ಚಿತ್ರಗಳು ನಷ್ಟವಾದಾಗ ಕೃಷ್ಣ ತಮ್ಮ ಸಂಭಾವನೆ ಸಮರ್ಪಿಸಿದ್ದೂ ಉಂಟು. ಆದರೆ ಒಂದು ಚಿತ್ರದ ವಿಚಾರದಲ್ಲಿ ಕೃಷ್ಣ ಮತ್ತು ನಿರ್ಮಾಪಕ ವಡ್ಡೆ ರಮೇಶ್ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ದಾಸರಿ ನಾರಾಯಣರಾವ್ ನಿರ್ದೇಶನದಲ್ಲಿ ಕೃಷ್ಣ ನಾಯಕರಾಗಿ, ವಡ್ಡೆ ರಮೇಶ್ ನಿರ್ಮಾಣದಲ್ಲಿ ಒಂದು ಚಿತ್ರ ಆರಂಭವಾಯಿತು. ಎರಡು ಮೂರು ದಿನಗಳಲ್ಲಿ ಚಿತ್ರೀಕರಣ ಆರಂಭವಾಗಲಿದೆ ಎನ್ನುವಷ್ಟರಲ್ಲಿ ತಮ್ಮ ದಿನಾಂಕಗಳನ್ನು ಮತ್ತೊಬ್ಬ ನಿರ್ಮಾಪಕರಿಗೆ ಹೊಂದಿಸಬೇಕೆಂದು ಕೃಷ್ಣ ರಮೇಶ್‌ರನ್ನು ಕೋರಿದರು.