ಕೆಲವು ದಿನಗಳ ಹಿಂದೆ ತಮ್ಮ "ಖೈದಿ ನಂ. 150" ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದ ನಟ ಕಾರ್ತಿ, ಹೈದರಾಬಾದ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆಗ ಆ ಕಾರ್ಯಕ್ರಮದ ನಿರೂಪಕ ನಟ ಕಾರ್ತಿಯವರನ್ನು "ನಿಮಗೆ ಲಡ್ಡು ಬೇಕಾ" ಎಂದು ಕೇಳಿದಾಗ, ಹೈದರಾಬಾದ್ ನಲ್ಲಿ ಲಡ್ಡುವಿನ ಬಗ್ಗೆ ಮಾತನಾಡಬಾರದು. ಅದು ತುಂಬಾ ಸೂಕ್ಷ್ಮವಾದ ವಿಷಯ ಎಂದು ಸ್ವಲ್ಪ ನಕ್ಕು ಹೇಳಿದ್ದರು. ಅವರ ಆ ವಿಡಿಯೋ ದೊಡ್ಡ ಮಟ್ಟದಲ್ಲಿ ವೈರಲ್ ಆದ ನಂತರ, ತಕ್ಷಣವೇ ಪವನ್ ಕಲ್ಯಾಣ್ ಅದಕ್ಕೆ ತುಂಬಾ ಕೋಪದಿಂದ ಉತ್ತರ ನೀಡಿದ್ದರು. ಅದರಲ್ಲಿ ನಟರು ಸಾರ್ವಜನಿಕವಾಗಿ ಸೂಕ್ಷ್ಮ ವಿಷಯಗಳ ಬಗ್ಗೆ ಮಾತನಾಡುವಾಗ ನೂರು ಬಾರಿ ಯೋಚಿಸಿ ಮಾತನಾಡಬೇಕು. ಅದು ಎಲ್ಲರಿಗೂ ಒಳ್ಳೆಯದು ಎಂದು ಹೇಳಿದ್ದರು. ಆಂಧ್ರ ಉಪ ಮುಖ್ಯಮಂತ್ರಿ ಮತ್ತು ನಟ ಪವನ್ ಕಲ್ಯಾಣ್ ಅವರ ಈ ಪೋಸ್ಟ್ ಗೆ ತಕ್ಷಣವೇ ಪ್ರತಿಕ್ರಿಯಿಸಿದ ನಟ ಕಾರ್ತಿ, ಆ ದಿನ ನಾನು ಮಾತನಾಡಿದ್ದು ತಪ್ಪಾಗಿದ್ದರೆ ನನ್ನನ್ನು ಕ್ಷಮಿಸಬೇಕು ಎಂದೂ, ತಿರುಪತಿ ಬಾಲಾಜಿ ಭಕ್ತನಾಗಿ ಸಂಪ್ರದಾಯಗಳನ್ನು ಗೌರವಿಸುವವನು ನಾನು ಎಂದೂ ಹೇಳಿದ್ದರು.