ನಟಿಯ ಕುಟುಂಬದಿಂದ ಪ್ರೀತಿಸಿದ ನಟನನ್ನು ಕೊಲ್ಲುವ ಬೆದರಿಕೆ, ದೂರವಾದ ಸೂಪರ್‌ಸ್ಟಾರ್ ಜೋಡಿ!

ಸಿನಿಮಾದ ಕಪ್ಪು ಬಿಳುಪು ಯುಗದಲ್ಲಿ ಚಿತ್ರರಂಗದ ಅತ್ಯಂತ ಅಚ್ಚುಮೆಚ್ಚಿನ ಮತ್ತು ಪ್ರಸಿದ್ದಿ ಪಡೆದಿದ್ದ ಈ ಜೋಡಿ ಪ್ರೀತಿಯಲ್ಲಿ ಬಿದ್ದರು. ಆದರೆ ಇವರಿಬ್ಬರ ಧರ್ಮ ಬೇರೆಯಾಗಿತ್ತು. ಹಿಂದೂ ನಟನನ್ನು ಮದುವೆಯಾಗಲು ಮುಸ್ಲಿಂ ನಟಿಯ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಮಾತ್ರವಲ್ಲ ಮದುವೆಯಾದರೆ ನಟನನ್ನು ಕೊಲ್ಲುವ ಬೆದರಿಕೆ ನಟಿಯ ಕುಟುಂಬದಿಂದ ಹಾಕಲಾಗಿತ್ತು. ಯಾರು ಆ ನಟ-ನಟಿ ಜೋಡಿ? ಇಲ್ಲಿದೆ ಅವರ ಸುಂದರ ಪ್ರೇಮ ಕಥೆ.

ನಟಿ ಸುರಯ್ಯ (Suraiya)ಇಂದು ನಮ್ಮೊಂದಿಗೆ ಇಲ್ಲ ಆದರೆ ಅವರ ಅದ್ಭುತ ಅಭಿನಯ ಮತ್ತು ತುಂಬಾ ಸುಮಧುರ ಧ್ವನಿ ಎಂದೆಂದಿಗೂ ಅಮರವಾಗಿದೆ. ನಟಿ ಸುರಯ್ಯ ಅವರ ಹೆಸರು ಇಂದಿನ ಪೀಳಿಗೆಗೆ ತಿಳಿದಿಲ್ಲದಿರಬಹುದು, ಆದರೆ ಅವರ ಕಾಲದ ಪ್ರಸಿದ್ಧ ನಟಿ ಮತ್ತು ಗಾಯಕಿ. ಅವರು ಐವತ್ತು ಮತ್ತು ಅರವತ್ತರ ದಶಕದಲ್ಲಿ  ಬಾಲಿವುಡ್‌ನ ಅತಿದೊಡ್ಡ ಆಲ್‌ರೌಂಡರ್ ನಟಿಯಾಗಿದ್ದರು.  

ಮಿರ್ಜಾ ಗಾಲಿಬ್ ಚಿತ್ರದ 'ದಿಲೇ ನಾದಾನ್ ತುಜೆ ಹುವಾ ಕ್ಯಾ ಹೈ' ಅಥವಾ 'ಬಡಿ ಬೆಹೆನ್' ಸಿನಿಮಾದ 'ವೋ ಪಾಸ್ ರಹೇ ಯಾ ಫಾಸ್‌ ರಹೇ ನಜ್ರೋನ್ ಮೇ ಸಮರೇ ಹೈ'  ಹಾಡೇ ಇರಲಿ ಇಂಥ ಹಾಡುಗಳು ಸುರಯ್ಯ ತಮ್ಮ ಕಂಠದಾನದ ಮೂಲಕ ಇತಿಹಾಸದಲ್ಲಿ ಸ್ಮರಣೀಯವಾಗಿಸಿದ್ದಾರೆ.  ವಿಶೇಷವೆಂದರೆ ತಾವು ನಟಿಸಿದ ಚಿತ್ರಗಳಿಗೆ ಮಾತ್ರ ತಮ್ಮ ಧ್ವನಿಯನ್ನು ನೀಡಿದ್ದರು.


ಸುರೈಯಾ  ಮತ್ತು ಬಾಲಿವುಡ್‌ನ ಎವರ್‌ಗ್ರೀನ್ ಸ್ಟಾರ್ ದೇವ್ ಆನಂದ್ ಅವರೊಂದಿಗಿನ ಸಂಬಂಧ ಗುಟ್ಟಾಗಿ ಉಳಿದಿರಲಿಲ್ಲ.  ದೇವ್ ಆನಂದ್ ಸುರಯ್ಯನನ್ನು ಎಷ್ಟು ಹುಚ್ಚನಂತೆ ಪ್ರೀತಿಸುತ್ತಿದ್ದರು ಎಂದರೆ ನಟಿಗಾಗಿ ಅವರು ಸಾಯಲು ಸಹ ಸಿದ್ಧರಾಗಿದ್ದರು. ಇವರ  ಸಂಬಂಧ ವಿದ್ಯಾ ಚಿತ್ರದ ಸೆಟ್‌ನಲ್ಲಿ ಪ್ರಾರಂಭವಾಯಿತು. 

