ಒಂದು ಕಾಲದಲ್ಲಿ ಮುಮೈತ್ ಖಾನ್ ಫುಲ್ ಫಾರ್ಮ್‌ನಲ್ಲಿ ಇದ್ದರು. ಎಷ್ಟರ ಮಟ್ಟಿಗೆ ಅಂದ್ರೆ ಆಕೆಯ ಐಟಂ ಹಾಡು ಬೇಕೆಂದು ಹೀರೋಗಳು ಕೇಳುತ್ತಿದ್ದರು. “ಇಪ್ಪಟ್ಟಿಕಿನ್ನೂ ನಾ ವಯಸ್ಸು ನಿಂಡಾ ಪದಹಾರೇ…” ಎಂದು ‘ಪೋಕಿರಿ’ಯಲ್ಲಿ ಮುಮೈತ್ ಕುಣಿದ ರೀತಿ ಯಾರಿಗೆ ತಾನೇ ಮರೆಯಲು ಸಾಧ್ಯ. ಇನ್ನು ‘ಯೋಗಿ’ಯಲ್ಲಿ “ಓರೋರಿ ಯೋಗಿ…” ಎಂದು ಮುದ್ದಿಸಿದ ರೀತಿಯನ್ನು ನೆನಪಿಸಿಕೊಂಡು ಕುಣಿಯುವವರಿದ್ದಾರೆ. ಹಾಗೆಯೇ ಆಕೆಯನ್ನು ಮುಖ್ಯ ಪಾತ್ರದಲ್ಲಿ ಹಾಕಿ ಸಿನಿಮಾ ಮಾಡಲು ನಿರ್ದೇಶಕರು, ನಿರ್ಮಾಪಕರು ಕಾತುರರಾಗಿದ್ದರು. ಆಪರೇಷನ್ ದುರ್ಯೋಧನ, ಮೈಸಮ್ಮ ಐಪಿಎಸ್, ಮಂಗತಾಯಾರು ಟಿಫಿನ್ ಸೆಂಟರ್, ಪುನ್ನಮಿನಾಗು” ಮುಂತಾದ ಚಿತ್ರಗಳಲ್ಲಿ ಮುಮೈತ್ ಖಾನ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿ ಮೆಚ್ಚುಗೆ ಗಳಿಸಿದರು. ಐಟಂ ನಂಬರ್‌ಗಳಲ್ಲಿ ಆಕೆಗೆ ಸರಿಸಾಟಿಯೇ ಇರಲಿಲ್ಲ. ಮುಖ್ಯವಾಗಿ ಮುಮೈತ್ ತನ್ನ ಸೊಂಟವನ್ನು ಲಯಬದ್ಧವಾಗಿ ತಿರುಗಿಸುತ್ತಾ ಮಾಡುವ ‘ಬೆಲ್ಲಿ ಡ್ಯಾನ್ಸ್’ಗೆ ಅಪಾರ ಅಭಿಮಾನಿಗಳಿದ್ದಾರೆ.
ಒಂದು ಕಾಲದಲ್ಲಿ ಆಕೆಯ ಹಾಡುಗಳಿಗಾಗಿಯೇ ಸಿನಿಮಾಗೆ ಹೋದವರೂ ಇದ್ದಾರೆ. ಆದರೆ ಮುಮೈತ್ ಖಾನ್ ಇದ್ದಕ್ಕಿದ್ದಂತೆ ಡೌನ್ ಆದರು. ಒಮ್ಮೆಲೆ ಆಫರ್‌ಗಳು ಕಡಿಮೆಯಾದವು. ಹೊಸಬರು ಬಂದು ಆಕೆಯ ಜಾಗವನ್ನು ಆಕ್ರಮಿಸಿಕೊಂಡರು. ಆದರೆ ಆಕೆ ಡೌನ್ ಆಗಲು ಡ್ಯಾನ್ಸ್ ಮಾಸ್ಟರ್ ಲಾರೆನ್ಸ್ ಜಗಳವಾಡಿದ್ದೇ ಕಾರಣ ಎಂದು ತಮಿಳುನಾಡಿನಲ್ಲಿ ಹೇಳಿಕೊಳ್ಳುತ್ತಾರೆ.