ಶ್ರೀಲೀಲಾ ವೇದಿಕೆಗೆ ಬಂದು ಮಂತ್ರಿಯವರ ಬಳಿ ಕ್ಷಮೆ ಕೇಳಿದ್ರು. ಮಂತ್ರಿ ಭಾಷಣ ಮುಂದುವರಿಸುತ್ತಾ, "ಇನ್ನೊಬ್ಬ ಹೀರೋ ನಮ್ಮ ವೇದಿಕೆಗೆ ಬಂದಿದ್ದಾರೆ," ಅಂದ್ರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ್ಯಂಕರ್ ಜಾನ್ಸಿಗೆ ಸಭಾ ಮರ್ಯಾದೆ ಗೊತ್ತಿಲ್ವಾ ಅಂತ ನೆಟ್ಟಿಗರು ಟ್ರೋಲ್ ಮಾಡ್ತಿದ್ದಾರೆ. ಮಂತ್ರಿ ಭಾಷಣ ಮಾಡುವಾಗ ಶ್ರೀಲೀಲಾ ಕೆಳಗೆ ಕೂತಿದ್ರು. ಭಾಷಣ ನಿಲ್ಲಿಸಿ ಶ್ರೀಲೀಲಾರನ್ನ ವೇದಿಕೆಗೆ ಕರೆಯೋ ಅವಶ್ಯಕತೆ ಏನಿತ್ತು? ಸ್ವಲ್ಪ ಹೊತ್ತು ಕಾಯಬಹುದಿತ್ತಲ್ವಾ ಅಂತ ಜಾನ್ಸಿ ವಿರುದ್ಧ ಟೀಕೆಗಳು ಬರ್ತಿವೆ.