ಕೆ ಎಲ್‌ ರಾಹುಲ್‌ ಜೊತೆ ಮಗಳ ರಿಲೆಷನ್‌ಶಿಪ್‌ ಬಗ್ಗೆ ಮಾತನಾಡಿದ ಸುನೀಲ್‌ ಶೆಟ್ಟಿ!

Suvarna News   | Asianet News
Published : Jul 17, 2021, 01:49 PM IST

ಟೀಮ್‌ ಇಂಡಿಯಾದ ಆಟಗಾರ ಕೆ.ಎಲ್.ರಾಹುಲ್ ಮತ್ತು  ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಬಹಳ ಕಾಲದಿಂದ ಸುದ್ದಿಯಲ್ಲಿದ್ದಾರೆ. ಈ ರೂಮರ್ಡ್‌ ಕಪಲ್‌ ಸದ್ಯಕ್ಕೆ ಲಂಡನ್‌ನಲ್ಲಿ ಹಾಲಿಡೇ ಎಂಜಾಯ್‌ ಮಾಡುತ್ತಿದೆ. ಇತ್ತೀಚಿಗೆ ಈ ಬಗ್ಗೆ ಅಥಿಯಾ ತಂದೆ ಸುನೀಲ್‌ ಶೆಟ್ಟಿ ಸಹ ಮಾತನಾಡಿದ್ದಾರೆ. ರಾಹುಲ್‌ ಮತ್ತು ಮಗಳ ಸಂಬಂಧದ ಬಗ್ಗೆ ಸುನೀಲ್‌ ಶೆಟ್ಟಿ ಹೇಳಿದ್ದೇನು? ವಿವರ ಇಲ್ಲಿದೆ. 

PREV
111
ಕೆ ಎಲ್‌ ರಾಹುಲ್‌ ಜೊತೆ ಮಗಳ ರಿಲೆಷನ್‌ಶಿಪ್‌ ಬಗ್ಗೆ ಮಾತನಾಡಿದ ಸುನೀಲ್‌ ಶೆಟ್ಟಿ!

ಬಹಳ ಕಾಲದಿಂದ ಟೀಮ್‌ ಇಂಡಿಯಾದ ಆಟಗಾರ ಕೆ.ಎಲ್‌ ರಾಹುಲ್‌ ಹಾಗೂ ನಟಿ ಅಥಿಯಾ ಶೆಟ್ಟಿ ರಿಲೆಷನ್‌ಶಿಪ್‌ನ ರೂಮರ್‌ ಹರಿದಾಡುತ್ತಿದೆ. 

211

ಇಬ್ಬರು ಅಧಿಕೃತವಾಗಿ ತಮ್ಮ ಆಫೇರ್‌ ಬಗ್ಗೆ ಆನೌನ್ಸ್‌ ಮಾಡದಿದ್ದರೂ ಆಗಾಗ ಜೊತೆಯಾಗಿ ಕಾಣಿಸಿಕೊಳ್ಳುವುದು ಇವರ ಸಂಬಂಧವೇನೆಂಬುದನ್ನು ಸಾರಿ ಸಾರಿ ಹೇಳುತ್ತದೆ.

311

ಕೆಎಲ್ ರಾಹುಲ್ ಅವರು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಡಬ್ಲ್ಯುಟಿಸಿ ಫೈನಲ್‌ಗೆ ತೆರಳುವ ಮೊದಲು ಅಥಿಯಾ ಅವರನ್ನು ದಾಖಲೆಯಲ್ಲಿ ತಮ್ಮ ಪಾರ್ಟನರ್‌ ಎಂದು ನಮೂದಿಸಿದ್ದಾರೆ.

411

ನಿಯಮಗಳ ಪ್ರಕಾರ, ಟೂರ್‌ ಸಮಯದಲ್ಲಿ ಆಟಗಾರರು ತಮ್ಮ ಪತ್ನಿ ಅಥವಾ ಪಾರ್ಟನರ್‌ ಜೊತೆಯಲ್ಲಿ ಪ್ರಯಾಣಿಸುತ್ತಿದ್ದರೆ ತಿಳಿಸಬೇಕು. ರಾಹುಲ್ ಅಥಿಯಾ ಹೆಸರನ್ನು ಪಾರ್ಟನರ್‌ ಎಂದು ನಮೂದಿಸಿದ್ದಾರೆ ಎಂದು ಹೇಳಲಾಗಿದೆ. 

511

ಕೆಲವು ದಿನಗಳ ಹಿಂದೆ, ಅಥಿಯಾ ಅವರ ತಂದೆ ಸುನಿಲ್ ಶೆಟ್ಟಿ ತಮ್ಮ ಮಗ ಅಹಾನ್ ಮತ್ತು ಕೆ.ಎಲ್. ರಾಹುಲ್ ಫೋಟೋ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ . 'ಮೈ ಲವ್ ಮೈ ಸ್ಟ್ರೆಂತ್' ಎಂದು ಅವರು ಶೀರ್ಷಿಕೆ ನೀಡಿದ್ದಾರೆ.

