ಮದುವೆಯಾಗಿ 3 ವರ್ಷಕ್ಕೆ ಡಿವೋರ್ಸ್‌ಗೆ ಮುಂದಾದ್ರಾ ಪುನೀತ್‌ ರಾಜ್‌ಕುಮಾರ್‌ ಸಿನಿಮಾ ನಾಯಕಿ ಹನ್ಸಿಕಾ ಮೋಟ್ವಾನಿ?

Published : Aug 04, 2025, 05:37 PM IST

ಕಾಲಿವುಡ್‌ನಲ್ಲಿ ಇತ್ತೀಚೆಗೆ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಆ ಪಟ್ಟಿಯಲ್ಲಿ ಈಗ ಒಬ್ಬ ಫೇಮಸ್ ನಟಿ ಸೇರ್ಪಡೆಯಾಗ್ತಿದ್ದಾರಂತೆ. ಪುನೀತ್‌ ರಾಜ್‌ಕುಮಾರ್‌ ನಟನೆಯ ʼಬಿಂದಾಸ್‌ʼ ಸಿನಿಮಾದಲ್ಲಿ ಇವರು ನಟಿಸಿದ್ದರು. 

PREV
14
ಸಿಂಬು ಜೊತೆ ಲವ್‌ ಇತ್ತು!

ಧನುಷ್‌ರ ಮಾಪಿಳ್ಳೈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು ಹನ್ಸಿಕಾ. ವಿಜಯ್ ಜೊತೆ ವೇಲಾಯುಧಂ, ಸೂರ್ಯ ಜೊತೆ ಸಿಂಗಂ 2, ಕಾರ್ತಿ ಜೊತೆ ಬಿರಿಯಾನಿ, ಶಿವಕಾರ್ತಿಕೇಯನ್ ಜೊತೆ ಮಾನ್ ಕರಾಟೆ ಹೀಗೆ ಸ್ಟಾರ್ ನಟರ ಜೊತೆ ನಟಿಸಿ ಟಾಪ್ ಹೀರೋಯಿನ್ ಆಗಿ ಮೆರೆದರು. ಒಂದು ಹಂತದಲ್ಲಿ ಸಿಂಬು ಜೊತೆ ಪ್ರೀತಿಯಲ್ಲಿ ಬಿದ್ದರು. ವಾಲು ಚಿತ್ರದಲ್ಲಿ ನಟಿಸುವಾಗ ಇಬ್ಬರೂ ಪ್ರೀತಿಸುತ್ತಿದ್ದರು. ಮದುವೆ ಆಗ್ತಾರೆ ಅಂತಾನೂ ಸುದ್ದಿ ಇತ್ತು. ಆದರೆ ಇದ್ದಕ್ಕಿದ್ದಂತೆ ಬ್ರೇಕಪ್ ಮಾಡ್ಕೊಂಡು ಬೇರೆ ಆಗ್ಬಿಟ್ರು.

24
ಮಾರ್ಕೆಟ್‌ ಕಮ್ಮಿಯಾಗ್ತಿದ್ದಂತೆ ಮದುವೆ!

ಕೊರೊನಾ ಬಳಿಕ ಹನ್ಸಿಕಾ ಮಾರ್ಕೆಟ್ ಕಳ್ಕೊಂಡಿದ್ರು. ಹೀಗಾಗಿ ಮದುವೆ ಆಗೋಕೆ ನಿರ್ಧರಿಸಿದ ಅವರು, 2022 ರಲ್ಲಿ ಸೋಹೆಲ್ ಕಥುರಿಯಾ ಅನ್ನೋರನ್ನ ಪ್ರೀತಿಸ್ತೀನಿ ಅಂತ ಹೇಳಿದ್ರು. ಸೋಹೆಲ್ ಗೆ ಈ ಹಿಂದೆ ಮದುವೆ ಆಗಿತ್ತು. ಡಿವೋರ್ಸ್ ಆಗಿತ್ತು. ಹನ್ಸಿಕಾ ಅವ್ರಿಗೆ ಎರಡನೇ ಹೆಂಡತಿ. ಇಬ್ಬರೂ ಪ್ರೀತಿಸೋಕೆ ಕಾರಣ ಅವರ ಫ್ರೆಂಡ್. ಹನ್ಸಿಕಾ ಫ್ರೆಂಡ್‌ರನ್ನೇ ಸೋಹೆಲ್ ಮೊದಲು ಮದುವೆ ಆಗಿದ್ರು. ಆಗ ಹನ್ಸಿಕಾ ಜೊತೆ ಪರಿಚಯ ಆಗಿ, ಮೊದಲ ಹೆಂಡ್ತಿಗೆ ಡಿವೋರ್ಸ್ ಕೊಟ್ಟು ಹನ್ಸಿಕಾಳನ್ನ ಮದುವೆ ಆದ್ರು.

