NTRಗೆ ಬೆಳಗ್ಗೆಯೊಂದು ಸಿಗರೇಟ್ ಸೇದುವ ಅಭ್ಯಾಸವಿತ್ತು. ಇದು ಅವರ ದಿನಚರಿಯ ಒಂದು ಭಾಗ. ಸಿಗರೇಟ್ ಸೇದುತ್ತಾರೆ ಎಂಬ ವಿಷಯ ಕುಟುಂಬದ ಎಲ್ಲರಿಗೂ ತಿಳಿದಿತ್ತು. ಹರಿಕೃಷ್ಣಗೂ ಧೂಮಪಾನ ಮಾಡುವ ಅಭ್ಯಾಸವಿತ್ತು. ಅವರು ಸಿಗರೇಟ್ ಅನ್ನು ಹೆಚ್ಚು ಸೇದುತ್ತಿದ್ದರು. ಎನ್ಟಿಆರ್‌ಗೆ ಅದು ಇಷ್ಟವಾಗುತ್ತಿರಲಿಲ್ಲ. ಸಿಗರೇಟ್ ತ್ಯಜಿಸುವಂತೆ ಹರಿಕೃಷ್ಣನಿಗೆ ಎನ್ಟಿಆರ್ ಪದೇ ಪದೇ ಹೇಳುತ್ತಿದ್ದರು.
ಆದರೆ ಜಯಶಂಕರ್ ಕೃಷ್ಣ ಅವರಿಗೆ ಇದು ಇಷ್ಟವಾಗಲಿಲ್ಲ. ತಂದೆ ಸಿಗರೇಟ್ ಸೇದುತ್ತಿದ್ದಾಗ ಮಗನಿಗೆ ಸಿಗರೇಟ್ ಬಿಡುವಂತೆ ನೀತಿ ಹೇಳುವುದು ಸರಿಯಲ್ಲ ಎಂದುಕೊಂಡರು. ಅವರು ಮನಸ್ಸಿನ ಮಾತನ್ನು ನೇರವಾಗಿ ಎನ್‌ಟಿಆರ್‌ಗೇ ಹೇಳಿದರು. ಅಪ್ಪಾ ನೀವು ಸಿಗರೇಟ್ ಸೇದುತ್ತಾ, ಹರಿ ಅಣ್ಣನಿಗೆ ಸಿಗರೇಟ್ ಬಿಡುವಂತೆ ಹೇಳುವುದು ಸರಿಯಲ್ಲ ಎಂದರು. ಜಯಶಂಕರ್ ಕೃಷ್ಣ ಅವರ ಪ್ರಶ್ನೆ ತೆಲಗು ಲೆಜೆಂಡರಿಯನ್ನು ಕಲಕಿತು. ಅಂದಿನಿಂದ ಅವರು ಮತ್ತೆಂದು ಸಿಗರೇಟ್ ಮುಟ್ಟಿರಲಿಲ್ಲ,