ಜ್ಯುವೆಲರಿ ಬ್ಯುಸಿನೆಸ್ ಶುರು ಮಾಡಿದ Milky Beauty, Tamannaah ಕೂಲ್ ಸ್ಟೈಲ್ ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್

Published : Feb 02, 2026, 03:23 PM IST

ತಮನ್ನಾ ತಮ್ಮದೇ ಜ್ಯುವೆಲರಿ ಬ್ರ್ಯಾಂಡ್ ಶುರು ಮಾಡಿದ್ದಾರೆ. ಬ್ರ್ಯಾಂಡ್ ಓಪನಿಂಗ್ ವೇಳೆ ಸಿಂಪಲ್ ಲುಕ್ ನಲ್ಲಿ ಕಾಣಿಸಿಕೊಂಡ ತಮನ್ನಾ ಲಕ್ಷಾಂತರ ಮಂದಿ ಹೃದಯಕ್ಕೆ ಕನ್ನ ಹಾಕಿದ್ದಾರೆ. 

PREV
17
ಜ್ಯುವೆಲರಿ ಕ್ಷೇತ್ರಕ್ಕೆ ಮಿಲ್ಕಿ ಬ್ಯೂಟಿ

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ತಮ್ಮ ಹೊಸ ಬ್ರ್ಯಾಂಡ್ ತಮನ್ನಾ ಫೈನ್ ಜ್ಯುವೆಲರಿ ಪ್ರಾರಂಭಿಸುವ ಮೂಲಕ ಫೈನ್ ಜ್ಯುವೆಲರಿ ರಿಟೇಲ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಬ್ರ್ಯಾಂಡ್ ಲಾಂಚ್ ವೇಳೆ ಸೆಲೆಬ್ರಿಟಿಗಳು ತಮ್ಮ ಐಷಾರಾಮಿ ಸ್ಟೈಲ್ ನಿಂದ ಎಲ್ಲರ ಗಮನ ಸೆಳೆಯೋದು ಕಾಮನ್. ಆದ್ರೆ ತಮನ್ನಾ ಮಾತ್ರ ಬ್ರ್ಯಾಂಡ್ ಲಾಂಚ್ ವೇಳೆ ಸರಳ ಉಡುಗೆಯಿಂದ ಎಲ್ಲರ ಹೃದಯ ಗೆದ್ದಿದ್ದಾರೆ.

27
ಸಿಂಪಲ್ ಲುಕ್ ನಲ್ಲಿ ತಮನ್ನಾ

ತಮನ್ನಾ ಭಾಟಿಯಾ ತಮ್ಮ ಜ್ಯುವೆಲರಿ ಮಳಿಗೆ ಉದ್ಘಾಟನೆ ವೇಳೆ ಗ್ಲಾಮರ್ ಬಿಟ್ಟು ಸಿಂಪಲ್ ಉಡುಗೆ ತೊಟ್ಟು, ಕೂಲ್ ಸ್ಟೈಲ್ ನಲ್ಲಿ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾದ್ರು. ತಮನ್ನಾ ಡೆನಿಮ್ ಜೀನ್ಸ್ ಜೊತೆ ಬಿಳಿ ಬಣ್ಣದ ಕಾರ್ಸೆಟ್ ಧರಿಸಿದ್ದರು. ಜೀನ್ಸ್ ನ ನೀಲಿ ಮತ್ತು ಬೂದು ಬಣ್ಣದ ಕಾಂಬಿನೇಷನ್ ಅವರ ಉಡುಪಿಗೆ ಕ್ಯಾಶುಯಲ್ ವೈಬ್ ನೀಡಿತ್ತು. ನ್ಯೂಡ್ ಬೇಸ್, ತಿಳಿ ಬ್ಲಶ್ ಹಾಗೂ ನ್ಯಾಷ್ಯುರಲ್ ಲಿಪ್ ಶೆಡ್ ನಿಂದಾಗಿ ತಮನ್ನಾ ಮುಖ ಮತ್ತಷ್ಟು ಹೊಳಪು ಪಡೆದಿತ್ತಲ್ಲದೆ ಫ್ರೆಶ್ ಆಗಿತ್ತು. ಡೈಮಂಡ್ ಮಳಿಗೆ ಉದ್ಘಾಟನೆಗೆ ಹೇವಿ ಮೇಕಪ್, ಡ್ರೆಸ್ ಅಗತ್ಯವಿಲ್ಲ ಎಂಬುದನ್ನು ತಮನ್ನಾ ತಮ್ಮ ಸ್ಟೈಲ್ ಮೂಲಕ ಸಾರಿದ್ದಾರೆ.