34
ಗಂಡನಿಂದ ದೂರ ಆಗ್ತಿದ್ದಾರಾ ಹನ್ಸಿಕಾ?

ಹನ್ಸಿಕಾ ಮದುವೆ ಜೈಪುರದ ಅರಮನೆಯಲ್ಲಿ ಆಯ್ತು. ಅದರ ಡಾಕ್ಯುಮೆಂಟರಿ ಕೂಡ ರಿಲೀಸ್ ಆಯ್ತು. ಗಂಡನ ಜೊತೆ 3 ವರ್ಷ ಇದ್ದ ಹನ್ಸಿಕಾ, ಈಗ ಭಿನ್ನಾಭಿಪ್ರಾಯದಿಂದ ದೂರ ಇದ್ದಾರಂತೆ. ಈಗ ಹನ್ಸಿಕಾ ಅಮ್ಮನ ಮನೇಲಿ ಇದ್ದಾರಂತೆ. ಏನ್ ಪ್ರಾಬ್ಲಮ್ ಅಂತ ಗೊತ್ತಿಲ್ಲ. ಆದರೆ ಇಬ್ಬರೂ ಬೇರೆ ಇದ್ದಾರೆ ಅಂತ ಬಾಲಿವುಡ್‌ನಲ್ಲಿ ಸುದ್ದಿ ಹರಿದಾಡ್ತಿದೆ.

44
ವಿಚ್ಛೇದನಕ್ಕೆ ಸಜ್ಜಾದ ಹನ್ಸಿಕಾ

ಈಗ ಬಂದಿರೋ ಸುದ್ದಿ ಪ್ರಕಾರ ಹನ್ಸಿಕಾ ಮತ್ತು ಸೋಹೆಲ್ ವಿಚ್ಛೇದನಕ್ಕೆ ಕೋರ್ಟ್ ಮೆಟ್ಟಿಲು ಏರ್ತಿದ್ದಾರಂತೆ. ಬೇಗನೆ ವಿಚ್ಛೇದನ ಸುದ್ದಿ ಬರಬಹುದು ಅಂತ ಚರ್ಚೆ ನಡೀತಿದೆ. ಕಳೆದ ಕೆಲವು ವರ್ಷಗಳಿಂದ ಕಾಲಿವುಡ್‌ನಲ್ಲಿ ವಿಚ್ಛೇದನ ಜಾಸ್ತಿ ಆಗ್ತಿದೆ. ಧನುಷ್, ಜಿ.ವಿ.ಪ್ರಕಾಶ್, ರವಿ ಮೋಹನ್, ನಿರ್ದೇಶಕ ಬಾಲ, ಸಂಗೀತ ನಿರ್ದೇಶಕ ಇಮಾನ್, ನಟಿ ಸಮಂತಾ, ಸಂಗೀತ ನಿರ್ದೇಶಕ ಎ.ಆರ್.ರಹಮಾನ್ ವಿಚ್ಛೇದನ ಪಡೆದಿದ್ದಾರೆ. ಈಗ ಹನ್ಸಿಕಾ ಹೆಸರೂ ಸೇರ್ತಿದೆ.

Read more Photos on
click me!

Recommended Stories