ಪತ್ನಿಯನ್ನು ಎತ್ತಿಕೊಂಡು ರೊಮ್ಯಾಂಟಿಕ್‌ ಆಗಿ ಗೃಹಪ್ರವೇಶ ಮಾಡಿದ ಸನ್ನಿ ಪತಿ!

First Published | Jul 17, 2021, 8:41 AM IST

ಬಾಲಿವುಡ್‌ ನಟಿ ಸನ್ನಿ ಲಿಯೋನ್ ಹೊಸ ಮನೆಗೆ ಸ್ಥಳಾಂತರಗೊಳ್ಳಲಿದ್ದಾರೆ ಎಂಬ ಬಗ್ಗೆ ಚರ್ಚೆ ನಡೆಯಿತು. ವರದಿಗಳ ಪ್ರಕಾರ, ಸನ್ನಿ ಮುಂಬೈನ ಅಂದೇರಿಯಲ್ಲಿ 4000 ಚದರ ಅಡಿ ವಿಸ್ತೀರ್ಣದ ಫ್ಲ್ಯಾಟ್ ಖರೀದಿಸಿದ್ದಾರೆ. ಇತ್ತೀಚೆಗೆ, ಸೋಷಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್‌ ಮಾಡಿದ ಸನ್ನಿ ಲಿಯೋನ್, ತಮ್ಮ ಹೊಸ ಮನೆಗೆ ಶಿಫ್ಟ್‌ ಆಗಿದ್ದಾರೆ ಎಂಬ ಸುದ್ದಿ ನೀಡಿದ್ದಾರೆ. ಸನ್ನಿ ಪತಿ ಮತ್ತು ಮಕ್ಕಳೊಂದಿಗೆ ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. 

ಫೋಟೋವೊಂದರಲ್ಲಿ, ಪತಿ ಡೇನಿಯಲ್ ವೆಬರ್ ಸನ್ನಿ ಲಿಯೋನ್ ಹೊತ್ತುಕೊಂಡು ಮನೆಯೊಳಗೆ ಪ್ರವೇಶಿಸುತ್ತಿರುವುದು ಕಂಡುಬರುತ್ತದೆ.
ಅದೇ ಸಮಯದಲ್ಲಿ, ಎರಡನೇ ಫೋಟೋದಲ್ಲಿ, ಈ ಜೋಡಿಯು ಮೂವರು ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ.
Tap to resize

