ಮಗಳು ಜಾಹ್ನವಿಗೆ ಮೇಕಪ್‌ ಬ್ಯಾನ್‌ ಮಾಡಿದ್ರಂತೆ ಶ್ರೀದೇವಿ!

First Published | Jun 3, 2020, 8:12 PM IST

ಬಾಲಿವುಡ್‌ನ ಎವರ್‌ಗ್ರೀನ್‌ ನಟಿ ಶ್ರೀದೇವಿ. ಅವರ ಮಗಳು ಜಾಹ್ನವಿ ಕಪೂರ್‌ ಸಹ ಅಮ್ಮನಂತೆ ಆ್ಯಕ್ಟಿಂಗ್‌ ವೃತ್ತಿಯನ್ನು ಆರಿಸಿಕೊಂಡಿದ್ದಾರೆ ಹಾಗೂ ಮೊದಲ ಸಿನಿಮಾದಲ್ಲೇ ಸಾಕಷ್ಟು ಫೇಮಸ್‌ ಕೂಡ ಆಗಿದ್ದಾರೆ. ಆದರೆ ತಾಯಿ ಶ್ರೀದೇವಿ ಮಾತ್ರ ನಮ್ಮೊಂದಿಗೆ ಇಲ್ಲ ಈಗ. ಆದರೂ ಅವರ ಸುದ್ದಿಗಳು ಆಗಾಗ ಚರ್ಚೆಯಾಗುತ್ತಲೇ ಇರುತ್ತವೆ. ತಾಯಿ ಮತ್ತು ಮಗಳ ಸಂಬಂಧದ ಬಗ್ಗೆ ಯಾವಾಗಲೂ ಸುದ್ದಿಗಳು ಅಂತರ್ಜಾಲದಲ್ಲಿ ಹರಿದಾಡುತ್ತಲೇ ಇರುತ್ತವೆ. ನಟಿ ಶ್ರೀದೇವಿ ಮಗಳು ಜಾಹ್ನವಿಗೆ ಮೇಕಪ್‌ ಬ್ಯಾನ್‌ ಮಾಡಿದ್ದರು ಎನ್ನುವ ವಿಷಯ ಈಗ ಸುದ್ದಿಯಲ್ಲಿದೆ. 

ತಾಯಿ ಶ್ರೀದೇವಿ ಹಾಗೂ ಮಗಳು ಜಾಹ್ನವಿ ಕಪೂರ್‌ಳ ವಿಷಯ ಯಾವಾಗಲೂ ಫ್ಯಾನ್ಸ್‌ಗೆ ಫೇವರೇಟ್‌.
ಆಗಾಗ ಇವರ ರಿಲೇಷನ್‌ಶಿಪ್‌ಗೆ ಸಂಬಂಧಿಸಿದ ಮಾಹಿತಿಗಳು ಹೊರಬರುತ್ತಲೇ ಇರುತ್ತವೆ.
Tap to resize

ಶ್ರೀದೇವಿ ಸತ್ತು ಸುಮಾರು 2 ವರ್ಷವಾದರೂ ಶ್ರೀದೇವಿಯ ನ್ಯೂಸ್‌ಗಳಿಗೆ ಮಾತ್ರ ಸಾವಿಲ್ಲ. ಆಕೆ ಇನ್ನೂ ಅಭಿಮಾನಿಗಳ ಹಾರ್ಟ್‌ಥ್ರೋಬ್‌.
ಅಮ್ಮನಂತೆ ಮಗಳು ಜಾಹ್ನವಿ ಕೂಡ ಮೀಡಿಯಾದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಹಾಗೂ ಫ್ಯಾನ್ಸ್‌ಗೆ ಅಮ್ಮ ಮಗಳ ಬಾಂಡಿಂಗ್‌ ಸದಾ ಚರ್ಚೆಯ ಟಾಪಿಕ್‌.
ವಿಶೇಷವಾಗಿ ಆಕೆಯ ಡೆಬ್ಯೂ ಸಿನಿಮಾ ಧಡಕ್‌ನ 25 ನಿಮಿಷದ ಫೂಟೇಜ್‌ ನೋಡಿದ ನಂತರ ಶ್ರೀದೇವಿ ಮಗಳಿಗೆ ಒಂದು ರೂಲ್‌ ಮಾಡಿದ್ದರಂತೆ.
ನೀನು ನಿನ್ನ ಮುಖಕ್ಕೆ ಏನನ್ನು ಬಳಸುವಂತಿಲ್ಲ ಎಂದು ಕಾಮೆಂಟ್‌ ಮಾಡಿದ್ದರಂತೆ ಅಮ್ಮ ಮಗಳಿಗೆ.
ಶ್ರೀದೇವಿ ತನ್ನ ಸ್ಟೈಲ್‌ಸ್ಟೇಟ್ಮೆಂಟ್‌ಗಳಿಗೆ ಫೇಮಸ್‌. ಆಕೆ ಮಗಳನ್ನು ದಡಕ್‌ನಲ್ಲಿ ಬಳಿಸಿದ ಮೇಕಪ್‌ ಗಮನಿಸಿ ಮುಖಕ್ಕೆ ಏನನ್ನೂಯೂಸ್‌ ಮಾಡದಂತೆ ಸಲಹೆ ನೀಡಿದ್ದರಂತೆ.
ಜಾಹ್ನವಿಗೆ ಮಸ್ಕಾರಾ ಸರಿಯಾಗಿ ಹಚ್ಚಿರದದ್ದನ್ನು ಗಮನಿಸಿದ ನಟಿ ಈ ರೂಲ್‌ ಮಾಡಿದ್ದರಂತೆ.
ಈಗ ಜಾಹ್ನವಿ ಸಹ ಸ್ಟೈಲ್‌ಸ್ಟೇಟ್ಮೆಂಟ್‌ಗಳಿಂದ ಎಲ್ಲರ ಬಾಯಿ ಮುಚ್ಚಿಸುತ್ತಿದ್ದಾರೆ. ತಾಯಿಯ ಲೆಗಸ್ಸಿಯನ್ನು ಮಗಳು ಮುಂದುವರೆಸುತ್ತಳಾ ಎಂಬುದು ಫ್ಯಾನ್ಸ್ ಕುತೂಹಲ.

Latest Videos

click me!