ಎನ್‌ಟಿಆರ್, ಮೋಹನ್‌ಲಾಲ್ ಕಾಂಬೊದಲ್ಲಿ ಬಂದ ಈ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಆಗ ಸಂಚಲನ ಮೂಡಿಸಿತ್ತು. ಈ ಸಿನಿಮಾವನ್ನು ಮೊದಲು ಮಹೇಶ್ ಬಾಬು ಜೊತೆ ಮಾಡಬೇಕು ಅಂತ ಕೊರಟಾಲ ಅಂದುಕೊಂಡಿದ್ದರಂತೆ. ಆಗಲೇ ಕೊರಟಾಲ, ಮಹೇಶ್‌ಗೆ ಎರಡು ಹಿಟ್ ಸಿನಿಮಾಗಳನ್ನು ಕೊಟ್ಟು, ಅವರನ್ನು ಪ್ಲಾಪ್‌ಗಳಿಂದ ಪಾರು ಮಾಡಿದ್ದರು. ಈ ಸಿನಿಮಾ ಕೂಡ ಮಾಡಿದ್ದರೆ, ಇವರ ಕಾಂಬೊದಲ್ಲಿ ಹ್ಯಾಟ್ರಿಕ್ ಮೂವೀ ಆಗುತ್ತಿತ್ತು. ಆದರೆ ಇದರಲ್ಲಿ ಎಷ್ಟು ನಿಜ ಅಂತ ಗೊತ್ತಿಲ್ಲ. ಆದರೆ, ಕೊರಟಾಲ 'ಜನತಾ ಗ್ಯಾರೇಜ್' ಕಥೆಯನ್ನು ಮೊದಲು ಮಹೇಶ್ ಬಾಬುಗೆ ಹೇಳಿದ್ದರಂತೆ.