ಮಗನಿಗೆ ಎದೆ ಹಾಲುಣಿಸುತ್ತ ಕರ್ವ ಚೌತ್‌ಗೆ ಮೇಕಪ್ ಮಾಡಿಕೊಂಡ ನಟಿ ಸೋನಮ್: ಫೋಟೋ ವೈರಲ್

Published : Oct 15, 2022, 12:46 PM IST

ಬಾಲಿವುಡ್ ನಟಿ ಸೋನಮ್ ಕಪೂರ್ ಮಗನಿಗೆ ಎದೆ ಹಾಲುಣಿಸುತ್ತಲೇ ಮೇಕಮ್ ಮಾಡಿಕೊಳ್ಳುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ.

PREV
17
ಮಗನಿಗೆ ಎದೆ ಹಾಲುಣಿಸುತ್ತ ಕರ್ವ ಚೌತ್‌ಗೆ ಮೇಕಪ್ ಮಾಡಿಕೊಂಡ ನಟಿ ಸೋನಮ್: ಫೋಟೋ ವೈರಲ್

ಬಾಲಿವುಡ್ ಖ್ಯಾತ ನಟಿ ಸೋನಮ್ ಕಪೂರ್ ಸದ್ಯ ಮುದ್ದಾದ ಮಗುವಿನ ಜೊತೆ ಸಮಯ ಕಳೆಯುತ್ತಿದ್ದಾರೆ. ಇತ್ತೀಗಷ್ಟೆ ಸೋನಮ್ ಕಪೂರ್ ಗಂಡು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಸೋನಮ್ ಮಗನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. 
 

27

ಇತ್ತೀಚಿಗಷ್ಟೆ ಕರ್ವಾ ಚೌತ್ ಹಬ್ಬವನ್ನು ಆಚರಿಸಲಾಗಿದೆ. ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಕರ್ವಾ ಚೌತ್  ಹಬ್ಬವನ್ನು ಅದ್ದೂರಿಯಾರಿ ಸೆಲೆಬ್ರೀಟ್ ಮಾಡಿದ್ದಾರೆ. ಸೋನಮ್ ಕಪೂರ್ ಕರ್ವಾ ಚೌತ್ ಮಾಡಿದ್ದಾರೆ. ಕರ್ವಾ ಚೌತ್‌ಗಾಗಿ ಸೋನಮ್ ಅದ್ದೂರಿಯಾಗಿ ರೆಡಿಯಾಗಿದ್ದಾರೆ. 
 

37

ಸೋನಮ್ ಕಪೂರ್ ಮಗನಿಗೆ ಎದೆ ಹಾಲುಣಿಸುತ್ತಲೇ ಮೇಕಮ್ ಮಾಡಿಕೊಳ್ಳುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ. ಮಗನಿಗೆ ಹಾಲುಣಿಸುತ್ತಾ ಕುಳಿತಿದ್ದಾರೆ. ಮೇಕಪ್ ಮತ್ತು ಹೇರ್ ಸ್ಟೈಲಿಸ್ಟ್ ಮೇಕಮ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಸೋನಮ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. 

47

ವಿಡಿಯ್ ಶೇರ್ ಮಾಡಿ ಸೋನಮ್,  'ನನ್ನ ತಂಡದೊಂದಿಗೆ ರಿಯಲ್ ಜಗತ್ತಿಗೆ ಹಿಂತಿರುಗಲು ತುಂಬಾ ಸಂತೋಷವಾಗಿದೆ. ರೆಡಿಯಾಗಿ ಮತ್ತೆ ಜನರನ್ನು ಭೇಟಿ ಮಾಡಲು ಸಂತೋಷವಾಯಿತು. ನನ್ನ ತವರು ನೆಲಕ್ಕೆ ಮರಳಲು ಇಷ್ಟಪಡುತ್ತೇನೆ. ಲವ್ ಯು ಮುಂಬೈ' ಎಂದು ಹೇಳಿದ್ದಾರೆ. 

57

ತುಂಬಾ ಸುಂದರವಾಗಿ ಕಂಗೊಳಿಸುತ್ತಿದ್ದರು. ಮತ್ತು ಬಣ್ಣದ ಹರಿಸು ಜರಿಯ ದಾವಣಿಯಲ್ಲಿ ಸೋನಮ್ ಮಿಂಚಿದ್ದರು. ಕ್ಯಾಮರಾಗೆ ಪೋಸ್ ನೀಡಿರುವ ಸೋನಮ್ ಫೋಟೋಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

67

ಸೋನಮ್ ಫೋಟೋಗಳಿಗೆ ಅಭಿಮಾನಿಗಳಿಂದ ಮತ್ತು ಸಿನಿ ಗಣ್ಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸೋನಮ್ ಕಪೂರ್ ಆಗಸ್ಟ 20ರಂದು ಗಂಡು ಮಗುವಿಗೆ ಜನ್ಮ ನೀಡಿದರು. ಬಳಿಕ ಮಗನಿಗೆ ವಾಯು ಎಂದು ಹೆಸರಿಟ್ಟರು. 

77

ಮಗನ ಮುಖ ರಿವೀಲ್ ಮಾಡದಿದ್ದರೂ ಪುತ್ರನ ಜೊತೆ ಇರುವ ಅನೇಕ ಫೋಟೋಗಳನ್ನು ಸೋನಮ್ ಶೇರ್ ಮಾಡಿದ್ದಾರೆ. ಸೋನಮ್ ಮದುವೆ ಬಳಿಕ ಪತಿ ಆನಂದ್ ಅಹುಜಾ ಜೊತೆ ವಿದೇಶದಲ್ಲಿ ನೆಲೆಸಿದ್ದರು. ಸದ್ಯ ಗಂಡು ಮಗುವಿನ ತಾಯಿ ಆಗಿರುವ ಸೋನಮ್ ತರವು ಮನೆಯಲ್ಲಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories