1995ರಲ್ಲಿ ಕೋಡಿ ರಾಮಕೃಷ್ಣ ನಿರ್ದೇಶಿಸಿದ 'ರಿಕ್ಷಾವೋಡು' ಚಿತ್ರದಲ್ಲಿಯೂ ನಗ್ಮಾ, ಚಿರಂಜೀವಿ ಜೋಡಿಯಾದರು. ಈ ಚಿತ್ರದಲ್ಲಿ ನಗ್ಮಾ ಶ್ರೀಮಂತ ಹುಡುಗಿಪಾತ್ರವನ್ನು ನಿರ್ವಹಿಸಿದರೆ, ಚಿರಂಜೀವಿ ರಿಕ್ಷಾ ಚಾಲಕನ ಪಾತ್ರವನ್ನು ನಿರ್ವಹಿಸಿದರು. ರಾಮಾನಾಯುಡು ಸ್ಟುಡಿಯೋದಲ್ಲಿ 'ಪಾಪ ಎದಿರಿಂಪ' ಎಂಬ ಹಾಡಿನ ಚಿತ್ರೀಕರಣ ನಡೆಯುತ್ತಿತ್ತಂತೆ. ಆಗ ಈ ಜೋಡಿ ಸಣ್ಣ ವಿಷಯಕ್ಕೂ ಜಗಳವಾಡಿದ್ದರು. ಆಗ ನಗ್ಮಾ ಕೋಪಗೊಂಡು ಮೇಕಪ್ ರೂಮ್‌ನಿಂದ ಹೊರಟು ಹೋಗುತ್ತಿದ್ದಾಗ, ಚಿರಂಜೀವಿ ಬೇಡಿಕೊಳ್ಳುತ್ತಾ ಅವರ ಹಿಂದೆಯೇ ಓಡಿದ್ದರಂತೆ. ನಗ್ಮಾ... ನಿಲ್ಲು, ನನ್ನ ಮಾತು ಕೇಳು ಅಂತ ಹೇಳ್ತಿದ್ರಂತೆ. ಏನಾಗ್ತಿದೆ ಅಂತ ಸೆಟ್‌ನಲ್ಲಿದ್ದವರೆಲ್ಲ ಅವರನ್ನೇ ನೋಡ್ತಿದ್ರಂತೆ.