ಶ್ರೀದೇವಿ ಅಹಂಕಾರದ ಬಗ್ಗೆ ಜಯಪ್ರದಾಗಿತ್ತಾ ಆಕ್ರೋಶ?

First Published | Sep 28, 2024, 12:52 PM IST

ಶ್ರೀದೇವಿ, ಜಯಪ್ರದಾ. ಇಬ್ಬರೂ ದಕ್ಷಿಣ ಭಾರತೀಯ ನಟಿಯರು. ಆದರೆ, ಬಹುತೇಕ ಒಂದೇ ಕಾಲದಲ್ಲಿ ಬಾಲಿವುಡ್‌ನಲ್ಲಿ ಮೆರೆದವರು. ಉತ್ತರ ಭಾರತೀಯ ಕಲಾವಿದರಿಗೆ ದಕ್ಷಿಣ ಭಾರತದ ಶಕ್ತಿ ಏನೆಂದು ತೋರಿಸಿಕೊಟ್ಟವರು ಈ ಇಬ್ಬರು. ಸೌಂದರ್ಯ, ಅಭಿನಯದಲ್ಲಿ ಇಬ್ಬರನ್ನೂ ಮೀರಿಸವರು ಯಾರೂ ಇಲ್ಲವೆಂದು ಪ್ರೂವ್ ಮಾಡಿದವರಲ್ಲಿ ಮುಖ್ಯರು. ಇಬ್ಬರ ನಡುವೆ ಸಿಕ್ಕಾಪಟ್ಟೆ ಸ್ಪರ್ಧೆ ಇದ್ದ ಕಾರಣವೋ ಏನೋ, ಜಗಳವೂ ಕಾಮನ್ ಆಗಿತ್ತು. ಶ್ರೀದೇವಿ ದುರಂಹಕಾರವೆಂದು ಓಪನ್ ಆಗಿಯೇ ಸ್ಟೇಟ್‌ಮೆಂಟ್ ಕೊಟ್ಟಿದ್ದರು ಜಯಪ್ರದಾ. ಅತಿಲೋಕ ಸುಂದರಿಗೆ, ಸನಾದಿ ಅಪ್ಪಣ್ಣ ನಟಿ ಜಯಪ್ರದಾ ಹೀಗ್ಯಾಕೆ ಹೇಳಿದ್ದರು? 

ದಕ್ಷಿಣ ಭಾರತದ ಜೊತೆಗೆ ಬಾಲಿವುಡ್‌ನಲ್ಲೂ ಸ್ಟಾರ್ ನಟಿಯಾಗಿ ಮಿಂಚಿದ್ದರು ಶ್ರೀದೇವಿ. ತೆಲುಗು, ತಮಿಳು ಭಾಷೆಗಳಲ್ಲಿ ಅತಿಲೋಕ ಸುಂದರಿ ಎಂಬ ಬಿರುದು ಪಡೆದ ಶ್ರೀ ನಿಜವಾಗಲೂ ತ್ರಿಪುರ ಸುಂದರಿಯೇ. ಆಕೆಯ ಸೌಂದರ್ಯವನ್ನು ಗಂಧರ್ವ ಕನ್ಯೆಯರಿಗೆ ಹೋಲಿಸುತ್ತಿದ್ದರು. ಇವತ್ತಿಗೂ ಆ ಬ್ಯೂಟಿಗೆ ಸರಿಸಾಟಿ ಎನಿಸುವಂಥ ಯಾವ ನಟಿಯೂ ಬಂದಿಲ್ಲ. 

ಅಭಿಮಾನಿಗಳನ್ನು ತಮ್ಮ ಸೌಂದರ್ಯದಿಂದಲೇ ಮಂತ್ರಮುಗ್ಧಗೊಳಿಸಿದ ನಟಿ.. ದಕ್ಷಿಣ ಭಾರತದ ಜೊತೆಗೆ ಬಾಲಿವುಡ್‌ನಲ್ಲೂ ತಮ್ಮ ಸ್ಟಾರ್‌ಡಮ್ ಅನ್ನು ಮುಂದುವರೆಸಿದರು. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ಶ್ರೀದೇವಿ 50ನೇ ವಯಸ್ಸಲ್ಲೇ ಕಣ್ಮುಚ್ಚು ಅಭಿಮಾನಿಗಳಿಗೆ ಆಘಾತ ನೀಡಿದರು. ಇವರು ದುರಂತ ಸಾವು ಇವತ್ತಿಗೂ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸುತ್ತದೆ. 

ಶ್ರೀದೇವಿ ತೆಲುಗು ಮತ್ತು ತಮಿಳಿನಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ಮಾಡಿದ್ದಾರೆ. ತೆಲುಗಿನಲ್ಲಿ  ಮೆಗಾಸ್ಟಾರ್ ಚಿರಂಜೀವಿ, ವೆಂಕಟೇಶ್, ನಾಗಾರ್ಜುನ  ಕಾಂಬಿನೇಷನ್‌ನಲ್ಲಿ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರು ಹಲವು ಬಾರಿ ಸಿನಿಮಾ ವಿಷಯದಲ್ಲಿ ನಿರ್ಮಾಪಕರನ್ನು ತೊಂದರೆಗೀಡು ಮಾಡುತ್ತಿದ್ದರು ಎಂಬ ಆರೋಪವಿದೆ. ಅಷ್ಟೇ ಅಲ್ಲ, ಕೆಲವು ನಟಿಯರೊಂದಿಗೆ ಅವರು ತುಂಬಾ ಸೊಕ್ಕಿನಿಂದ ನಡೆದುಕೊಳ್ಳುತ್ತಿದ್ದರಂತೆ.

