ಡಾರ್ಲಿಂಗ್ ಪ್ರಭಾಸ್ ಹಾಗೂ ನಟಿ ಅನುಷ್ಕಾ ಶೆಟ್ಟಿ ಜತೆಯಾಗಿ ಸಿನಿಮಾ ಮಾಡಿದ್ದನ್ನು ನೋಡಿರುವ ಪ್ರೇಕ್ಷಕರು ಈಗ ಅವರಿಬ್ಬರು ನಟಿಸಿರುವ ಎರಡು ದೊಡ್ಡ ಚಿತ್ರಗಳು ಒಂದೇ ವಾರದ ಅಂತರದಲ್ಲಿ ಚಿತ್ರಮಂದಿರಗಳಿಗೆ ಲಗ್ಗೆ ಹಾಕುತ್ತಿವೆ.
ಹೌದು ಪ್ರಭಾಸ್ ನಟನೆಯ ‘ರಾಜಾಸಾಬ್’ ಹಾಗೂ ಅನುಷ್ಕಾ ಶೆಟ್ಟಿ ನಟನೆಯ ‘ಘಾಟಿ’ ಚಿತ್ರಗಳು ಏಪ್ರಿಲ್‌ನಲ್ಲಿ ತೆರೆಗೆ ಬರುತ್ತಿವೆ. ಏಪ್ರಿಲ್ 10ಕ್ಕೆ ‘ರಾಜಾಸಾಬ್’ ಹಾಗೂ ಏಪ್ರಿಲ್ 18ಕ್ಕೆ ‘ಘಾಟಿ’ ಬಿಡುಗಡೆ ಆಗುತ್ತಿವೆ. ಎರಡೂ ಚಿತ್ರಗಳು ಬಹುಭಾಷೆಯಲ್ಲಿ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಗಳೇ. ಈಗಾಗಲೇ ಎರಡೂ ಚಿತ್ರಗಳು ಬಿಡುಗಡೆ ದಿನಾಂಕ ಕೂಡ ಘೋಷಣೆ ಆಗಿದೆ.
ಎರಡು ದೊಡ್ಡ ಚಿತ್ರಗಳು ಒಂದೇ ವಾರದ ಅಂತರದಲ್ಲಿ ತೆರೆಗೆ ಬರುತ್ತಿರುವುದು, ಅದರಲ್ಲೂ ಪ್ರಭಾಸ್ ಜತೆಗೆ ನಟಿಸಿರುವ ಅನುಷ್ಕಾ ಶೆಟ್ಟಿ ಅವರ ಸಿನಿಮಾ ಪ್ರಭಾಸ್ ಚಿತ್ರ ತೆರೆಗೆ ಬಂದ ಒಂದೇ ವಾರದ ಅಂತರದಲ್ಲಿ ಬರುತ್ತಿರುವುದನ್ನು ನೋಡಿ, ‘ಡಾರ್ಲಿಂಗ್‌ಗೆ ಸ್ವೀಟಿ ಪೈಪೋಟಿ’ ಎನ್ನುತ್ತಿದ್ದಾರೆ. ಇದೇ ವಿಷಯ ಸಾಮಾಜಿಕ ಜಾಲತಾಣಗಳಲ್ಲೂ ಹಾಟ್ ಟಾಪಿಕ್ ಆಗಿದೆ. ಎರಡೂ ಚಿತ್ರಗಳ ಫಸ್ಟ್ ಲುಕ್ ಸಾಕಷ್ಟು ಕುತೂಹಲ ಮೂಡಿಸಿದೆ.
ಪ್ರಭಾಸ್ ಮತ್ತು ಅನುಷ್ಕ ಶೆಟ್ಟಿ ಸೂಪರ್ ಹಿಟ್ ಜೋಡಿ. ಬಿಲ್ಲಾ, ಮಿರ್ಚಿ, ಬಾಹುಬಲಿ ಸರಣಿಯಲ್ಲಿ ಇವರ ಜೋಡಿ ಅದ್ಭುತವಾಗಿತ್ತು. ಬಾಹುಬಲಿ ನಂತರ ಅನುಷ್ಕ ಸ್ವಲ್ಪ ನಿಧಾನಗತಿಯಲ್ಲಿದ್ದರೂ ಸಿನಿಮಾಗಳನ್ನ ಮಾಡ್ತಾನೇ ಇದ್ದಾರೆ. ಪ್ರಭಾಸ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮುನ್ನುಗ್ಗುತ್ತಿದ್ದಾರೆ.
ಪ್ರಭಾಸ್, ಅನುಷ್ಕಾ ಬಗ್ಗೆ ಸಾಕಷ್ಟು ಗಾಳಿಸುದ್ದಿಗಳು ಹರಿದಾಡಿದ್ದವು, ಇಂದಿಗೂ ಹರಿದಾಡುತ್ತಿರುತ್ತವೆ. ಇವರಿಬ್ಬರ ಮಧ್ಯೆ ಪ್ರೀತಿ, ಮದುವೆ ಆಗುತ್ತೆ ಅಂತೆಲ್ಲಾ ಹೇಳ್ತಿದ್ರು. ಆದ್ರೆ ಇಬ್ಬರೂ ಅದನ್ನ ನಿರಾಕರಿಸಿದ್ರು. ಪ್ರಭಾಸ್‌ಗೆ 45 ವರ್ಷ, ಅನುಷ್ಕಗೆ 42 ವರ್ಷ. ಈವರೆಗೂ ಇಬ್ಬರು ಮದುವೆ ಬಗ್ಗೆ ಏನೂ ಹೇಳಿಲ್ಲ. ಮದುವೆ ಬಗ್ಗೆ ಕೇಳಿದ್ರೆ ನಕ್ಕು ಸುಮ್ಮನಾಗುತ್ತಾರೆ.
ಇನ್ನು ಪ್ರಭಾಸ್, ಅನುಷ್ಕ ಒಟ್ಟಿಗೆ ಸೇರಿದ್ರೆ ತುಂಬಾ ತಮಾಷೆ ಮಾಡ್ತಾರೆ. ಒಬ್ಬರಿಗೊಬ್ಬರು ಜೋಕ್, ಹೊಡೆದುಕೊಳ್ಳೋದು ಗೊತ್ತೇ ಇದೆ. ಒಂದು ಸಂದರ್ಭದಲ್ಲಿ ಪ್ರಭಾಸ್ ಹೇಳಿದ ಜೋಕ್‌ಗೆ ಅನುಷ್ಕಾ ಶೆಟ್ಟಿ ನಾಚಿಕೆಪಟ್ಟು ಮುಖ ಮುಚ್ಚಿಕೊಂಡಿದ್ದರಂತೆ.