Suhana Khan: ಶಾರುಖ್ ಖಾನ್ ಮಗಳು ಸುಹಾನಾ ಖಾನ್ ಅವರಿಗೆ ಇಂದು ಯಾವುದೇ ಪರಿಚಯದ ಅಗತ್ಯವಿಲ್ಲ. ಶೀಘ್ರದಲ್ಲೇ ತಮ್ಮ ತಂದೆ ಶಾರುಖ್ ಖಾನ್ ಜೊತೆ ಸ್ಕ್ರಿನ್ ಶೇರ್ ಮಾಡಲಿದ್ದಾರೆ. ಆದರೆ ಸಿನಿಮಾಗೆ ಎಂಟ್ರಿ ಕೊಡುವ ಮುನ್ನವೇ ಕೋಟ್ಯಾಂತರ ರೂಪಾಯಿ ಸಂಪಾದನೆ ಮಾಡ್ತಿದ್ದಾರೆ ಸುಹಾನಾ.
ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್, ಮೇ 22 ರಂದು ತನ್ನ 26 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸುಹಾನಾಗೆ ಬಾಲ್ಯದಿಂದಲೂ ನಟನೆ ಬಗ್ಗೆ ಇನ್ನಿಲ್ಲದ ಆಸಕ್ತಿ. ಕನ್ನಡಿಯ ಮುಂದೆ ನಿಂತು ಗಂಟೆಗಟ್ಟಲೆ ಡೈಲಾಗ್ ಹೇಳುತ್ತಿದ್ದುದೂ ಇದೆ. ಯಾವಾಗ ತಮಗೆ ಬಿಗ್ ಸ್ಕ್ರೀನ್ ನಲ್ಲಿ ನಟಿಸುವ ಅವಕಾಶ ಸಿಗುತ್ತೆ ಎಂದು ಸುಹಾನ ಕಾಯುತ್ತಿದ್ದರಂತೆ.
27
ಸುಹಾನಾ 25 ವರ್ಷಕ್ಕೇ ಕೋಟ್ಯಾಧಿಪತಿ
ಶಾರುಖ್ ಖಾನ್ ಪುತ್ರಿ ಸುಹಾನಾ ಇತ್ತೀಚೆಗೆ ತನ್ನ ಕರಿಯರ್ ಪ್ರಾರಂಭಿಸಿದರೂ ಸಹ, ಅವರ ಜನಪ್ರಿಯತೆ ಅದಕ್ಕೂ ಮುನ್ನವೇ ಹೆಚ್ಚಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಸುಹಾನಾ 25 ವರ್ಷಕ್ಕೇ ಕೋಟ್ಯಾಧಿಪತಿ, ಇಷ್ಟೊಂದು ಹಣ ಗಳಿಸೋದು ಎಲ್ಲಿಂದ ನೋಡೋಣ.
37
ಅವರ ಆದಾಯದ ಮೂಲ ಯಾವುದು?
ಜಿಕ್ಯೂ ವರದಿಯ ಪ್ರಕಾರ, ಸುಹಾನಾ ಖಾನ್ ಅವರ ನೆಟ್ ವರ್ತ್ ಸುಮಾರು ₹13 ಕೋಟಿ ಎಂದು ಅಂದಾಜಿಸಲಾಗಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ದೊಡ್ಡ ಮೊತ್ತದ ಆಸ್ತಿ ನೋಡಿ ಅಚ್ಚರಿಯಾಗಬಹುದು. ಇದು ಕೇವಲ ಅಪ್ಪ ಮಾಡಿಟ್ಟ ಆಸ್ತಿ ಅಲ್ಲ. ಸುಹಾನ ಬ್ರಾಂಡ್ ಪ್ರಚಾರ ಮತ್ತು ಫ್ಯಾಷನ್ ಪ್ರಾಜೆಕ್ಟ್ ಮೂಲಕ ಹೆಚ್ಚಿನ ವರಮಾನ ಗಳಿಸುತ್ತಾರೆ.
