ಹಾಲಿವುಡ್‌ ಸಿನಿಮಾಕ್ಕೆ ನೋ ಎಂದಿದ್ದರು ಬಾಲಿವುಡ್‌ ಸೂಪರ್‌ ಸ್ಟಾರ್‌ ಶ್ರೀದೇವಿ!

First Published Aug 14, 2021, 5:09 PM IST

ಬಾಲಿವುಡ್‌ನ ಮೊದಲ ಲೇಡಿ  ಸೂಪರ್‌ಸ್ಟಾರ್ ಶ್ರೀದೇವಿಗೆ ಒಮ್ಮೆ ಈ ದೊಡ್ಡ-ಬಜೆಟ್ ಹಾಲಿವುಡ್‌ಗೆ ಸಿನಿಮಾದ ಆಫರ್‌ ನೀಡಲಾಗಿತ್ತು. ಆದರೆ ಅವರು ಆ ಸಿನಿಮಾವನ್ನು ಮಾಡಲು ಒಪ್ಪಿಕೊಳ್ಳಲಿಲ್ಲ. ಹಾಲಿವುಡ್‌ ಸಿನಿಮಾಕ್ಕೆ ಶ್ರೀದೇವಿ ಅವರು ನೋ ಅನ್ನಲು ಕಾರಣವೇನು? ವಿವರ ಇಲ್ಲಿದೆ. 
 

ಅಗಸ್ಟ್‌ 16 ಬಾಲಿವುಡ್‌ ನಟಿ ಶ್ರೀದೇವಿ ಅವರ ಬರ್ತ್‌ಡೇ. ನಟಿ ಇಂದು ನಮ್ಮೊಂದಿಗೆ ಇದ್ದಿದ್ದರೆ ಅವರಿಗೆ 58 ವರ್ಷ ತುಂಬುತ್ತಿತ್ತು. ದೇಶದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಶ್ರೀದೇವಿ ಅವರನ್ನು 'ಭಾರತದ ಮೊದಲ ಮಹಿಳಾ ಸೂಪರ್ ಸ್ಟಾರ್' ಎಂದೂ ಕರೆಯಲಾಗುತ್ತಿತ್ತು.

2018 ರಲ್ಲಿ, ಶ್ರೀದೇವಿ ತಮ್ಮ 54ನೇ ವಯಸ್ಸಿನಲ್ಲಿ ದುಬೈನಲ್ಲಿ ನಿಧನವಾದರು. ಹೋಟಲ್‌ ರೂಮಿನ ಬಾತ್‌ ಟಬ್‌ನಲ್ಲಿ ಬಿದ್ದು ಪ್ರಾಣ ಕಳೆದು ಕೊಂಡಿದ್ದ ಶ್ರೀದೇವಿ ಅವರ ಸಾವು ಹಾರ್ಟ್‌ ಫೇಲ್‌ನಿಂದ ಉಂಟಾಗಿತ್ತು. 

80 ಮತ್ತು 90ರ ದಶಕಗಳಲ್ಲಿ ಅಗ್ರ ನಟಿಯರಲ್ಲಿ ಒಬ್ಬರಾಗಿದ್ದ ಶ್ರೀದೇವಿ ಯುವಕರ ಕನಸಿನ ರಾಣಿಯಾಗಿದ್ದರು. ಹಲವು ಸ್ಟಾರ್‌ ನಟರ ಜೊತೆ ಪರದೆ ಹಂಚಿಕೊಂಡಿದ್ದರು ನಟಿ. ವಿವಿಧ ಭಾಷೆಗಳ ಸಿಮಿಮಾದಲ್ಲಿ ನಟಿಸಿದ ಶ್ರೀದೇವಿ ಜೊತೆ ಕೆಲಸ ಮಾಡಲು ನಿರ್ಮಾಪಕರು ಹಾಗೂ ನಿರ್ದೇಶಕರು ತುದಿ ಕಾಲಿನಲ್ಲಿ ಕಾಯುತ್ತಿದ್ದರು.
 

80 ಮತ್ತು 90ರ ದಶಕಗಳಲ್ಲಿ ಅಗ್ರ ನಟಿರಲ್ಲಿ ಒಬ್ಬರಾಗಿದ್ದ ಶ್ರೀದೇವಿ ಯುವಕರ ಕನಸಿನ ರಾಣಿಯಾಗಿದ್ದರು. ಹಲವು ಸ್ಟಾರ್‌ ನಟರ ಜೊತೆ ಪರದೆ ಹಂಚಿಕೊಂಡಿದ್ದರು ನಟಿ.  ವಿವಿಧ ಭಾಷೆಗಳ ಸಿಮಿಮಾದಲ್ಲಿ ನಟಿಸಿದ ಶ್ರೀದೇವಿ ಜೊತೆ ಕೆಲಸ ಮಾಡಲು ನಿರ್ಮಾಪಕರು ಹಾಗೂ ನಿರ್ದೇಶಕರು ತುದಿ ಕಾಲಿನಲ್ಲಿ ಕಾಯುತ್ತಿದ್ದರು.

