ಮುದ್ದಾದ ಅವಳಿ ಮಕ್ಕಳ ಜೊತೆ ನಯನತಾರಾ ದೀಪಾವಳಿ; ವಿಡಿಯೋ ಮೂಲಕ ವಿಶ್ ಮಾಡಿದ ಜೋಡಿ

Published : Oct 25, 2022, 11:35 AM IST

ಸೌತ್ ಸಿನಿರಂಗದ ಸ್ಟಾರ್ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಸದ್ಯ ಮುದ್ದಾದ ಅವಳಿ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ನಯನತಾರಾ ದಂಪತಿ ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳನ್ನು ಸ್ವಾಗತಿಸಿದ್ದಾರೆ. 

PREV
16
ಮುದ್ದಾದ  ಅವಳಿ ಮಕ್ಕಳ ಜೊತೆ ನಯನತಾರಾ ದೀಪಾವಳಿ; ವಿಡಿಯೋ ಮೂಲಕ ವಿಶ್ ಮಾಡಿದ ಜೋಡಿ

ಸೌತ್ ಸಿನಿರಂಗದ ಸ್ಟಾರ್ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಸದ್ಯ ಮುದ್ದಾದ ಅವಳಿ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ನಯನತಾರಾ ದಂಪತಿ ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳನ್ನು ಸ್ವಾಗತಿಸಿದ್ದಾರೆ. 

26

ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಇಬ್ಬರು ಮುದ್ದಾದ ಮಕ್ಕಳನ್ನು ಎತ್ತಿಕೊಂಡು ಅಭಿಮಾನಿಗಳಿಗೆ ದೀಪಾವಳಿಯ ಶುಭಾಶಯ ತಿಳಿಸಿದ್ದಾರೆ. ಇಬ್ಬರೂ ಕೆಂಪು ಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಅವಳಿ ಮಕ್ಕಳನ್ನು ಎತ್ತಿಕೊಂಡು ಸಂತಸದಿಂದ ಶುಭಾಶಯ ತಿಳಿಸಿದ್ದಾರೆ. 

36

ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಸ್ವಾಗತಿಸಿದ ನಯನತಾರಾ ದಂಪತಿಗೆ ಸಂಕಷ್ಟ ಎದುರಾಗಿತ್ತು. ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದು ನಿಯಮಗಳ ಪ್ರಕಾರವೇ ಇದಿಯಾ ಎಂದು ತಮಿಳು ನಾಡು ಸರ್ಕಾರ ತನಿಖೆಗೆ ಆದೇಶಿಸಿತ್ತು.
 
46

ಸರ್ಕಾರಕ್ಕೆ ನಯನತಾರಾ ದಂಪತಿ ಪ್ರತಿಕ್ರಿಯೆ ನೀಡಿದ್ದು ಬಾಡಿಗೆ ತಾಯಿ ತನ್ನ ಸಂಬಂಧಿ, ನಾವು 6 ವರ್ಷಗಳ ಹಿಂದೆಯೇ ಮದುವೆ ನೋಂದಣಿ ಮಾಡಿಸಿದ್ವಿ ಎಂದು ಸ್ಪಷ್ಟನೆ ನೀಡಿದ್ದರು.

56

ತಮಿಳುನಾಡು ಆರೋಗ್ಯ ಇಲಾಖೆಗೆ ನೀಡಿದ ಅಫಿಡವಿಟ್‌ನಲ್ಲಿ ನಯನತಾರಾ ದಂಪತಿ ಜೂನ್ ತಿಂಗಳಲ್ಲಿ ಅದ್ದೂರಿಯಾಗಿ ಮದುವೆಯಾದೆವು ಆದರೆ 6 ವರ್ಷಗಳ ಹಿಂದೆಯೇ ರಿಜಿಸ್ಟರ್ ಆಗಿದ್ದೆವು ಎಂದು ಮದುವೆ ನೋಂದಣಿ ಸರ್ಕಿಫಿಕೇಟ್ ಅನ್ನು ಅಫಿಡವಿಟ್ ಜೊತೆಯೇ ನೀಡಿದ್ದಾರೆ.  

66

ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಇಬ್ಬರ ಮದುವೆಗೆ ಅನೇಕ ಸಿನಿ ಸೆಲೆಬ್ರಿಟಿಗಳು ಹಾಜರಾಗಿದ್ದರು. ರಜನಿಕಾಂತ್, ಶಾರುಖ್ ಖಾನ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Read more Photos on
click me!

Recommended Stories