ಸುಹಾನ ದೊಡ್ಡ ಬ್ರ್ಯಾಂಡ್ ಗಳನ್ನು ಪ್ರಚಾರ ಮಾಡುವ ಮೂಲಕ ಹಣ ಮಾಡುತ್ತಾರೆ. Adidas Originals, Maybelline New York ಮತ್ತು Tira Beautyಯಂತಹ ಪ್ರಮುಖ ಬ್ರ್ಯಾಂಡ್‌ಗಳನ್ನು ಪ್ರಚಾರ ಮಾಡುತ್ತಾರೆ. ಈ ಮೂಲಕ ಅವರು ಹೆಚ್ಚಿನ ಹಣ ಗಳಿಸುತ್ತಾರೆ. ಅವರು ಫ್ಯಾಷನ್ ಉದ್ಯಮದಲ್ಲಿ ಹಲವಾರು ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅನೇಕರು ಅವರನ್ನು Gen-Z ಐಕಾನ್ ಎನ್ನುತ್ತಾರೆ. ಇದಲ್ಲದೆ, ಅವರು ತಮ್ಮ ಕುಟುಂಬದ ಮದ್ಯ ವ್ಯವಹಾರವಾದ D’YAVOL ಅನ್ನು ಸಹ ನೋಡಿಕೊಳ್ಳುತ್ತಾರೆ, ಇದನ್ನು ಆರ್ಯನ್ ಖಾನ್ ನಡೆಸುತ್ತಿದ್ದಾರೆ.
57
ಐಷಾರಾಮಿ ಜೀವನಶೈಲಿ
ಸುಹಾನಾ ತನ್ನ ಐಷಾರಾಮಿ ಜೀವನಶೈಲಿಗಾಗಿಯೂ ಸುದ್ದಿಯಲ್ಲಿದ್ದಾರೆ. ಅವರ ದುಬಾರಿ ಕಾರುಗಳು, ಡಿಸೈನರ್ ಉಡುಪುಗಳು ಮತ್ತು ವಿದೇಶಿ ಪ್ರವಾಸಗಳ ಫೋಟೋಗಳು ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ. ಸುಹಾನಾ ಖಾನ್ ಅವರ ಶಿಕ್ಷಣದ ಬಗ್ಗೆ ಹೇಳುವುದಾದರೆ, ಅವರು ಧೀರೂಭಾಯಿ ಅಂಬಾನಿ ಅಂತರರಾಷ್ಟ್ರೀಯ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ನಂತರ ಅವರು ಇಂಗ್ಲೆಂಡ್‌ನ ಆರ್ಡಿಂಗ್ಲಿ ಕಾಲೇಜಿನಿಂದ ಪದವಿ ಪಡೆದರು.
67
ಸುಹಾನಾ ಖಾನ್ ಅವರ ಡೆಬ್ಯೂ ಚಿತ್ರ
ಸುಹಾನಾ ಖಾನ್ ‘ದಿ ಆರ್ಚೀಸ್’ ಎನ್ನುವ ಸಿನಿಮಾ ಮೂಲಕ ಡೆಬ್ಯೂ ಮಾಡಿದ್ದರು. ಮೊದಲಿಗೆ ಟ್ರೋಲ್ ಆಗಿದ್ದವರು, ನಂತರ ಫ್ಯಾನ್ಸ್ ಅವರನ್ನು ಇಷ್ಟಪಟ್ಟಿದ್ದರು. ಅಭಿಮಾನಿಗಳು ಈಗ ಅವರ ಎರಡನೇ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
77
ಸಿನಿಮಾ ಬರುವ ಮುನ್ನವೇ ಹೆಸರು ಗಳಿಸಿದ್ದ ಸುಹಾನಾ
ಸಿನಿಮಾ ಕ್ಷೇತ್ರಕ್ಕೆ ಪ್ರವೇಶಿಸುವ ಮೊದಲೇ, ಸುಹಾನಾ ಖಾನ್ ತನ್ನ ಮಲ್ಟಿ ಮಿಲಿಯನ್ ಡಾಲರ್ ಗಳಿಕೆ ಮತ್ತು ಐಷಾರಾಮಿ ಜೀವನಶೈಲಿಯಿಂದ ಇಂಟರ್ನೆಟ್ ಸೆನ್ಸೇಷನ್ ಆಗಿದ್ದರು. ಅದಕ್ಕಾಗಿಯೇ ಇಂದು ಅವರು ಶಾರುಖ್ ಖಾನ್ ಅವರ ಮಗಳು ಮಾತ್ರವಲ್ಲ, ತಮ್ಮದೇ ಆದ ಐಡೆಂಡಿಟಿ ಹೊಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.