ತಮಿಳು ಚಿತ್ರರಂಗದಲ್ಲಿ ವಿಭಿನ್ನವಾದ ಕಥೆ, ಪಾತ್ರದ ಮೂಲಕ ಹೆಸರು ಮಾಡಿರುವ ನಟ ಮಣಿಕಂಠನ್ ತಮ್ಮ ಭಾವನಾತ್ಮಕ, ಸೂಕ್ಷ್ಮವಾದ ನಟನೆಯ ಮೂಲಕ ವಿಶಿಷ್ಟ ಸ್ಥಾನವನ್ನು ಗಳಿಸಿದ್ದಾರೆ. ಕಾನೂನು ನಾಟಕದ ಜೊತೆಗೆ ಸುಂದರವಾದ ಪ್ರೀತಿಯ ಕಥೆಗಳವರೆಗೆ, ತಾನು ಕೂಡ ವಿವಿಧ ಪಾತ್ರಗಳಿಗೆ ಜೀವ ಆಗಬಲ್ಲೆ ಎಂದು ಅವರು ಸಾಬೀತುಪಡಿಸಿದ್ದಾರೆ. ಈ ಐದು ಸಿನಿಮಾಗಳು ನಿಮಗೆ ಮುದ ಕೊಡುವುದರ ಜೊತೆಗೆ ಅವರ ಅಭಿಮಾನಿ ಆಗುವ ಹಾಗೆ ಮಾಡುತ್ತವೆ.
26
ಲವ್ವರ್ ಸಿನಿಮಾ
ಲವ್ವರ್ ಸಿನಿಮಾದಲ್ಲಿ ಮಣಿಕಂಠನ್ ಅವರು ಲವ್ ಮತ್ತು ಕಂಟ್ರೋಲ್ ಮಾಡುವ ಮಧ್ಯದ ಪಾತ್ರವನ್ನು ನಿರ್ವಹಿಸಿದರು. ಆರು ವರ್ಷಗಳ ಕಾಲ ಡೇಟ್ ಮಾಡಿದ್ದ ಈ ಜೋಡಿ ಮಧ್ಯೆ ಪೊಸೆಸ್ಸಿವ್‌ನೆಸ್ ಸಮಸ್ಯೆ ಬಂದು ಏನೆಲ್ಲ ಆಗುವುದು ಎನ್ನುವುದು ಈ ಸಿನಿಮಾ ಕತೆ.
36
ಗುಡ್ ನೈಟ್ (2023)
'ಗುಡ್ ನೈಟ್' ಎಂಬ ಅದ್ಭುತವಾದ ಸಿನಿಮಾದಲ್ಲಿ ಮಣಿಕಂಠನ್ ಅವರು ಐಟಿ ಉದ್ಯೋಗಿಯಾಗಿದ್ದು, ಗೊರಕೆಯ ಸಮಸ್ಯೆಯಿಂದ ಬಳಲುತ್ತಾರೆ. ಆಗ ಅವರಿಗೆ ಓರ್ವ ಹುಡುಗಿ ಜೊತೆ ಲವ್ ಆಗಿ ಮದುವೆ ಆಗುವುದು. ಈ ಗೊರಕೆಯಿಂದಾಗಿ ಇವರಿಬ್ಬರು ಒಂದೇ ರೂಮ್‌ನಲ್ಲಿ ನಿದ್ದೆ ಮಾಡಲು ಆಗೋದಿಲ್ಲ. ಈ ಬಗ್ಗೆಯೇ ಕಥೆ ಸಾಗಿದೆ.
ಹಲಿತಾ ಶಮೀಮ್‌ರ 'ಸಿಲ್ಲು ಕರುಪ್ಪಟ್ಟಿ' ಎಂಬ ಸಿನಿಮಾದಲ್ಲಿ 'ಅತಿಶಯಮೇವತು' ಭಾಗದಲ್ಲಿ ಮಣಿಕಂಠನ್ ನಟಿಸಿದ್ದಾರೆ. ಶ್ರವಣ ದೋಷವುಳ್ಳ ಯುವತಿಯನ್ನು ಪ್ರೀತಿಸುವ ಹುಡುಗನ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಇಲ್ಲಿಯೂ ಸೌಮ್ಯ, ಸಹಜವಾದ ನಟನೆಯಿಂದ ಎಲ್ಲರ ಮನಸ್ಸು ಗಳಿಸಿದರು. ಅವರ ಭಾವನಾತ್ಮಕ ನಟನೆ ಎಲ್ಲರ ಮನಸ್ಸು ಗೆಲ್ಲುವ ಹಾಗೆ ಮಾಡಿತು.
56
kudumbasthan movie
ಮಣಿಕಂಠನ್‌ರ ಇತ್ತೀಚಿನ ಸಿನಿಮಾ kudumbasthan movie ನಿಜಕ್ಕೂ ಅವರ ನಟನಾ ಶೈಲಿ ಹೇಗಿದೆ ಎನ್ನೋದನ್ನು ಹೇಳುವುದು. ನವೀನ್ ತನ್ನ ಪತ್ನಿ, ತಂದೆ-ತಾಯಿ ಜೊತೆಗೆ ವಾಸ ಮಾಡುತ್ತಿರುತ್ತಾನೆ. ಇವನೇ ಕುಟುಂಬದ ಏಕೈಕ ಜೀವನಾಧಾರ. ತಾನು ಮಾಡುವ ಕೆಲಸದಲ್ಲಿ ನಡೆದ ಜಗಳದಲ್ಲಿ ಕ್ಷಮೆ ಕೇಳೋದಿಲ್ಲ ಎಂದು ಹೇಳಿದ ನಂತರ ಅವರನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಕುಟುಂಬದ ಒತ್ತಡ ಆರ್ಥಿಕ ತೊಂದರೆಗಳಿಂದ ಕಂಗೆಟ್ಟಿರುವ ನವೀನ್ ತನ್ನ ಜೀವನವನ್ನು ಹೇಗೆ ನಿರ್ವಹಿಸುತ್ತಾನೆ ಎನ್ನೋದು ಈ ಸಿನಿಮಾ ಕಥೆ.
66
ಜೈ ಭೀಮ್ (2021)
'ಜೈ ಭೀಮ್' ಎಂಬ ಕೋರ್ಟ್ ಡ್ರಾಮಾದಲ್ಲಿ ಮಣಿಕಂಠನ್ ಅವರು ರಾಜಕಾನು ಎಂಬ ಆದಿವಾಸಿ ವ್ಯಕ್ತಿಯ ಪಾತ್ರವನ್ನು ಮಾಡಿದ್ದರು. ಆ ವ್ಯಕ್ತಿಯ ವಿರುದ್ಧ ತಪ್ಪು ಆರೋಪ ಹೊರಿಸಲಾಗುತ್ತದೆ. ಆರೋಪಿ ಸ್ಥಾನದಲ್ಲಿ ಮಣಿಕಂಠನ್ ಅವರು ಅದ್ಭುತವಾಗಿ ನಟಿಸಿ, ಮೆಚ್ಚುಗೆ ಗಳಿಸಿದರು. ಇದಕ್ಕಾಗಿ ಅವರು ವ್ಯಾಪಕವಾಗಿ ಮೆಚ್ಚುಗೆ ಗಳಿಸಿದರು. ಅಷ್ಟೇ ಅಲ್ಲದೆ ತಮಿಳು ಚಿತ್ರರಂಗದಲ್ಲಿ ಒಂದು ಮಹತ್ವದ ಹೆಜ್ಜೆ ಗುರುತಿಸಿದರು.