ಸುಶ್ಮಿತಾ ಸೇನ್ ಸೇರಿದಂತೆ ಬ್ರೆಸ್ಟ್ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಗೆ ಒಳಗಾದ ಟಾಪ್ ನಟಿಯರು

First Published | Mar 12, 2022, 5:13 PM IST

ಬಾಲಿವುಡ್ ದಿವಾಗಳು ತಮ್ಮನ್ನು ತಾವು ಸುಂದರವಾಗಿರಿಸಿಕೊಳ್ಳಲು ಏನು ಬೇಕಾದರೂ ಮಾಡಿಕೊಳ್ಳುತ್ತಾರೆ. ಫಿಗರ್‌ ಕಾಪಾಡಿಕೊಳ್ಳಲು, ಆಹಾರವನ್ನು ನಿಯಂತ್ರಿಸಿ ಅವರು ಹಗಲು ರಾತ್ರಿ ಜಿಮ್‌ನಲ್ಲಿ ಬೆವರುತ್ತಾರೆ. ತ್ವಚೆಯ ಆರೈಕೆಗಾಗಿ ಲಕ್ಷಾಂತರ ಖರ್ಚು ಮಾಡುತ್ತಾರೆ. ಇದು ಕೆಲಸ ಮಾಡದಿದ್ದರೆ, ನಂತರ ಶಸ್ತ್ರಚಿಕಿತ್ಸೆಯ ಮೊರೆ ಹೋಗುತ್ತಾರೆ. ಪ್ರಿಯಾಂಕಾ ಚೋಪ್ರಾ (Priyanka chopra), ಸುಶ್ಮಿತಾ ಸೇನ್ (sushmita sen) ಸೇರಿದಂತೆ ಅನೇಕ ಟಾಪ್ ನಟಿಯರಿದ್ದಾರೆ, ಅವರು ತಮ್ಮನ್ನು ತಾವು ಆಕರ್ಷಕವಾಗಿಸಿಕೊಳ್ಳಲು ಪ್ಲಾಸ್ಟಿಕ್ ಸರ್ಜರಿಯಿಂದ ಸ್ತನ ಇಂಪ್ಲಾಂಟ್ ಶಸ್ತ್ರಚಿಕಿತ್ಸೆಯವರೆಗೆ (Breast Implant Surgery)  ಹಲವು  ಸರ್ಜರಿಗಳ ಮೊರೆ ಹೋಗುವುದು ಕಾಮನ ಆಗಿದೆ. ಸ್ತನ ಇಂಪ್ಲಾಂಟ್ ಶಸ್ತ್ರಚಿಕಿತ್ಸೆ  ಶಸ್ತ್ರಚಿಕಿತ್ಸೆಗೆ ಒಳಗಾದ ನಟಿಯರ ವಿವರ ಇಲ್ಲಿದೆ.

ವಿಶ್ವದೆಲ್ಲೆಡೆ ತನ್ನ ಸೌಂದರ್ಯದಿಂದ ಗಮನ ಸೆಳೆದ  ಸುಶ್ಮಿತಾ ಸೇನ್, ವಿಶ್ವ ಸುಂದರಿ ಆದ ನಂತರ, ತನ್ನನ್ನು ತಾನು ಹೆಚ್ಚು ಸುಂದರವಾಗಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಸ್ತನ ಕಸಿ ಮಾಡಿಸಿಕೊಂಡರು. ಈ ವಿಷಯವನ್ನು ಸ್ವತಃ ನಟಿಯೇ ಹಲವು ಸಂದರ್ಭಗಳಲ್ಲಿ ಬಹಿರಂಗಪಡಿಸಿದ್ದಾರೆ.

ಶಿಲ್ಪಾ ಶೆಟ್ಟಿ ಬಾಲಿವುಡ್‌ನ ಪರ್ಫೆಕ್ಟ್ ಫಿಗರ್ ನಟಿಯರಲ್ಲಿ ಒಬ್ಬರು. ತನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಯೋಗವನ್ನು ಆಶ್ರಯಿಸುತ್ತಾರೆ. ಅವರು ಇನ್ನಷ್ಟೂ ಅಕರ್ಷಕವಾಗಿ ಕಾಣಲು ಸ್ತನ ಕಸಿ  ಸಹ ಆಶ್ರಯಿಸಿದ್ದಾರೆ ಎಂದು ಅವರ ಬಗ್ಗೆಯೂ ಹೇಳಲಾಗುತ್ತದೆ.