ನದಿಯ ದಡದಲ್ಲಿ  ಶೂಟಿಂಗ್‌ನಲ್ಲಿದ್ದಾಗ ಸುರಯ್ಯ ಇದ್ದಕ್ಕಿದ್ದಂತೆ ಆಳವಾದ ನೀರಿನ ಹೊಂಡಕ್ಕೆ ಬಿದ್ದು, ಮುಳುಗಲು ಪ್ರಾರಂಭಿಸಿದರು. ಆಗ ದೇವ್ ಆನಂದ್ ಸುರಯ್ಯನನ್ನು ರಕ್ಷಿಸಲು ನದಿಗೆ ಹಾರಿ ಕಾಪಾಡಿದ್ದರು.

ಇಬ್ಬರ ಪ್ರೀತಿ ವಿಷಯ ಮದುವೆಯವರೆಗೂ ಮುಟ್ಟಿತು. ಆದರೆ ಸುರಯ್ಯ ಅವರ ಕುಟುಂಬ ಈ ಸಂಬಂಧಕ್ಕೆ ಅಡ್ಡಿಯಾಯಿತು. ಸುರಯ್ಯ ಮುಸ್ಲಿಂ ಕುಟುಂಬದವರಾಗಿದ್ದರು. ದೇವ್ ಹಿಂದೂ ಕುಟುಂಬದಿಂದ ಬಂದವರಾಗಿದ್ದರು.  ನಂತರ ಅವರ ಪ್ರೇಮಕಥೆ ಅಲ್ಲಿಗೆ ಮುಕ್ತಾಯವಾಯಿತು.

ಸುರಯ್ಯ ಅವರಲ್ಲಿ ದೇವ್‌ ಪ್ರೇಮ ನಿವೇದನೆ ಮಾಡಿಕೊಂಡಾಗ 3000 ರೂಪಾಯಿ ಮೌಲ್ಯದ ಉಂಗುರವನ್ನು ನೀಡಿದ್ದರು. ಇಬ್ಬರ ಬ್ರೇಕಪ್‌ ಆಗಿ ಹಲವಾರು ವರ್ಷಗಳ ನಂತರ ನೀಡಿದ ಸಂದರ್ಶನದಲ್ಲಿ ತನ್ನ ಅಜ್ಜಿ ಮತ್ತು ತಾಯಿಯ ಚಿಕ್ಕಪ್ಪ ಸೇರಿ ದೇವ್ ಆನಂದ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರಿಂದ ನಾನು ಈ ಸಂಬಂಧಕ್ಕೆ ವಿದಾಯ ಹೇಳಬೇಕಾಯ್ತು ಎಂದು ಹೇಳಿದ್ದರು.

1951 ರಲ್ಲಿ ದೇವ್ ಆನಂದ್  ಅವರಿಂದ ಬೇರ್ಪಟ್ಟಾಗ ಸುರಯ್ಯ ಅವರಿಗೆ 22 ವರ್ಷ.  ಬಳಿಕ ಸುರಯ್ಯ ಅವರ ಅಜ್ಜಿ ಆನಂದ್ ಜೊತೆಗೆ ಯಾವುದೇ ಚಲನಚಿತ್ರಗಳಿಗೆ ಸಹಿ ಹಾಕದಂತೆ ತಡೆದರು. ಹೃದಯಾಘಾತದಿಂದ, ಸುರಯ್ಯ 74 ನೇ ವಯಸ್ಸಿನಲ್ಲಿ ಸಾಯುವವರೆಗೂ ಅವಿವಾಹಿತರಾಗಿದ್ದರು.

ದೇವ್ ಆನಂದ್ 1953 ರಲ್ಲಿ ಟ್ಯಾಕ್ಸಿ ಡ್ರೈವರ್ ಚಿತ್ರದ ಸೆಟ್‌ಗಳಲ್ಲಿ ನಟಿ ಕಲ್ಪನಾ ಕಾರ್ತಿಕ್ ಅವರನ್ನು ಭೇಟಿಯಾದರು ಮತ್ತು ಇಬ್ಬರೂ ಪ್ರೀತಿಯಲ್ಲಿದ್ದರು.  1954ರಲ್ಲಿ ಅವರು ರಹಸ್ಯವಾಗಿ  ಮದುವೆಯಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಸುನೀಲ್ ಆನಂದ್ ಮತ್ತು ದೇವಿನಾ ಆನಂದ್. ಸೆ.26 ರಂದು ದೇವ್‌ ಆನಂದ್‌ ಅವರ 100 ನೇ ಬರ್ತ್‌ ಆನಿವರ್ಸರಿ ಆಚರಿಸಲಾಗಿದೆ.

Latest Videos

click me!