ಯಾವುದೇ ಸಿನಿಮಾ ಗೆಲ್ಲೋಕೆ ಅದರಲ್ಲಿ ಬೇಕಾದಷ್ಟು ವಿಷಯಗಳಿರುತ್ತವೆ. ಅದರಲ್ಲೂ ಸಿನಿಮಾದ ದೃಶ್ಯಗಳು ಪ್ರೇಕ್ಷಕರನ್ನ ಕಣ್ಣಿಗೆ ಹಬ್ಬ ಮಾಡಬೇಕು. ಅದಕ್ಕೆ ಸಿನಿಮಾದ ಕಥೆಗೆ ಹೊಂದುವ ಲೊಕೇಶನ್ ಇರಬೇಕು. ಅದು ಕಥೆ ಪಾತ್ರಗಳಿಗೆ ಹೊಂದಿಕೊಂಡಿರಬೇಕು. ಸಿನಿಮಾದಲ್ಲಿ ತೋರಿಸೋ ಕೆಲವು ಜಾಗಗಳು, ವಸ್ತುಗಳು, ಕಟ್ಟಡಗಳು, ಭವನಗಳು ನೋಡುಗರ ಮನಸ್ಸಿನಲ್ಲಿ ಉಳಿದುಬಿಡುತ್ತವೆ. ಅವುಗಳ ಬಗ್ಗೆ ಜನ ಮಾತಾಡ್ಕೋತಾರೆ.