟಿಗಳು, ಟೀಂ ಇಂಡಿಯಾ ಕ್ರಿಕೆಟಿಗರು ಶುಭಕೋರಿದ್ದಾರೆ.

Tap to resize

2023ರಲ್ಲಿ ಕೆಎಲ್ ರಾಹುಲ್, ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 2019ರಲ್ಲಿ ಕೆಎಲ್ ರಾಹುಲ್ ಹಾಗೂ ಅಥಿಯಾ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಮ್ಯೂಚ್ಯುವಲ್ ಫ್ರೆಂಡ್ ಮೂಲಕ ಇವರ ರಿಲೇಶನ್‌ಶಿಪ್ ಆರಂಭಗೊಂಡಿತ್ತು.

2019ರಿಂದ ರಿಲೇಶನ್‌ಶಿಪ್ ರಹಸ್ಯವಾಗಿ ಸಾಗಿತ್ತು. ಡಿಸೆಂಬರ್ ತಿಂಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಡೇಟಿಂಗ್ ಸುದ್ದಿಗೆ ಪುಷ್ಠಿ ನೀಡಿತ್ತು. ಬಳಿಕ ಥಾಯ್ಲೆಂಡ್‌ನಲ್ಲಿ ಹೊಸ ವರ್ಷ ಆಚರಣೆ, ಫಿಲ್ಮ್‌ಫೇರ್‌ನಲ್ಲಿ ಜೊತೆಯಾಗಿ ಕಾಣಿಸಿಕೊಂಡು ಡೇಟಿಂಗ್ ಕುತೂಹಲಕ್ಕೆ ಉತ್ತರ ನೀಡಿದ್ದರು. ಇನ್ನು 2021ರಲ್ಲಿ ಕೆಎಲ್ ರಾಹುಲ್ ತಮ್ಮ ರಿಲೇಶನ್‌ಶಿಪ್ ಅಧಿಕೃತವಾಗಿ ಘೋಷಿಸಿದ್ದರು.
 

 ರಾಹುಲ್ ಹಾಗೂ ಅಥಿಯಾ ಶೆಟ್ಟಿ ಮದುವೆ ಸುನಿಲ್ ಶೆಟ್ಟಿಯ ಮಹಾರಾಷ್ಟ್ರದ ಖಂಡಲಾದಲ್ಲಿರುವ ಫಾರ್ಮ್ ಹೌಸ್‌ನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಇದೀಗ ಈ ಜೋಡಿ ಪೋಷಕರಾಗುತ್ತಿದ್ದಾರೆ. ಇತ್ತ ಅಭಿಮಾನಿಗಳು ಕೆಎಲ್ ರಾಹುಲ್ ಹಾಗೂ ಅಥಿಯಾಗೆ ಶುಭ ಕೋರಿದ್ದಾರೆ. 

Latest Videos

click me!