ಮಸ್ತ್ ಫೋಟೋ ಹಂಚಿಕೊಂಡ ತಾಪ್ಸಿ ಪನ್ನು: ಫಿಟ್ನೆಸ್‌ಗೆ ಫ್ಯಾನ್ಸ್ ಫಿದಾ

Published : Jun 10, 2023, 05:03 PM IST

ನಟಿ ತಾಪ್ಸಿ ಪನ್ನು ಶೇರ್ ಮಾಡಿರುವ ಫೋಟೋಗಳಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಆಬ್ಸ್ ನೋಡಿ ಅಭಿಮಾನಿಗಳು ವಾವ್ ಎನ್ನುತ್ತಿದ್ದಾರೆ. 

PREV
17
ಮಸ್ತ್ ಫೋಟೋ ಹಂಚಿಕೊಂಡ ತಾಪ್ಸಿ ಪನ್ನು: ಫಿಟ್ನೆಸ್‌ಗೆ ಫ್ಯಾನ್ಸ್ ಫಿದಾ

ಪ್ರತಿಭಾವಂತ ನಟಿ ತಾಪ್ಸಿ ಪನ್ನು ಆಗಾಗ ಸುದ್ದಿಯಾಗುತ್ತಿರುತ್ತಾರೆ. ಬೋಲ್ಡ್ ಹೇಳಿಕೆ ಜೊತೆಗೆ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ನಟಿ ತಾಪ್ಸಿ ಇದೀಗ ಶೇರ್ ಮಾಡಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ. ತಾಪ್ಸಿ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. 

27

ತಾಪ್ಸಿ ಪನ್ನು ಸಾಮಾಜಿಕ ಜಾಲತಾಣದಲ್ಲಿ ಅಷ್ಟು ಅಕ್ಟೀವ್ ಆಗಿಲ್ಲ. ಸದಾ ಫೋಟೋಶೂಟ್ ಅಂತ ಶೇರ್ ಮಾಡುತ್ತಿರುವುದಿಲ್ಲ. ಆದರೀಗ ಹಂಚಿಕೊಂಡಿರುವ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದು ಅಭಿಮಾನಿಗಳು ಮೆಚ್ಚುಗೆ ಕಾಮೆಂಟ್ ಮಾಡುತ್ತಿದ್ದಾರೆ. 

37

ತಾಪ್ಸಿ ಮಾಡ್ರನ್ ಬಾರ್ಬಿಯ ಹಾಗೆ ಮಿಂಚಿದ್ದಾರೆ. ಪೋಟೋದಲ್ಲಿ ಫಿಟ್ನೆಸ್ ಎದ್ದು ಕಾಣುತ್ತಿದೆ. ಆಬ್ಸ್ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ಕಾಮೆಂಟ್ ಮಾಡಿ ಬೆಂಕಿ ಇಮೋಜಿ ಹಾಕುತ್ತಿದ್ದಾರೆ. ತನ್ನ ಮಸ್ತ್ ಲುಕ್ ಮೂಲಕ ತಾಪ್ಸಿ ಅಭಿಮಾನಿಗಳನ್ನು ಮೋಡಿ ಮಾಡಿದ್ದಾರೆ. 

47

ತಾಪ್ಸಿ ಸಿನಿಮಾದಿಂದ ಬ್ರೇಕ್ ಪಡೆದು ಆಗಾಗ ಪ್ರವಾಸಕ್ಕೆ ತೆರಲುತ್ತಿರುತ್ತಾರೆ. ಇತ್ತೀಚೆಗಷ್ಟೆ ವಿದೇಶಕ್ಕೆ ಹಾರಿದ್ದ ತಾಪ್ಸಿ ಮಸ್ತ್ ಮಜಾ ಮಾಡಿದ್ದರು. ಫೋಟೋಗಳನ್ನು ಸಹ ಶೇರ್ ಮಾಡಿದ್ದರು. ಬೀಚ್‌ನಲ್ಲಿ ಎಂಜಾಯ್ ಮಾಡಿರುವ ತಾಪ್ಸಿ ತರಹೇವಾರಿ ಪೋಸ್ ನೀಡಿದ್ದರು. 

57

ಕಪ್ಪು ಬಣ್ಣದ ಸ್ವಿಮ್ ಸೂಟ್ ಧರಿಸಿ ತಾಪ್ಸಿ  ಕ್ಯಾಮರಾಗೆ ಬೆನ್ನು ತೋರಿಸಿ ನಿಂತಿದ್ದರು. ಗುಂಗರು ಕೂದಲು ಬಿಟ್ಟು ಬೀಚ್ ಮುಂದೆ ನಿಂತಿದ್ದ ತಾಪ್ಸಿ ಫೋಟೋಗೆ ಭಾರಿ ಮೆಚ್ಚಿಗೆ ಬಂದಿತ್ತು. 

67

ತಾಪ್ಸಿ ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಜೊತೆಗೆ ಸೌತ್ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಕೊನೆಯದಾಗಿ ಬ್ಲರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. 
 

77

ಸದ್ಯ ತಾಪ್ಸಿ ತಮಿಳಿನಲ್ಲಿ ಜನ ಗಣ ಮನ, ಏಲಿಯನ್, ಶಾರುಖ್ ಖಾನ್ ಜೊತೆ ಡಂಕಿ ಸೇರಿದಂತೆ ಅೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ತಾಪ್ಸಿ ಶಾರುಖ್ ಜೊತೆ ನಟಿಸುತ್ತಿದ್ದರು ಇಬ್ಬರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. 

Read more Photos on
click me!

Recommended Stories