2007ರಲ್ಲಿ ರಿಲೀಸ್ ಆಗಿದ್ದ ಆಮೀರ್ ಖಾನ್ (Aamir Khan) ನಟನೆಯ ತಾರೆ ಜಮೀನ್ ಪರ್ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ. ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದ ಈ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ. ಚಿತ್ರದಲ್ಲಿ ಬಾಲ ನಟನಾಗಿ ಕಾಣಿಸಿಕೊಂಡಿದ್ದ 8ವರ್ಷದ ಮಗು ದರ್ಶೀಲ್ ಸಫಾರಿಗೆ ಈಗ 25 ವರ್ಷ.
2007ರಲ್ಲಿ ರಿಲೀಸ್ ಆಗಿದ್ದ ಆಮೀರ್ ಖಾನ್ (Aamir Khan) ನಟನೆಯ ತಾರೆ ಜಮೀನ್ ಪರ್ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ. ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದ ಈ ಸಿನಿಮಾ ಯಾರಿಗೆ ತಾನೆ ಗೊತ್ತಿಲ್ಲ. ಚಿತ್ರದಲ್ಲಿ ಬಾಲ ನಟನಾಗಿ ಕಾಣಿಸಿಕೊಂಡಿದ್ದ 8ವರ್ಷದ ಮಗು ದರ್ಶೀಲ್ ಸಫಾರಿಗೆ ಈಗ 25 ವರ್ಷ.
28
ಚಿತ್ರದಲ್ಲಿ ಇಶಾನ್ ಅವಸ್ತಿ ಎನ್ನುವ ಪಾತ್ರದಲ್ಲಿ ದರ್ಶೀಲ್ ಸಫಾರಿ (Darsheel Safary) ಕಾಣಿಸಿಕೊಂಡಿದ್ದರು. ಕಲಿಕೆಯ ಸಮಸ್ಯೆಯಿಂದ ಬಳಲುತ್ತಿರುವ ಮಗುವಿನ ಪಾತ್ರವನ್ನು ಅವರು ನಿರ್ವಹಿಸಿದ್ದರು. ಈ ಪಾತ್ರ ದರ್ಶೀಲ್ ಅವರಿಗೆ ರಾತ್ರೋರಾತ್ರಿ ಸ್ಟಾರ್ ಗಿರಿ ತಂದುಕೊಟ್ಟಿತ್ತು.
38
9 ಮಾರ್ಚ್ 1997ರಂದು ಮುಂಬೈನಲ್ಲಿ ಜನಿಸಿದ ದರ್ಶೀಲ್ ಗೆ ಈಗ 25 ವರ್ಷ. ತಾರೆ ಜಾಮಿ ಪರ್ ಚಿತ್ರದ ನಂತರ ಅವರು ಇನ್ನೂ ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡರು. ಬಾಲನಟನಾಗಿ ಮಿಂಚಿದ್ದ ದರ್ಶೀಲ್ ಬಳಿಕ ಮತ್ತೆ ಬಣ್ಣ ಹಚ್ಚಿರಲಿಲ್ಲ. ಸಿನಿಮಾ ಜೊತೆಗೆ ಕೆಲವು ಟಿವಿ ಧಾರಾವಾಹಿಗಳಲ್ಲಿ ಅತಿಥಿ ಪಾತ್ರವನ್ನು ಮಾಡಿದರು ಮತ್ತು ಕೆಲವು ರಿಯಾಲಿಟಿ ಶೋಗಳ ಭಾಗವಾಗಿದ್ದರು.
48
ಸದ್ಯ ಹೀರೋ ಆಗಿ ಮಿಂಚಲು ಸಜ್ಜಾಗಿರುವ ದರ್ಶೀಲ್ ಸಿನಿಮಾ ಜೀವನದ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ದರ್ಶೀಲ್ ಈಗಾಗಲೇ ಸಿನಿಮಾ ಆಫರ್ ಬರುತ್ತಿವೆ ಎಂದು ಹೇಳಿದ್ದಾರೆ.
58
'ನನ್ನ ತಂದೆ ಈಗಲೂ ಆಮೀರ್ ಖಾನ್ ಜೊತೆ ಸಂಪರ್ಕದಲ್ಲಿದ್ದಾರೆ. ನನ್ನ ವೃತ್ತಿ ಮತ್ತು ಆಯ್ಕೆಗಳ ಬಗ್ಗೆ ಆಮೀರ್ ಖಾನ್ ಮಾರ್ಗದರ್ಶನ ನೀಡುತ್ತಿದ್ದಾರೆ' ಎಂದು ಹೇಳಿದ್ದಾರೆ.
68
ನೆಪೋಟಿಸಂ ಮತ್ತು ಸ್ಟಾರ್ ಮಕ್ಕಳ ಬಗ್ಗೆಪ್ರತಿಕ್ರಿಯೆ ನೀಡಿದ ದರ್ಶೀಲ್, ಪ್ರಭಾವ ಎಲ್ಲಾ ಕಡೆ ಬಳಸಲಾಗುತ್ತದೆ. ಶಾಲೆ, ಕಾಲೇಜು ಎಲ್ಲಾ ಕಡೆ ಇದೆ. ನನಗೆ ನಾಳೆ ಮಗುವಾದರೆ ಅವಳು ಅಥವಾ ಅವನ ಜೀವನ ಸುಲಭಗೊಳಿಸಿದರೆ ಅದೂ ನೆಪೋಟಿಸಂ ಆಗುತ್ತದೆ ಎಂದಿದ್ದಾರೆ.
78
ಸಿನಿಮಾ ಮಾಡಲು ಸಜ್ಜಾಗಿರುವ ದರ್ಶೀಲ್ ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್ ಮತ್ತು ಜಾಹ್ನವಿ ಕಪೂರ್ ಜೊತೆ ನಟಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ. ಬಹುಶಃ ಕೆಲವೇ ವರ್ಷಗಳಲ್ಲಿ ನಾನು ಕೂಡ ನನ್ನ ಹೆಸರು ಪಡೆಯುತ್ತೇನೆ.
88
ತಾರೆ ಜಮೀನ್ ಪರ್ ಸಿನಿಮಾ ಬಳಿಕ ದರ್ಶೀಲ್ 2010ರಲ್ಲಿ ಬಂದ ಬಮ್ ಬಮ್ ಬೋಲೆ ಸಿನಿಮಾದಲ್ಲಿ ನಟಿಸಿದರು. 2011ರಲ್ಲಿ ಜಕ್ಕೋಮೊನ್, ಮಿಡ್ನೈಟ್ ಚಿಲ್ಡ್ರನ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಇದೀಗ ಹೀರೋ ಆಗಿ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದ್ದಾರೆ.