`ಪುಷ್ಪ 2` ಸಿನಿಮಾ ವಿಚಾರದಲ್ಲಿ ಆದ ಗಲಾಟೆ, ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಘಟನೆಯಿಂದ ತೆಲಂಗಾಣ ಸರ್ಕಾರ ದಿಢೀರ್ ನಿರ್ಧಾರ ತೆಗೆದುಕೊಂಡಿದೆ. ಇನ್ಮೇಲೆ ಬೆನಿಫಿಟ್ ಶೋ, ಟಿಕೆಟ್ ದರ ಏರಿಕೆ ರದ್ದು ಅಂತ ಹೇಳಿದೆ. ಈ ಬಗ್ಗೆ ಶನಿವಾರ ವಿಧಾನಸಭೆಯಲ್ಲಿ ಸಿಎಂ ರೇವಂತ್ ರೆಡ್ಡಿ ಘೋಷಿಸಿದ್ದಾರೆ. ನಾನು ಸಿಎಂ ಆಗಿರೋವರೆಗೂ ತೆಲಂಗಾಣದಲ್ಲಿ ಬೆನಿಫಿಟ್ ಶೋ, ಟಿಕೆಟ್ ದರ ಏರಿಕೆ ಆಗೋದಿಲ್ಲ, ರದ್ದು ಮಾಡ್ತೀವಿ ಅಂತ ಸ್ಪಷ್ಟಪಡಿಸಿದ್ದಾರೆ.