ಮತ್ತೊಂದು ಫೋಟೋದಲ್ಲಿ, ಸನ್ನಿ ಮತ್ತು ಡೇನಿಯಲ್ ತಮ್ಮ ಮಕ್ಕಳೊಂದಿಗೆ ಮನೆಯೊಳಗೆ ಪಿಜ್ಜಾ ತಿನ್ನುತ್ತಿದ್ದಾರೆ.
ಸನ್ನಿ ಲಿಯೋನ್ ತನ್ನ ಬಾಲಿವುಡ್ ವೃತ್ತಿಜೀವನವನ್ನು 2021 ರಲ್ಲಿ 'ಜಿಸ್ಮ್ 2' ಚಿತ್ರದೊಂದಿಗೆ ಪ್ರಾರಂಭಿಸಿದರು.
ಸನ್ನಿ ಲಿಯೋನ್ ಕೆಲವು ಸಮಯದ ಹಿಂದೆ ಸಂದರ್ಶನವೊಂದರಲ್ಲಿ ತನ್ನ ಹೊಸ ಮನೆಯ ಇಂಟೀರಿಯರ್‌ ಬಗ್ಗೆ ಹೇಳಿಕೊಂಡಿದ್ದರು.
ಬಹಳ ಒಳ್ಳೆಯ ಇಂಟೀರಿಯರ್‌ ಡಿಸೈನರ್‌ ಸಿಕ್ಕಿದ್ದಾರೆ. ಅವರು ನಮ್ಮ ಇಷ್ಟದಂತೆ ಮನೆಯನ್ನು ಅಲಂಕರಿಸಿದ್ದಾರೆ. ಮಕ್ಕಳು ಮುಕ್ತವಾಗಿ ಆಟವಾಡಲು ಮನೆಯಲ್ಲಿ ಮತ್ತು ರೂಮ್‌ನಲ್ಲಿ ಸ್ಥಳವನ್ನು ಹೊಂದಲು ಬಯಸಿದ್ದೇವೆ,' ಎಂದಿದ್ದರು.
ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ಕೂಡ ಸನ್ನಿ ಐಷಾರಾಮಿ ಬಂಗಲೆ ಹೊಂದಿದ್ದಾರೆ. ತಮ್ಮ 36ನೇ ಹುಟ್ಟುಹಬ್ಬದಂದು ಈ ಮನೆಯನ್ನು ಖರೀದಿಸಿದರು.
'ನಾವು ಹೊಸ ಮನೆ ಹುಡುಕುತ್ತಿರುವಾಗ, ನಮ್ಮ ಪ್ರೈವೇಸಿ ಮತ್ತು ಸೇಪ್ಟಿ ನಮ್ಮ ಆದ್ಯತೆ ಆಗಿತ್ತು ಇದಲ್ಲದೆ, ಮನೆಯಲ್ಲಿ ಇಂತಹ ಅನೇಕ ವಿಷಯಗಳಿವೆ, ಇದು ಮಕ್ಕಳನ್ನು ಬ್ಯುಸಿಯಾಗಿಡುತ್ತದೆ. ನಮ್ಮ ಹೊಸ ಮನೆಯಲ್ಲಿ, ಮಕ್ಕಳಿಗೆ ಆಟವಾಡಲು ಮತ್ತು ಓಡಲು ಹೆಚ್ಚಿನ ಸ್ಥಳ ಸಿಗುತ್ತದೆ' ಎಂದು ಸನ್ನಿ ಇನ್ನಷ್ಟೂ ತಮ್ಮ ಹೊಸ ಮನೆಯ ಬಗ್ಗೆ ವಿಷಯ ಹಂಚಿಕೊಂಡಿದ್ದರು.
ಅಮೆರಿಕದ ತಮ್ಮ ಮನೆಯ ಅನೇಕ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸನ್ನಿ ಈ ಮನೆಗೆ ಪ್ರವೇಶಿಸಿದಾಗ, ಕೈಯಲ್ಲಿ ಗಣಪತಿ ವಿಗ್ರಹ ಇತ್ತು.
ಶರ್ಮನ್ ಓಕ್ಸ್‌ನಲ್ಲಿರುವ ಸನ್ನಿಯ ಸುಂದರವಾದ ಮನೆಯಲ್ಲಿ 5 ಬೆಡ್‌ ರೂಮ್‌, ಈಜುಕೊಳ, ಹೋಮ್ ಥಿಯೇಟರ್, ಉದ್ಯಾನ ಮತ್ತು ಹೊರಾಂಗಣ ಡೈನಿಂಗ್‌ ಏರಿಯಾ ಇದೆ.
ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಪ್ರಕಾರ, ಸನ್ನಿ ಲಿಯೋನ್ ಸುಮಾರು 16 ಮಿಲಿಯನ್ (117 ಕೋಟಿ ರೂ.) ಮೌಲ್ಯದ ಆಸ್ತಿಯ ಮಾಲೀಕರಾಗಿದ್ದಾರೆ.
ಸನ್ನಿ ಪ್ರಸ್ತುತ ಒಂದು ಸಿನಿಮಾಕ್ಕೆ 4.5 ಕೋಟಿ ರೂ ಚಾರ್ಜ್‌ ಮಾಡುತ್ತಾರೆ ಎಂದು ವರದಿಗಳು ಹೇಳುತ್ತವೆ.
1.5 ಕೋಟಿ ರೂ. ಬೆಲೆಯ ಮಾಸೆರೋಟಿ ಮತ್ತು ಬಿಎಂಡಬ್ಲ್ಯು ಕಾರನ್ನು ಸಹ ಹೊಂದಿದ್ದು, ಇದನ್ನು 2014 ರಲ್ಲಿ ಪತಿ ಡೇನಿಯಲ್ ವೆಬರ್ ಉಡುಗೊರೆಯಾಗಿ ನೀಡಿದ್ದರು.

Latest Videos

click me!