ಟಾಲಿವುಡ್ (Tollywood) ಸ್ಟಾರ್ ನಟ ಕಾರ್ತಿಕೇಯ ಗುಮ್ಮಕೊಂಡ (Kartikeya Gummakonda) ಅವರ ಮದುವೆಯು ಬಹುಕಾಲದ ಗೆಳತಿ ಲೋಹಿತಾ ರೆಡ್ಡಿ (Lohitha Reddy) ಜೊತೆ ಭಾನುವಾರ ನೆರವೇರಿದೆ. ಹಲವು ವರ್ಷಗಳಿಂದ ಈ ಜೋಡಿ ಪ್ರೀತಿಯಲ್ಲಿದ್ದರು. ಇದೀಗ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಅದ್ದೂರಿಯಾಗಿ ವಿವಾಹವಾಗಿದ್ದಾರೆ.
ಇವರ ಮದುವೆಗೆ 'ಮೆಗಾ ಸ್ಟಾರ್' ಚಿರಂಜೀವಿ (Chiraneevi) ಆಗಮಿಸಿ, ನೂತನ ವಧು-ವರರಿಗೆ ಆಶೀರ್ವಾದ ಮಾಡಿದ್ದಾರೆ. ವಿಶೇಷವೆಂದರೆ, ಚಿರಂಜೀವಿ ಅವರನ್ನು ಕಂಡರೆ ಕಾರ್ತಿಕೇಯಗೆ ಅಪಾರವಾದ ಪ್ರೀತಿ, ದೊಡ್ಡ ಅಭಿಮಾನಿ ಕೂಡ.
ಕಾರ್ತಿಕೇಯ ಮತ್ತು ಲೋಹಿತಾ ಜೋಡಿ ಕಾಲೇಜ್‌ನಲ್ಲಿ ಓದುವಾಗಲೇ ಪ್ರೀತಿಯಲ್ಲಿತ್ತು. ಈ ವರ್ಷದ ಆಗಸ್ಟ್‌ನಲ್ಲಿ ಲೋಹಿತಾ ಕೈಬೆರಳಿಗೆ ಕಾರ್ತಿಕೇಯ ಎಂಗೇಜ್‌ಮೆಂಟ್ ರಿಂಗ್ ತೊಡಿಸುವ ಮೂಲಕ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದರು.
ಸೌತ್ ಸಿನಿಮಾದ ಸೂಪರ್ ಹಿಟ್ ಚಿತ್ರ 'ಆರ್‌ಎಕ್ಸ್ 100' (RX 100) ಖ್ಯಾತಿಯ ನಟ ಕಾರ್ತಿಕೇಯ ಗುಮ್ಮಕೊಂಡ ತಮ್ಮ ಬಾಲ್ಯದ ಗೆಳತಿ ಲೋಹಿತಾ ಅವರನ್ನು ವಿವಾಹವಾಗಿದ್ದಾರೆ. ಟಾಲಿವುಡ್ನ ಅನೇಕ ಗಣ್ಯರು ಇವರು ಮದುವೆಗೆ ಬಂದಿದ್ದರು.
ಈ ಮದುವೆಗೆ ಹಲವಾರು ಸೆಲೆಬ್ರಿಟಿಗಳು ಬಂದು ನವ ಜೋಡಿಗೆ ವಿಶ್ ಮಾಡಿದ್ದಾರೆ. ನಿರ್ಮಾಪಕ ಅಲ್ಲು ಅರವಿಂದ್, 'ಆರ್‌ಎಕ್ಸ್ 100' ನಿರ್ದೇಶಕ ಅಜಯ್ ಭೂಪತಿ, ಆ ಚಿತ್ರದ ನಾಯಕಿ ಪಾಯಲ್ ರಜಪೂತ್ ಮತ್ತು ಅವರ ಬಾಯ್ ಫ್ರೆಂಡ್ ಸೌರಭ್ ಧಿಂಗ್ರ, ತನಿಕೆಳ್ಳಾ ಭರಣಿ ಸೇರಿದಂತೆ ಅನೇಕರು ಮದುವೆಯಲ್ಲಿ ಭಾಗಿಯಾಗಿದ್ದರು.
'ಪ್ರೇಮತೋ ಮೀ ಕಾರ್ತಿಕ್' ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಕಾರ್ತಿಕೇಯ 'ಆರ್‌ಎಕ್ಸ್ 100' ಚಿತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡರು. ನಂತರ 'ಹಿಪ್ಪಿ', 'ಗುಣ 369', 'ಚಾವು ಕಬುರು ಚಲ್ಲಗ' '90ML' ಮುಂತಾದ ಚಿತ್ರಗಳಲ್ಲಿ ಕಾರ್ತಿಕೇಯ ಅಭಿನಯಿಸಿದ್ದಾರೆ.
ನಾನಿ ನಟನೆಯ 'ಗ್ಯಾಂಗ್ ಲೀಡರ್' ಸಿನಿಮಾದಲ್ಲಿ ವಿಲನ್ ಆಗಿಯೂ ನಟಿಸಿದ್ದಾರೆ. ಕಾರ್ತಿಕೆಯ ಅಭಿನಯದ 'ರಾಜ ವಿಕ್ರಮಾರ್ಕ' ತೆರೆಗೆ ಸಿದ್ಧವಾಗಿದ್ದರೆ, ಇತ್ತ ಬಹುನಿರೀಕ್ಷಿತ 'ವಲಿಮೈ' ಚಿತ್ರದಲ್ಲಿ ಅಜಿತ್ ಜೊತೆಗೂ ಅವರು ಸ್ಕ್ರೀನ್ ಶೇರ್ ಮಾಡಿದ್ದಾರೆ.