611

ಇತ್ತೀಚಿಗೆ ಟೈಮ್ಸ್ ಆಫ್ ಇಂಡಿಯಾದ ಜೊತೆ ಶೆಟ್ಟಿ ಈ ಪೋಸ್ಟ್ ಬಗ್ಗೆ ಮಾತನಾಡುತ್ತಾ, 'ಅಹಾನ್ ಮತ್ತು ರಾಹುಲ್ ಸ್ನೇಹಿತರು. ನನ್ನ ಪೋಸ್ಟ್‌ ಅವರಿಬ್ಬರಿಗೂ ಅರ್ಪಿಸಲಾಗಿದೆ. ರಾಹುಲ್ ನನ್ನ ನೆಚ್ಚಿನ ಕ್ರಿಕೆಟಿಗರಲ್ಲಿ ಒಬ್ಬರು ಎಂದಿದ್ದಾರೆ.

711

'ಹೌದು, ಅವಳು ಇಂಗ್ಲೆಂಡಿನಲ್ಲಿದ್ದಾಳೆ, ಆದರೆ ಅವಳು ಅಹಾನ್ ಜೊತೆಗಿದ್ದಾಳೆ.ಅವರಿಬ್ಬರು ರಜೆಗಾಗಿ ಅಲ್ಲಿಗೆ ಹೋಗಿದ್ದಾರೆ. ಹೆಚ್ಚಿನದೂ ನೀವು ಅವರೊಂದಿಗೆ ಕೇಳಿ,' ಎಂದು ಅಥಿಯಾ ಇಂಗ್ಲೆಂಡಿನಲ್ಲಿರುವ ಬಗ್ಗೆ ಸುನೀಲ್ ಬಾಂಬೆ ಟೈಮ್ಸ್‌ಗೆ ಹೇಳಿದ್ದಾರೆ.

811

ಅಥಿಯಾ ಮತ್ತು ರಾಹುಲ್ ಈ ಹಿಂದೆ ಒಟ್ಟಿಗೆ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರೂ ಒಂದೇ ಕನ್ನಡಕದ ಬ್ರಾಂಡ್‌ನ ಅಂಬಾಸಿಡರ್‌ಗಳಾಗಿಯೂ ಕೆಲಸ ಮಾಡುತ್ತಿದ್ದಾರೆ.
 
911

ಮಗಳು ಅಥಿಯಾ ಮತ್ತು ರಾಹುಲ್ ರಿಲೆಷನ್‌ಶಿಪ್‌ ಬಗ್ಗೆ ಸುನೀಲ್‌ ಶೆಟ್ಟಿ ಅವರಿಗೆ ಕೇಳಿದಾಗಲೂ ಸ್ಪಷ್ಟವಾಗಿ ಉತ್ತರ ನೀಡಿಲ್ಲ.

1011

ಈ ಬಗ್ಗೆ ನೀವು ಅವರೊಂದಿಗೆ ಮಾತನಾಡುವುದು ಉತ್ತಮ. ನನ್ನ ಪ್ರಕಾರ ಇದು ಅಂತರರಾಷ್ಟ್ರೀಯ ಬ್ರಾಂಡ್ ಮತ್ತು  ಇಬ್ಬರನ್ನು ರಾಯಭಾರಿಗಳಾಗಿ ತೆಗೆದುಕೊಳ್ಳಲು ಆಯ್ಕೆಮಾಡಿಕೊಂಡರು. ಅವರು ಸುಂದರವಾಗಿ ಕಾಣುವ ಕಪಲ್‌ ಅಲ್ವಾ? ಆದ್ದರಿಂದ, ಇದು ಸಂಪೂರ್ಣವಾಗಿ ಬ್ರಾಂಡ್ ದೃಷ್ಟಿಕೋನದಿಂದ ಕೆಲಸ ಮಾಡುತ್ತದೆ. ಅವರು ಜಾಹೀರಾತಿನಲ್ಲಿ ಒಟ್ಟಿಗೆ ಚೆನ್ನಾಗಿ ಕಾಣುತ್ತಾರೆ,' ಎಂದು ಹೇಳಿದ್ದಾರೆ ಸುನೀಲ್‌ ಶೆಟ್ಟಿ.

1111

ಸುಲೀನ್ ಶೆಟ್ಟಿ ಕರ್ನಾಟಕದ ಕರಾವಳಿ ಮೂಲದವರಾಗಿದ್ದು, ರಾಹುಲ್ ಸಹ ದಕ್ಷಿಣ ಕನ್ನಡದವರೇ. ಹಾಗಾಗಿ ಈ ಜೋಡಿ ಮುಂದೆ ಮುಂದಿನ ಹಂತಕ್ಕೆ ತಲುಪಬಹುದು ಎನ್ನಲಾಗುತ್ತಿದೆ.

click me!

Recommended Stories