Tap to resize

ಬಿಪಾಶಾ ಬಸು ಬಾಲಿವುಡ್‌ಗೆ ಕಾಲಿಟ್ಟಾಗ ಅಷ್ಟೊಂದು ಹಾಟ್ ಆಗಿರಲಿಲ್ಲ. ಆ ಸಮಯದಲ್ಲಿ ಅವರ ಫಿಗರ್‌ ಇಗಿನಷ್ಟೂ ಆಕರ್ಷಕವಾಗಿರಲಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ನಟಿ ತನ್ನನ್ನು ತಾನು ಹೆಚ್ಚು ಸುಂದರವಾಗಿಸಲು ಸ್ತನ ಕಸಿ ಮಾಡಿಸಿಕೊಂಡಿದ್ದಾರೆ.

ಮಲ್ಲಿಕಾ ಶೆರಾವತ್ ಅವರ ಹಳೆಯ ಮತ್ತು ಈಗಿನ ಫೋಟೋವನ್ನು ನೋಡಿದರೆ, ಅವರು ಸ್ತನ ಕಸಿ ಮಾಡಿಸಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಮಲ್ಲಿಕಾ ಶೆರಾವತ್ 'ಮರ್ಡರ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಮೊದಲ ಸಿನಿಮಾದಿಂದಲೇ ಹಾಟ್ ನೆಸ್ ಹರಡಿದ್ದರು.

ಕಂಗನಾ ರಣಾವತ್ ಇಂದು ಬಾಲಿವುಡ್‌ನ ಅತ್ಯಂತ ಬಹಿರಂಗವಾಗಿ ಮಾತನಾಡುವ ನಟಿಯರಲ್ಲಿ ಒಬ್ಬರು. ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಸಮಯದಲ್ಲಿ ಕಂಗನಾ ಅವರ ಫೀಗರ್‌ ಈಗಿನಷ್ಟು ಆಕರ್ಷಕವಾಗಿರಲಿಲ್ಲ. ಮಾಧ್ಯಮ ವರದಿಗಳ ಪ್ರಕಾರ, ಅವರು ತಮ್ಮ ಫಿಗರ್‌ಅನ್ನು ಇನ್ನಷ್ಟು ಸುಂದರಗೊಳಿಸಲು ಬ್ರೆಸ್ಟ್ ಇಂಪ್ಲಾಂಟ್ ಆಶ್ರಯಿಸಿದ್ದಾರೆ.

ಸ್ವತಃ ರಾಖಿ ಸಾವಂತ್ ಅವರು ಸ್ತನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಬಾಲಿವುಡ್‌ಗೆ ಎಂಟ್ರಿ ಕೊಡಬೇಕು ಎಂದಾಗ ಸುಂದರವಾಗಿ ಕಾಣುವಂತೆ ಸಲಹೆ ನೀಡಲಾಗಿತ್ತು ಎಂದು ಹೇಳಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸ್ತನ ಕಸಿ ಮಾಡಿಸಿಕೊಂಡಿದ್ದರು. ಬಿಗ್ ಬಾಸ್ 15 ರಲ್ಲೂ ಅವರು ಸ್ತನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ಹೇಳಿದ್ದರು.

ಆಯೇಷಾ ಟಾಕಿಯಾ ಅನೇಕ ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೂಲಕ ಸುಂದರವಾಗಲು ಪ್ರಯತ್ನಿಸಿದರು. ಇದಕ್ಕಾಗಿ ಹಲವು ಬಾರಿ ಅವರು ಸುದ್ದಿ ಕೂಡ ಆಗಿದ್ದಾರ. ಮುಖದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಲ್ಲದೆ, ಆಯೇಶಾ ಟಾಕಿಯಾ ಸ್ತನ ಕಸಿ ಕೂಡ ಮಾಡಿಸಿ ಕೊಂಡಿದ್ದಾರೆ. ಫೋಟೋಗಳು ಇದಕ್ಕೆ ಸಾಕ್ಷಿ ಆಗಿವೆ.

ನಟಿ ಪೂನಂ ಪಾಂಡೆ ತಮ್ಮ ಬೋಲ್ಡ್‌ನೆಸ್‌ ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಪೂನಂ ಪಾಂಡೆ ಸಹ ಸ್ತನ ಕಸಿ ಮಾಡಿಸಿಕೊಂಡಿದ್ದಾರೆ ಎಂದು ಅವರ ಬಗ್ಗೆಯೂ ಹೇಳಲಾಗುತ್ತದೆ. ಆದರೆ, ಈ ಬಗ್ಗೆ ಕೇಳಿದಾಗ ನಿರಾಕರಿಸಿದರು. ಆದರೆ ಈಕೆಯ ಹಾಟ್ ನೆಸ್ ನ ಗುಟ್ಟೇ ಬ್ರೆಸ್ಟ್‌ ಇಂಪ್ಲಾಂಟ್ ಎಂದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.

Latest Videos

click me!