37
ಫೈನ್ ಜ್ಯುವೆಲರಿ ಬ್ರ್ಯಾಂಡ್ ವಿಶೇಷತೆ ಏನು?

ಫೈನ್ ಜ್ಯುವೆಲರಿ ಬ್ರ್ಯಾಂಡ್ ಆಕೇಷನ್ ಬಿಯಾಂಡ್ ಸೂತ್ರವನ್ನು ಆಧರಿಸಿದೆ. ಆಭರಣಗಳನ್ನು ವಿಶೇಷ ಸಂದರ್ಭಗಳಿಗೆ ಎತ್ತಿಡುವ ಬದಲು ನಿತ್ಯದ ಡ್ರೆಸ್ ಗೆ ಒಪ್ಪುವಂತೆ ವಿನ್ಯಾಸ ಗೊಳಿಸಲಾಗಿದೆ. ಬ್ರ್ಯಾಂಡ್ ಆಧುನಿಕ ಮಹಿಳೆಯರ ಜೀವನವನ್ನು ಪ್ರತಿಬಿಂಬಿಸುವ ಗುರಿಯನ್ನು ಹೊಂದಿದೆ. ಬ್ರ್ಯಾಂಡ್ ಮೂರು ಪ್ರಮುಖ ಸೆಗ್ಮೆಂಟ್ ಜೊತೆ ಬಿಡುಗಡೆಯಾಗ್ತಿದೆ. ಹಾಫ್ & ಹಾಫ್, ದಿ ಫ್ಲಿಕ್ ಮತ್ತು ಪ್ಲಂಪಿಯಸ್. 14 ಕ್ಯಾರೆಟ್ ಮತ್ತು 18 ಕ್ಯಾರೆಟ್ ಚಿನ್ನದಲ್ಲಿ ತಯಾರಿಸಲಾಗಿದ್ದು, ನೈಸರ್ಗಿಕ ವಜ್ರಗಳು ಮತ್ತು ರತ್ನದ ಸ್ಟೋನ್ ಬಳಸಲಾಗಿದೆ.

47
ಆಭರಣ ಪ್ರಿಯೆ

ತಮನ್ನಾ ಭಾಟಿಯಾ ಆಭರಣ ಪ್ರಿಯೆ. ಆಭರಣವನ್ನು ನಾನು ಬೇರೆ ದೃಷ್ಟಿಕೋನದಿಂದ ನೋಡಲು ಬಯಸಿದ್ದೆ. ವಿಶೇಷ ಸಂದರ್ಭದಲ್ಲಿ ಮಾತ್ರವಲ್ಲನಿತ್ಯ ಮಹಿಳೆಯರು ಧರಿಸಬಹುದಾದ ಆಭರಣ ನೀಡಲು ನಾನು ಬಯಸಿದ್ದೆ. ಆಭರಣ ನ್ಯಾಚ್ಯುರಲ್ ಆಗಿರ್ಬೇಕು ಹಾಗೇ ವೈಯಕ್ತಿಕವಾಗಿರಬೇಕು ಅಂತ ತಮನ್ನಾ ಭಾಟಿಯಾ ಹೇಳಿದ್ದಾರೆ.

