ಆಗ ಅವರು ಅನ್ನಪೂರ್ಣ ಸ್ಟುಡಿಯೋದಲ್ಲಿ ಶೂಟಿಂಗ್ ನಲ್ಲಿದ್ದರು. ನಾನು ಹೋದ ಕೂಡಲೇ ಒಂದು ಗಂಟೆ ಶೂಟಿಂಗ್ ನಿಲ್ಲಿಸಿ ನನ್ನ ಜೊತೆ ಮಾತಾಡಿದರು. ಏನಾಯ್ತು ಅಂತ ಎಲ್ಲಾ ವಿವರ ಕೇಳಿದರು. 6 ಸಿನಿಮಾಗಳು ಸೋತವು, ಊರಿಗೆ ಹೋಗಿ ವ್ಯವಸಾಯ ಮಾಡ್ತೀನಿ ಅಣ್ಣ ಅಂದೆ. ಆಗ ಅವರು ನನಗೆ ಒಂದು ಗಂಟೆ ಕ್ಲಾಸ್ ತೆಗೆದುಕೊಂಡರು. ತಮ್ಮ ಜೀವನದಲ್ಲಿ, ವೃತ್ತಿಜೀವನದಲ್ಲಿ ಆದ ಘಟನೆಗಳನ್ನು ಹೇಳಿದರು. ಗೆಲುವು ಸೋಲು ನಮ್ಮ ಕೈಯಲ್ಲಿಲ್ಲ. ಜವಾಬ್ದಾರಿಯಿಂದ ಕೆಲಸ ಮಾಡಬೇಕು. ಹಿಟ್ ಫ್ಲಾಪ್ ಬಗ್ಗೆ ಯೋಚಿಸಬಾರದು ಅಂತ ಹೇಳಿದರು.