ಬೆಂಕಿಗೆ ಹಾರಿ ನರ್ಗಿಸ್ ಜೀವ ಉಳಿಸಿದ ಸುನೀಲ್ ದತ್; ಸಂಜಯ್‌ ದತ್‌ ಪೋಷಕರ ಇಂಟರೆಸ್ಟಿಂಗ್‌ ಲವ್‌ಸ್ಟೋರಿ

Published : May 04, 2023, 05:50 PM IST

ಇಂದು ಬಾಲಿವುಡ್ ನಟ ಸಂಜಯ್ ದತ್ ಅವರ ತಾಯಿ ಮತ್ತು ಗತಕಾಲದ ಅತ್ಯಂತ ಸುಂದರ ನಟಿ ನರ್ಗಿಸ್ ದತ್ ಅವರ 42 ನೇ ಪುಣ್ಯತಿಥಿ.1 ಜೂನ್ 1929 ರಂದು ಕೋಲ್ಕತ್ತಾದಲ್ಲಿ ಜನಿಸಿದ . ನರ್ಗೀಸ್ 1942 ರ ತಮನ್ನಾ ಚಿತ್ರದ ಮೂಲಕ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. 1958 ರ ಮಾರ್ಚ್ 11 ರಂದು ನರ್ಗಿಸ್ ಸುನಿಲ್ ದತ್ ಅವರನ್ನು ವಿವಾಹವಾದರು. ಇಬ್ಬರ ಪ್ರೇಮಕಥೆ ತುಂಬಾ ಕುತೂಹಲಕರವಾಗಿತ್ತು. 

PREV
15
ಬೆಂಕಿಗೆ ಹಾರಿ ನರ್ಗಿಸ್ ಜೀವ ಉಳಿಸಿದ ಸುನೀಲ್ ದತ್; ಸಂಜಯ್‌ ದತ್‌ ಪೋಷಕರ ಇಂಟರೆಸ್ಟಿಂಗ್‌ ಲವ್‌ಸ್ಟೋರಿ

ವಿಶೇಷವೆಂದರೆ ಒಮ್ಮೆ ಸುನೀಲ್ ದತ್‌ ಅವರು ನರ್ಗಿಸ್‌ ಅವರ ಪ್ರಾಣ ಉಳಿಸಿದ್ದರು ಮತ್ತು ಅಂದಿನಿಂದ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ನಂತರ  ಪರಸ್ಪರ ಪ್ರೀತಿಯಲ್ಲಿ ಬಿದ್ದರು.

25

ವಾಸ್ತವವಾಗಿ  'ಮದರ್ ಇಂಡಿಯಾ' ಚಿತ್ರದ ಸೆಟ್‌ನಲ್ಲಿ ಬೆಂಕಿಯ ದೃಶ್ಯವೊಂದನ್ನು ಚಿತ್ರೀಕರಿಸಬೇಕಾಗಿತ್ತು. ಇದಕ್ಕಾಗಿ ಸುತ್ತಲೂ ಹುಲ್ಲು ಹಾಸಲಾಗಿತ್ತು. ಆದರೆ ಇದರಿಂದಾಗಿ ಸೆಟ್‌ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತು.


 

35

ಕಾಣಿಸಿಕೊಂಡ  ಬೆಂಕಿ ವೇಗವಾಗಿ ಹೆಚ್ಚಾಗಲು ಪ್ರಾರಂಭಿಸಿತು ಮತ್ತು ನರ್ಗೀಸ್ ಬೆಂಕಿಯ ಜ್ವಾಲೆಯಲ್ಲಿ ಮುಳುಗಿದರು. ಈ ವೇಳೆ ಸುನೀಲ್ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನರ್ಗೀಸ್ ಪ್ರಾಣ ಉಳಿಸಿದ್ದರು.

 

45

ನರ್ಗೀಸ್‌ರನ್ನು ರಕ್ಷಿಸಿದ ಕಾರಣ, ಅವರು ತುಂಬಾ ಗಾಯಗೊಂಡು ಆಸ್ಪತ್ರೆಗೆ ಸೇರಿಸಬೇಕಾಯಿತು.  ಈ ಘಟನೆಯ ನಂತರ  ನರ್ಗೀಸ್ ಸುನಿಲ್ ಅವರನನ್ನು ಇಷ್ಟ ಪಡತೊಡಗಿದರು ಮತ್ತು ಆಸ್ಪತ್ರೆಗೆ ಹೋಗಿ ಆರೈಕೆ  ಮಾಡತೊಡಗಿದರು.

55

ಇದಾದ ನಂತರ ಸುನೀಲ್ ನರ್ಗೀಸ್‌ಗೆ ಪ್ರಪೋಸ್ ಮಾಡಿದರು ಮತ್ತು ನರ್ಗೀಸ್‌ ಕೂಡ ಒಪ್ಪಿಕೊಂಡರು. ಪರಸ್ಪರ ಡೇಟಿಂಗ್ ಮಾಡಿದ ನಂತರ ಇಬ್ಬರೂ ರಹಸ್ಯವಾಗಿ ಮದುವೆಯಾದರು. 1981 ರ ಮೇ 3 ರಂದು ನರ್ಗೀಸ್ ಕ್ಯಾನ್ಸರ್ ನಿಂದ ನಿಧನರಾದರು.

Read more Photos on
click me!

Recommended Stories