57
ಪಾರ್ಟನರ್ ಶಿಪ್ ಬ್ಯುಸಿನೆಸ್

ತಮನ್ನಾ ತಮ್ಮ ತಂದೆ ಸಂತೋಷ್ ಭಾಯಿಯಾ ಜೊತೆ ಪಾರ್ಟನರ್ ಶಿಪ್ ನಲ್ಲಿ ಇದನ್ನು ಶುರು ಮಾಡಿದ್ದಾರೆ. ವಿನ್ಯಾಸ, ಉತ್ಪಾದನೆ, ಮಾರಾಟ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತಮನ್ನಾ ವಿಶೇಷ ಆಸಕ್ತಿವಹಿಸಿ ಕೆಲ್ಸ ಮಾಡ್ತಿದ್ದಾರೆ. ಬ್ರ್ಯಾಂಡ್ ಅಭಿವೃದ್ಧಿಯ ಪ್ರತಿಯೊಂದು ಹಂತದಲ್ಲೂ ಅವರ ಪಾಲ್ಗೊಳ್ಳುವಿಕೆ ಇದೆ.

67
ಮುಂಬೈನಲ್ಲಿ ಶಾಪ್

ತಮನ್ನಾ ಬ್ರ್ಯಾಂಡ್ ಮುಂಬೈನ ಜುಹುನಲ್ಲಿ ತನ್ನ ಪ್ರಮುಖ ಅಂಗಡಿಯನ್ನು ತೆರೆದಿದ್ದಾರೆ. ಸಾಂಪ್ರದಾಯಿಕ ಆಭರಣ ಶೋರೂಮ್ ಬದಲು ಸಮಕಾಲೀನ ಮತ್ತು ಸ್ವಾಗತಾರ್ಹ ಸ್ಥಳವಾಗಿ ವಿನ್ಯಾಸಗೊಳಿಸಲಾಗಿದೆ.

77
ಸೆಲೆಬ್ರಿಟಿಗಳ ರಂಗು

ತಮನ್ನಾ ಭಾಟಿಯಾ ಆಭರಣ ಮಳಿಗೆ ಉದ್ಘಾಟನೆ ಗ್ಲಾಮರ್, ಫ್ಯಾಷನ್ ಮತ್ತು ಸ್ಟಾರ್ ಪವರ್ ಮಿಶ್ರಣವಾಗಿತ್ತು. ಬಾಲಿವುಡ್ ಮತ್ತು ದಕ್ಷಿಣ ಭಾರತದ ಅನೇಕ ಪ್ರಮುಖ ಸೆಲೆಬ್ರಿಟಿಗಳು ತಮನ್ನಾಗೆ ವಿಶ್ ಮಾಡಲು ಬಂದಿದ್ರು. ಸಮಂತಾ ರುತ್ ಪ್ರಭು, ದಕ್ಷಿಣದ ನಟಿ ಕಾಜಲ್ ಅಗರ್ವಾಲ್, ಪೂಜಾ ಹೆಗ್ಡೆ, ಗಾಯಕಿ ಶಿಲ್ಪಾ ರಾವ್, ಫಾತಿಮಾ ಸನಾ ಶೇಖ್, ಕುಶಾ ಕಪಿಲಾ, ಚಲನಚಿತ್ರ ನಿರ್ಮಾಪಕಿ ಫರಾ ಖಾನ್, ಆರ್ಯನ್ ಖಾನ್ , ಅವಿನಾಶ್ ತ್ರಿಪಾಠಿ, ಸಿದ್ಧಾರ್ಥ್ ಮಲ್ಹೋತ್ರಾ ಕೂಡ ತಮ್ಮ ಕ್ಯಾಶುಯಲ್ ಸ್ಟೈಲ್ ನಿಂದ ಎಲ್ಲರ ಗಮನ ಸೆಳೆದ್ರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories