ಸನ್ನಿ ಲಿಯೋನ್ ಮತ್ತು ಅವರ ಪತಿ ಡೇನಿಯಲ್ ವೆಬರ್ ಅತ್ಯಂತ ಸ್ವೀಟ್ ಸೆಲೆಬ್ರಿಟಿ ದಂಪತಿಗಳಲ್ಲಿ ಒಬ್ಬರು.
ಇವರಿಬ್ಬರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪರಸ್ಪರರ ಆಸಕ್ತಿದಾಯಕ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ.
ಏಪ್ರಿಲ್ 9, 2021 ರಂದು ದಂಪತಿ ತಮ್ಮ 10 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ.
ವಿಶೇಷ ದಿನದಂದು ಡೇನಿಯಲ್ ನಟಿಗೆ ವಜ್ರದ ಹಾರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ತನ್ನ ಪ್ರೀತಿಯ ಪತಿಗೆ ಸಿಹಿ ಧನ್ಯವಾದ ಶೇರ್ ಮಾಡಿದ್ದಾರೆ ಸನ್ನಿ ಲಿಯೋನ್.
ನಟಿ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ಅದರಲ್ಲಿ ನಟಿ ಡೇನಿಯಲ್ ಉಡುಗೊರೆಯಾಗಿ ನೀಡಿದ ವಜ್ರದ ಹಾರವನ್ನು ತೋರಿಸಿದ್ದಾರೆ.
ನಮ್ಮ ವಾರ್ಷಿಕೋತ್ಸವಕ್ಕಾಗಿ ವಜ್ರಗಳನ್ನು ನೀಡಿದ್ದಕ್ಕೆ ಧನ್ಯವಾದಗಳು. ನಿಜಕ್ಕೂ ಒಂದು ಕನಸು !! ಮದುವೆಯ 10 ವರ್ಷಗಳು ಮತ್ತು ನಮ್ಮ ಜೀವನವನ್ನು ಒಟ್ಟಿಗೆ ಕಳೆಯಲಾರಂಭಿಸಿದಿ 13 ವರ್ಷಗಳು ಎಂದು ಬರೆದಿದ್ದಾರೆ ನಟಿ.
ನಿನ್ನನ್ನು ಪ್ರೀತಿಸುತ್ತೇನೆ ಎಂದು ಪೋಸ್ಟ್ ಕೊನೆಗೊಳಿಸಿದ್ದಾರೆ. ನಟಿ ವಿಡಿಯೋ ಹಂಚಿಕೊಂಡ ಕೂಡಲೇ, ಹಲವಾರು ಜನರು ತಮ್ಮ ಪೋಸ್ಟ್‌ನಲ್ಲಿ ಹೃದಯ ಎಮೋಜಿಗಳನ್ನು ಕಮೆಂಟ್ ಮಾಡಿದ್ದಾರೆ.
ಬಾಲಿವುಡ್ ಬೆಡಗಿಗೆ ನಮ್ಮ ಕಡೆಯಿಂದಲೂ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು