ತಮಿಳುನಾಡಿನಲ್ಲಿ ಹುಟ್ಟಿದ ಶ್ರೀದೇವಿ, ತಮಿಳು ಜೊತೆಗೆ ಬಾಲಿವುಡ್‌ನಲ್ಲೂ ಸೈ ಎನಿಸಿಕೊಂಡರು. 13ನೇ ವಯಸ್ಸಿಗೆ 'ಮೂಂಡ್ರು ಮುಡಿಚು' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರೀದೇವಿ, ಎರಡೇ ವರ್ಷಗಳಲ್ಲಿ ಸ್ಟಾರ್ ನಟಿಯಾದರು. '16 ವಯಸ್ಸು' ಸಿನಿಮಾ ಅವರ ವೃತ್ತಿಜೀವನದ ಮೈಲಿಗಲ್ಲು. ಈ ಸಿನಿಮಾ ತಮಿಳು, ತೆಲುಗು ಮತ್ತು ಹಿಂದಿಯಲ್ಲಿ ರೀಮೇಕ್ ಆಯಿತು. ಹೀರೋಗಳು ಬದಲಾದರೂ ಶ್ರೀದೇವಿಯೇ ನಾಯಕಿ.