ಬಾಲಿವುಡ್‌ನಲ್ಲಿ ರಾಣಿ ಮೇರಾ ನಾಮ್‌ ಸಿನಿಮಾದ ಮೂಲಕ  ಬಾಲನಟಿಯಾಗಿ ಮತ್ತು ಜೂಲಿಯಲ್ಲಿ ಲಕ್ಷ್ಮಿಯ ಸಹೋದರಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಶ್ರೀದೇವಿ ಹಲವು ಸೂಪರ್‌ ಹಿಟ್‌ ಸಿನಿಮಾಗಳನ್ನು
ನೀಡಿದ ನಟಿ. ದಶಕಗಳ ಕಾಲ ಪ್ರೇಕ್ಷಕರನ್ನು ರಂಜಿಸಿದರು. 

Steven

ಈ ಸೂಪರ್‌ ಸ್ಟಾರ್‌ಗೆ ಒಮ್ಮೆ ಹಾಲಿವುಡ್‌ನ ಸಿನಿಮಾದಲ್ಲಿ ನಟಿಸಲು ಅವಕಾಶ ದೊರೆತ್ತಿತ್ತು. ಡೈರೆಕ್ಟರ್‌ ಸ್ಟೀವನ್ ಸ್ಪೀಲ್‌ಬರ್ಗ್ ಶ್ರೀದೇವಿಗೆ ದೊಡ್ಡ ಸಿನಿಮಾವೊಂದರ ಆಫರ್‌ ನೀಡಿದ್ದರು. ವರದಿಗಳ ಪ್ರಕಾರ, ನಟಿಯನ್ನು ಜುರಾಸಿಕ್ ಪಾರ್ಕ್‌ ಸಿನಿಮಾಕ್ಕಾಗಿ  ಸಂಪರ್ಕಿಸಲಾಯಿತು. ಆದರೆ, ಶ್ರೀದೇವಿಗೆ ಪ್ರಸ್ತಾಪಿಸಿದ ಭಾಗವು ಒಂದು ಸಣ್ಣ ಪಾತ್ರವಾಗಿತ್ತು.

ಆದರೆ, ಶ್ರೀದೇವಿಗೆ ಪ್ರಸ್ತಾಪಿಸಿದ ಭಾಗವು ಒಂದು ಸಣ್ಣ ಪಾತ್ರವಾಗಿತ್ತು. ಆ ಸಮಯದಲ್ಲಿ ಶ್ರೀದೇವಿ ತನ್ನ ವೃತ್ತಿ ಜೀವನದ ಉತ್ತುಂಗದಲ್ಲಿದ್ದರು ಈ ಸೂಪರ್ ಕ್ವೀನ್ ಶ್ರೀದೇವಿ. ಆದ್ದರಿಂದ ಅವರು  ಹಾಲಿವುಡ್ ಚಿತ್ರವನ್ನು ತಿರಸ್ಕರಿಸಿದರು.ಅವರಿಗೆ ನೀಡಿದ ಪಾತ್ರ ತುಂಬಾ ಕಡಿಮೆ ಮತ್ತು ಸಣ್ಣದಾಗಿತ್ತು.

ಸನ್ನಿ ಡಿಯೋಲ್, ಜೂಹಿ ಚಹ್ಲಾ ಮತ್ತು  ಶಾರುಖ್ ಖಾನ್ ಅಭಿನಯದ ಅತಿದೊಡ್ಡ ಹಿಟ್ ಚಿತ್ರ ಡರ್‌ ಸಿನಿಮಾವನ್ನು ಶ್ರೀದೇವಿ ನಿರಾಕರಿಸಿದರು. 'ಚಾಂದನಿ ಮತ್ತು ಲಮ್ಹೆ ನಂತರ, ಡರ್ ನನಗೆ ಸಾಮಾನ್ಯ ಪಾತ್ರವಾಗುತ್ತಿತ್ತು ಎಂದು ನಾನು ಭಾವಿಸುತ್ತೇನೆ' ಎಂದು ಸಂದರ್ಶನವೊಂದರಲ್ಲಿ ದಿವಂಗತ ನಟಿ ಹೇಳಿದ್ದರು.

click me!