Tap to resize

ವಿಶೇಷವಾಗಿ ಕೆಲವು ನಟರನ್ನು ಅವರು ಗಣನೆಗೇ ತೆಗದುಕೊಳ್ಳುತ್ತಿರಲಿಲ್ಲವಂತೆ. ಈ ವಿಷಯದಲ್ಲಿ ಮೊದಲು ಹೇಳಬೇಕೆಂದರೆ ಅದು ಜಯಪ್ರದಾ. ಅವರೊಂದಿಗೆ ಶ್ರೀದೇವಿ ಹೆಚ್ಚು ಸ್ನೇಹದಿಂದ ಇರಲಿಲ್ಲವಂತೆ. ಅಷ್ಟೇ ಅಲ್ಲ, ಶ್ರೀದೇವಿಗೆ ಗರ್ವ ತುಂಬಾ ಜಾಸ್ತಿ ಎಂದು ಒಂದು ಸಂದರ್ಭದಲ್ಲಿ ಜಯಪ್ರದಾ ಹೇಳಿದ್ದರು. ಅವರು ಸಿನಿಮಾ ಬಗ್ಗೆ ಮಾತ್ರ ಮಾತನಾಡುತ್ತಿದ್ದರಂತೆ. 

ಸಿನಿಮಾ ಶೂಟಿಂಗ್‌ನಲ್ಲಿ ಮಾತ್ರ ಆತ್ಮೀಯಳಂತೆ ನಟಿಸುತ್ತಿದ್ದರಂತೆ. ಆಮೇಲೆ ಜಯಪ್ರದಾ ಒಂದು ಕಡೆ ಕುಳಿತರೆ,  ಶ್ರೀದೇವಿ ಅವರಿಂದ ದೂರ ಹೋಗಿ ಬೇರೆ ಕುರ್ಚಿಯಲ್ಲಿ ಕೂರುತ್ತಿದ್ದರಂತೆ. ಕನಿಷ್ಠ ಸೌಜನ್ಯಕ್ಕಾದರೂ ವಿಶ್ ಮಾಡುತ್ತಿರಲಿಲ್ಲವಂತೆ. ಹೀಗೆ ಹಲವರ ವಿಷಯದಲ್ಲಿ ಶ್ರೀದೇವಿ ಹೀಗೆಯೇ ವರ್ತಿಸುತ್ತಿದ್ದರಂತೆ. 
 

ಅಷ್ಟೇ ಅಲ್ಲ, ಎಷ್ಟೇ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದರೂ.. ಪ್ರತಿ ಸಿನಿಮಾಗೂ ನಿರ್ದೇಶಕರಾಗಲಿ.. ನಿರ್ಮಾಪಕರಾಗಲಿ ಯಾರಾದರೂ ಒಬ್ಬರು ಬಂದು... ಇವರು ಜಯಪ್ರದಾ ಎಂದು ಶ್ರೀದೇವಿಗೆ ಪರಿಚಯಿಸಬೇಕಾಗುತ್ತಿತ್ತಂತೆ. ಆದರೆ ಅವರು ನೋಡಿದರೂ ಮಾತನಾಡುತ್ತಿರಲಿಲ್ಲವಂತೆ. ಈ ವಿಷಯವನ್ನು ಒಂದು ಸಂದರ್ಶನದಲ್ಲಿ ಜಯಪ್ರದಾ ಬಹಿರಂಗಪಡಿಸಿದ್ದರು.
 

ಶ್ರೀದೇವಿ ಬಗ್ಗೆ ಹಲವು ಸಂದರ್ಭಗಳಲ್ಲಿ ಇಂತಹ ಕಾಮೆಂಟ್‌ಗಳು ಸಹಜವಾಗಿಯೇ ಕೇಳಿ ಬಂದಿವೆ. ವಾಸ್ತವವಾಗಿ ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿ ಪಾತ್ರಕ್ಕೆ ಶ್ರೀದೇವಿಯನ್ನು ಕೇಳಿದ್ದರಂತೆ ರಾಜಮೌಳಿ. ಆದರೆ ಅವರು ತುಂಬಾ ಗರ್ವದಿಂದ ಉತ್ತರಿಸುವುದರ ಜೊತೆಗೆ, ತುಂಬಾಹಣದ ಬೇಡಿಕೆ ಇಟ್ಟಿದ್ದರಂತೆ. ಅವರ ವರ್ತನೆಯಿಂದ ರಾಜಮೌಳಿ, ಶ್ರೀದೇವಿಯನ್ನು ಆಯ್ಕೆಯನ್ನೇ ಕೈ ಬಿಟ್ಟರಂತೆ.

ಶಿವಗಾಮಿಯಾಗಿ ರಮ್ಯಾಕೃಷ್ಣನ್ ಅವರನ್ನು ನೋಡಿದ ನಂತರ, ಶ್ರೀದೇವಿಯನ್ನು ಆಯ್ಕೆ ಮಾಡಿಕೊಳ್ಳದಿರುವುದು ಒಳ್ಳೆಯದಾಯಿತು ಎಂದು ರಾಜಮೌಳಿ ಹೇಳಿದ್ದರಂತೆ. ಅಷ್ಟೇ ಅಲ್ಲ, ಜಯಪ್ರದಾ ಜೊತೆ ಶ್ರೀದೇವಿ ಜಗಳದ ಬಗ್ಗೆ ಜಯಸುಧಾ ಕೂಡ ಒಂದು ಸಂದರ್ಭದಲ್ಲಿ ಪ್ರಸ್ತಾಪಿಸಿದ್ದಾರೆ. ಈ ವಿಷಯ ಈಗ ವೈರಲ್ ಆಗುತ್ತಿದೆ.  

Latest Videos

click me!