ಸಂಸಾರದಲ್ಲಿ ಸಮಸ್ಯೆ ಇದ್ರೆ 4 ಗೋಡೆ ನಡುವೆ ಸರಿ ಮಾಡ್ಕೊಳ್ಳಿ ಇಲ್ಲ ಬಿಡಿ: ವಿಜಯ್ ಆಂಟನಿ ಮದುವೆ ಬ್ರೇಕ್?

Published : Oct 15, 2022, 03:07 PM ISTUpdated : Oct 15, 2022, 03:16 PM IST

 ಸಮಂತಾ- ನಾಗ ಚೈತನ್ಯಾ, ಧನುಷ್- ಐಶ್ವರ್ಯ ದಾಂಪತ್ಯ ಮುರಿದು ಬಿದ್ದ ನಂತರ ಮತ್ತೊಬ್ಬ ಸ್ಟಾರ್ ನಟನ ಜೀವನದಲ್ಲಿ ಬಿರುಗಾಳಿ?

PREV
16
ಸಂಸಾರದಲ್ಲಿ ಸಮಸ್ಯೆ ಇದ್ರೆ 4 ಗೋಡೆ ನಡುವೆ ಸರಿ ಮಾಡ್ಕೊಳ್ಳಿ ಇಲ್ಲ ಬಿಡಿ: ವಿಜಯ್ ಆಂಟನಿ ಮದುವೆ ಬ್ರೇಕ್?

 ಕಾಲಿವುಡ್ ಜನಪ್ರಿಯ ನಟ ಕಮ್ ಸಂಗೀತ ನಿರ್ದೇಶಕ ವಿಜಯ್ ಆಂಟನಿ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಟ್ವೀಟ್ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. 

26

'ಸಂಸಾರದಲ್ಲಿ ಸಮಸ್ಯೆ ಇದ್ದರೆ ಆದಷ್ಟು ನಿಮ್ಮ ನಡುವೆ ನಾಲ್ಕು ಗೋಡೆಗಳ ನಡುವೆ ಸರಿ ಮಾಡಿಕೊಳ್ಳುವ ಪ್ರಯತ್ನ ಮಾಡಿ ಆಗದಿದ್ದರೆ ಬಿಡು ಮುಂದಿನ ಜೀವನ ನೋಡಿಕೊಳ್ಳಿ' ಎಂದು ವಿಜಯ್ ಟ್ವೀಟ್ ಮಾಡಿದ್ದಾರೆ.

36

'ಬದಲು ಮಾರ್ಗವೇ ಇಲ್ಲ ಅಂದಾಗ ಅವರ ಪಾದಕ್ಕೆ ಬಿದ್ದು ಕ್ಷಮೆ ಕೇಳಿ ಒಟ್ಟಿಗೆ ಜೀವ ಮಾಡಿ. ಯಾವ ಕಾರಣಕ್ಕೂ ತೀರ್ಮಾನ ಮಾಡಲು ಮೂರನೇ ವ್ಯಕ್ತಿಯನ್ನು ಕರೆಯಬೇಡಿ. ಮತ್ತಷ್ಟು ಸಂಕಷ್ಟ ತಂದು ಸಮಸ್ಯೆ ದೊಡ್ಡದು ಮಾಡತ್ತಾರೆ' ಎಂದು ವಿಜಯ್ ಹೇಳಿದ್ದಾರೆ.

46

 ವಿಜಯ್ ಆಂಟನಿ ತಮ್ಮ ಪರ್ಸನಲ್ ಲೈಫ್‌ನ ತುಂಬಾನೇ ಸೀಕ್ರೆಟ್‌ ಆಗಿಟ್ಟಿದ್ದರು ಹೀಗಾಗಿ ಮದುವೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ ಆದರೆ ಅಲ್ಲೊಂದು ಇಲ್ಲೊಂದು ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಿದೆ.
 

56

2005ರಲ್ಲಿ ಸಂಗೀತ ನಿರ್ದೇಶಕನಾಗಿ ತಮಿಳು ಚಿತ್ರರಂಗಕ್ಕೆ ವಿಜಯ್ ಪಾದಾರ್ಪಣೆ ಮಾಡಿದ್ದರು. ಕೇನ್ಸ್‌ ಗೋಲ್ಡ್‌ ಲಯನ್‌ ಪ್ರಶಸ್ತಿ ಪಡೆದಿರುವ ಮೊದಲ ಸಂಗೀತ ನಿರ್ದೇಶಕ ಎನ್ನುವ ಹೆಮ್ಮೆ ಇವರದ್ದು.

66

 2012ರಲ್ಲಿ ನಾನ್ ಸಿನಿಮಾ ಮೂಲಕ ನಟನಾಗಿ ಜರ್ನಿ ಅರಂಭಿಸಿದ್ದರು. ಒಟ್ಟು 18 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ ಹಾಗೂ 7 ಸಿನಿಮಾ ಸಹಿ ಮಾಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories