Tamannaah Bhatia Controversy: ಸೂಪರ್ ಹಿಟ್ ಬಾಹುಬಲಿ ಚಿತ್ರದಲ್ಲಿ ತಮನ್ನಾ ನಟಿಸಿದ ದೃಶ್ಯವು ವರ್ಷಗಳ ನಂತರ ಚರ್ಚೆಗೆ ಗ್ರಾಸವಾಗಿದ್ದು, ಇದರ ಬಗ್ಗೆ ನಟಿ ಇದೀಗ ತಮ್ಮ ಸ್ಪಷ್ಟನೆಯನ್ನು ನೀಡಿದ್ದಾರೆ.
ಬಾಹುಬಲಿ ಚಿತ್ರದ ಒಂದು ದೃಶ್ಯವು ವರ್ಷಗಳ ನಂತರ ಚರ್ಚೆಗೆ ಗ್ರಾಸವಾಗಿದೆ. ಈ ದೃಶ್ಯದ ಬಗ್ಗೆ ನಟಿ ತಮನ್ನಾ ಭಾಟಿಯಾ ಸ್ಪಷ್ಟನೆ ನೀಡಿದ್ದಾರೆ. ಬಾಹುಬಲಿ ಸಿನಿಮಾ ಎರಡು ಭಾಗಗಳಾಗಿ ಬಿಡುಗಡೆಯಾಗಿತ್ತು. ಇದೀಗ ಮೊದಲ ಭಾಗದ ಹಾಡಿನ ಸೀನ್ ಬಗ್ಗೆ ಉಂಟಾಗಿದ್ದ ವಿವಾದ ಮುನ್ನಲೆಗೆ ಬಂದಿದೆ.
24
ಏನಿದು ವಿವಾದ?
ಬಾಹುಬಲಿ ಚಿತ್ರದಲ್ಲಿಆವಂತಿಕಾ ಆಗಿ ತಮನ್ನಾ ಕಾಣಿಸಿಕೊಂಡಿದ್ದರು. ಭಾಗ-2ರಲ್ಲಿಯೂ ಆವಂತಿಕ ಪಾತ್ರ ಮುಂದುವರಿದ್ದರೂ ಅವಧಿ ತುಂಬಾ ಕಡಿಮೆಯಾಗಿತ್ತು. ಬಾಹುಬಲಿ ಬಿಗಿನ್ನಿಂಗ್‌ನಲ್ಲಿ ಬಾಹುಬಲಿ ಶಿವು, ಪ್ರೇಯಸಿ ಅವಂತಿಕಾಳನ್ನು ಅಲಂಕರಿಸುತ್ತಾನೆ. ಈ ಸಂದರ್ಭದಲ್ಲಿ ಆವಂತಿಕಾ ಬಟ್ಟೆ ತೆಗೆಯುವ ದೃಶ್ಯಗಳಿವೆ. ಈ ದೃಶ್ಯದಲ್ಲಿ ತಮನ್ನಾ ಧರಿಸಿದ್ದ ಮೇಲುಡುಗೆಯನ್ನು ನಟ ಪ್ರಭಾಸ್ ಕಳಚುತ್ತಾರೆ. ಈ ಒಂದು ಸನ್ನಿವೇಶ ಚರ್ಚೆಗೆ ಗ್ರಾಸವಾಗಿತ್ತು.
34
ಇದು ದೌರ್ಜನ್ಯ ಅಲ್ಲ, ಸ್ವ-ಅನ್ವೇಷಣೆ: ತಮನ್ನಾ
ಈ ದೃಶ್ಯವನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಇದು ದೌರ್ಜನ್ಯವಲ್ಲ, ಅವಂತಿಕಳ ಸ್ವ-ಅನ್ವೇಷಣೆ ಎಂದು ತಮನ್ನಾ ಭಾಟಿಯಾ ಹೇಳಿದ್ದಾರೆ. ಈ ಮೂಲಕ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಮಾಡಿದ್ದಾರೆ.
ಚಿತ್ರದ ಸನ್ನಿವೇಶ ಮತ್ತು ನಿರ್ದೇಶಕರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದು ತಮನ್ನಾ ಹೇಳಿದ್ದಾರೆ. ಬಾಹುಬಲಿ ಚಿತ್ರದ ನಿರ್ದೇಶಕರಾದ ರಾಜಮೌಳಿ ಇಬ್ಬರು ನಟಿಯರನ್ನು ಅತ್ಯದ್ಭುತವಾಗಿ ತೋರಿಸಿದ್ದಾರೆ.