ರಾಮ್ ಚರಣ್ ಈ ಸಿನಿಮಾದಲ್ಲಿ ಡಬಲ್ ರೋಲ್ ಮಾಡ್ತಿದ್ದಾರೆ. ಒಂದು ಪಾತ್ರದಲ್ಲಿ ರಾಜಕಾರಣಿ, ಇನ್ನೊಂದು ಪಾತ್ರದಲ್ಲಿ ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮೊದಲ ಬಾರಿಗೆ ರಾಮ್ ಚರಣ್ ಪಂಚೆ ಧರಿಸಿ ನಟಿಸುತ್ತಿದ್ದಾರೆ. ಕಿಯಾರಾ ಅಡ್ವಾಣಿ ನಾಯಕಿ. ಸುನಿಲ್, ಶ್ರೀಕಾಂತ್, ಎಸ್ ಜೆ ಸೂರ್ಯ ಮುಖ್ಯ ಪಾತ್ರಗಳಲ್ಲಿ ನಟಿಸ್ತಿದ್ದಾರೆ. ಥಮನ್ ಸಂಗೀತ ನಿರ್ದೇಶನ ಮಾಡ್ತಿದ್ದಾರೆ.