ತಾಪ್ಸಿ ಪನ್ನು:
ರಶ್ಮಿ ರಾಕೆಟ್ ಸಿನಿಮಾ ಬಿಡುಗಡೆಗೆ ಸಜ್ಜಾಗಿರುವ ತಾಪ್ಸಿ ಪನ್ನು ಒಮ್ಮೆ ಅಭಿಮಾನಿಯಿಂದ ಮದುವೆಯ ಪ್ರಪೋಸಲ್ ಪಡೆದರು. 'ತಾಪ್ಸಿ ಪನ್ನು, ನಾನು ನಿಮ್ಮನ್ನು ಪ್ರೀತಿಸುತ್ತೇನೆ. ನನ್ನನ್ನು ಮದುವೆಯಾಗುತ್ತೀರಾ? ನಾನು ವರ್ಜೀನ್, ಅಲ್ಕೊಹಾಲ್ ಸೇವಸುವುದಿಲ್ಲ, ಸಸ್ಯಾಹಾರಿ, ಸುಳ್ಳು-ಶೋಧಕ ಪರೀಕ್ಷೆ, ನಾರ್ಕೋ-ಪರೀಕ್ಷೆ, ಬ್ರೈನ್ ಮ್ಯಾಪಿಂಗ್ ಪರೀಕ್ಷೆಗಳಿಗೆ ಸದಾ ಸಿದ್ಧ' ಎಂದು ತಾಪ್ಸಿಗೆ ಫ್ಯಾನ್ ಹೇಳಿದ್ದರು. ಇದು ಅತ್ಯುತ್ತಮ ಪ್ರಪೋಸಲ್ ಎಂದು ಕರೆದ ತಾಪ್ಸಿ, 'ಬಾಸ್ ಇದಕ್ಕಿಂತ ಹೆಚ್ಚು ಇನ್ನೇನು ಬೇಕು ಲೈಫ್‌ನಲ್ಲಿ' ಎಂದು ಉತ್ತರಿಸಿದ್ದರು.