ಸಿಂಪಲ್ ಆಗಿ ಕಾಣಿಸಿಕೊಂಡ ತಮನ್ನ ಭಾಟಿಯಾ ಟ್ರೋಲ್ ಮಾಡಿದ ನೆಟ್ಟಿಗರು, ಕಾರಣವೇನು?

Published : Feb 27, 2025, 03:39 PM ISTUpdated : Feb 27, 2025, 03:42 PM IST

ತಮನ್ನಾ ಭಾಟಿಯಾ ಮಿಲ್ಕಿ ಬ್ಯೂಟಿಗೆ ಜನ ಫಿದಾ ಆಗಿದ್ದಾರೆ. ಆದರೆ ಏಕಾಏಕಿ ತಮನ್ನ ಮೇಕ್ಅಪ್ ಇಲ್ಲದೆ ಕಾಣಿಸಿಕೊಂಡಿದ್ದಾರೆ. ಹೊಸ ಲುಕ್‌ನಲ್ಲಿ ಕಾಣಿಸಿಕೊಂಡ ತಮನ್ನಾ ಟ್ರೋಲ್ ಆಗಿದ್ದಾರೆ. ಕಾರಣವೇನು 

PREV
15
ಸಿಂಪಲ್ ಆಗಿ ಕಾಣಿಸಿಕೊಂಡ ತಮನ್ನ ಭಾಟಿಯಾ ಟ್ರೋಲ್ ಮಾಡಿದ ನೆಟ್ಟಿಗರು, ಕಾರಣವೇನು?

ಬಾಲಿವುಡ್ ನಟಿ ತಮನ್ನಾ ಭಾಟಿಯಾ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ತಮನ್ನಾ ಮಹಾಕುಂಭ ಮೇಳಕ್ಕೆ ತೆರಳಿ ಪುಣ್ಯಸ್ನಾನ ಮಾಡಿದ್ದರು. ತಮನ್ನಾ ಭಾಟಿಯಾ ಜೊತೆ ಸ್ಯಾಂಡಲ್‌ವುಡ್ ನಟ ವಶಿಷ್ಠ ಸಿಂಹ ಕೂಡ ಕುಂಬಮೇಳದಲ್ಲಿ ಪುಣ್ಯಸ್ನಾನ ಮಾಡಿದ್ದರು. ಇದೀಗ ತಮನ್ನ ಮತ್ತೆ ಸುದ್ದಿಯಾಗಿದ್ದರೆ. ಈ ಬಾರಿ ತಮನ್ನಾ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.  

25

ತಮನ್ನಾ ಭಾಟಿಯಾ ಕ್ರಾಪ್ ಟಿ-ಶರ್ಟ್ ಜೊತೆಗೆ ಕಾರ್ಗೋ ಧರಿಸಿದ್ದರು. ಪ್ರಮುಖಾಗಿ ತಮನ್ನ ಭಾಟಿಯಾ ಯಾವುದೇ ಮೇಕ್ ಅಪ್ ಇಲ್ಲದೆ ಕಾಣಿಸಿಕೊಂಡಿದ್ದಾರೆ. ತಮನ್ನಾ ಮಿಲ್ಕಿ ಬ್ಯೂಟಿಯಾಗಿದ್ದರೂ ಮೇಕ್ ಅಪ್ ಅವಶ್ಯಕತೆ ಇದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ತಮನ್ನಾ ಮುಖಕ್ಕೆ ಮೇಕ್ಅಪ್ ಮೆರುಗು ಹೆಚ್ಚಿಸುತ್ತದೆ ಎಂದಿದ್ದಾರೆ. ಮತ್ತೆ ಕೆಲವರು ತಮನ್ನಾ ನ್ಯಾಚ್ಯುಲ್ ಬ್ಯೂಟಿ ಹೇಗೆ ಬಂದರೂ ಒಕೆ ಎಂದು ಕಮೆಂಟ್ ಮಾಡಿದ್ದಾರೆ. 

35

ಮೇಕಅಪ್ ಇಲ್ಲದೆ ಕಾಣಿಸಿಕೊಂಡ ತಮನ್ನಾ ಭಾಟಿಯಾಗೆ ಹಲವು ಟ್ರೋಲ್ ಮಾಡಿದ್ದಾರೆ. ತಮನ್ನಾ ಬ್ಯೂಟಿ, ಡ್ರೆಸ್, ಲುಕ್ ಸೇರಿದಂತೆ ಪ್ರತಿಯೊಂದು ವಿಚಾರವನ್ನು ಟ್ರೋಲಿಗರು ಸುಖಾಸುಮ್ಮನೆ ಟ್ರೋಲ್ ಮಾಡಿದ್ದಾರೆ. ತಮನ್ನಾ ಮೇಕಪ್ ಇಲ್ಲದೆ ವಿಚಿತ್ರವಾಗಿ ಕಾಣುತ್ತಾರೆ ಎಂದು ಜನರು ಹೇಳುತ್ತಾರೆ. ಆದರೆ ಕೆಲವರು ತಮನ್ನಾ ಅವರ ಸರಳತೆಯನ್ನು ಹೊಗಳಿದ್ದಾರೆ. ಇದೀಗ ಪರ ವಿರೋಧಗಳು ವ್ಯಕ್ತವಾಗುತ್ತದೆ. 

45

ತಮನ್ನಾ 2005 ರಲ್ಲಿ ಬಂದ 'ಚಾಂದ್ ಸಾ ರೋಷನ್ ಚೆಹರಾ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಆದರೆ ಈ ಚಿತ್ರ ನಿರೀಕ್ಷಿತ ಯಶಸ್ಸು ನೀಡಲಿಲ್ಲ. ಆದರೆ ತಮನ್ನಾ 2006ರಲ್ಲಿ ತಮನ್ನಾ ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸೌತ್ ನಟಿಯಾಗಿ ಭಾರಿ ಜನಪ್ರಿಯತೆ ಪಡೆದುಕೊಂಡರು. ಹ್ಯಾಪಿ ಡೇಸ್ ಚಿತ್ರ ತಮನ್ನಾ ಕರಿಯರ್‌ಗ ೆದೊಡ್ಡ ಯಶಸ್ಸು ತಂದುಕೊಟ್ಟಿತು. ಇದರ ಬೆನ್ನಲ್ಲೇ ಕಲ್ಲೂರಿ ಚಿತ್ರ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ಇದರ ಬೆನ್ನಲ್ಲೇ ತಮನ್ನ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.

55

ವಿಜಯ್ ವರ್ಮಾ ಜೊತೆ ಡೇಟಿಂಗ್‌ನಲ್ಲಿರುವ ತಮನ್ನಾ ಭಾಟಿಯಾ ಇದೀಗ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆಜ್ ಕಿ ರಾತ್ ಹಾಗೂ  ನು ಕಾವಾಲಿ ಅತ್ಯಂತ ಜನಪ್ರಿಯ ಹಾಡುಗಳ ಮೂಲಕವೂ ತಮನ್ನಾ ಭಾಟಿಯಾ ಎಲ್ಲರ ಮನಗೆದ್ದಿದ್ದಾರೆ.  ತಮನ್ನಾ ಬಾಲಿವುಡ್‌ನಲ್ಲಿ ಕರಿಯರ್ ಆರಂಭಿಸಿದರೂ ತಮಿಳು ಹಾಗೂ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಅತೀ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

Read more Photos on
click me!

Recommended Stories