ಸಿನಿಮಾಗೆ ಡೈರೆಕ್ಟರ್, ಮ್ಯೂಸಿಕ್ ಡೈರೆಕ್ಟರ್ ಎಷ್ಟು ಮುಖ್ಯವೋ ಕೊರಿಯೋಗ್ರಾಫರ್ ಕೂಡ ಅಷ್ಟೇ ಮುಖ್ಯ. ಅವರಿಂದಲೇ ಹಾಡುಗಳಿಗೆ ಜೀವ ಬರುತ್ತದೆ. ನಮ್ಮ ಇಂಡಿಯನ್ ಕೊರಿಯೋಗ್ರಾಫರ್‌ಗಳಲ್ಲಿ ಮಲ್ಟಿ ಟ್ಯಾಲೆಂಟ್ ಇರೋರು ಜಾಸ್ತಿ. ಅವರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯೋರು ಯಾರು ಗೊತ್ತಾ?
ಸಿನಿಮಾಗೆ ಪ್ರಾಣ ಹಾಡುಗಳು, ಹಾಡುಗಳಿಗೆ ಜೀವ ಡ್ಯಾನ್ಸ್. ಸಿನಿಮಾದಲ್ಲಿ ಹಾಡು, ಡ್ಯಾನ್ಸ್‌ನ ಮಹತ್ವ ಹೇಳಬೇಕಿಲ್ಲ. ಪ್ರೇಕ್ಷಕರನ್ನು ಆಕರ್ಷಿಸುವ ಹಾಡುಗಳಿಗೆ ಸಂಗೀತ ನಿರ್ದೇಶಕರ ಪಾತ್ರ ಎಷ್ಟಿದೆಯೋ ಅಷ್ಟೇ ಕೊರಿಯೋಗ್ರಾಫರ್‌ಗಳ ಪಾತ್ರವೂ ಮುಖ್ಯ.
26
ಹಾಡುಗಳಿಗೆ ಬೇಡಿಕೆ ಹೆಚ್ಚಿರೋದ್ರಿಂದ ಸ್ಟಾರ್ ಕೊರಿಯೋಗ್ರಾಫರ್‌ಗಳು ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಿದ್ದಾರೆ. ಶೇಖರ್ ಮಾಸ್ಟರ್, ಜಾನಿ ಮಾಸ್ಟರ್, ಪ್ರೇಮ್ ರಕ್ಷಿತ್, ಗಣೇಶ್.. ಹೀಗೆ ಸ್ಟಾರ್ ಕೊರಿಯೋಗ್ರಾಫರ್‌ಗಳ ಹಾಡುಗಳಿಗೆ ಬೇಡಿಕೆ ಜಾಸ್ತಿ.
36
ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕೊರಿಯೋಗ್ರಾಫರ್ ಫರಾ ಖಾನ್. ಒಂದು ಹಾಡಿಗೆ 50 ಲಕ್ಷ ಪಡೆಯುತ್ತಾರಂತೆ!
ಫರಾ ಖಾನ್ ಡ್ಯಾನ್ಸರ್ ಆಗಿ ಕೆರಿಯರ್ ಶುರು ಮಾಡಿದ್ರು. 1987ರಲ್ಲಿ 'ಜಲ್ವಾ' ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ. 'ಕಭೀ ಹಾನ್ ಕಭೀ ನಾ' ಚಿತ್ರದಿಂದ ಬ್ರೇಕ್ ಸಿಕ್ತು.
56
ಫರಾ ಖಾನ್ ಕೊರಿಯೋಗ್ರಾಫರ್ ಮಾತ್ರವಲ್ಲ, ನಿರ್ದೇಶಕಿ, ನಟಿ, ರಿಯಾಲಿಟಿ ಶೋಗಳ ಜಡ್ಜ್ ಕೂಡ. 'ಮೇನ್ ಹೂ ನಾ', 'ಓಂ ಶಾಂತಿ ಓಂ' ಸೂಪರ್ ಹಿಟ್ ಚಿತ್ರಗಳು.
66
ಫರಾ ಖಾನ್ ಜೊತೆಗೆ ರೆಮೋ ಡಿಸೋಜಾ, ಗಣೇಶ್ ಹೆಗ್ಡೆ, ವೈಭವಿ ಮರ್ಚೆಂಟ್ ಕೂಡ ಸ್ಟಾರ್ ಕೊರಿಯೋಗ್ರಾಫರ್‌ಗಳು. ಫರಾ ಖಾನ್ ಆಸ್ತಿ 100 ಕೋಟಿಗೂ ಹೆಚ್ಚಂತೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.