ಈ ಚಿತ್ರದಲ್ಲಿ ನಾಗಾರ್ಜುನ ಜೊತೆ ಸೋನಾಲಿ ಬೇಂದ್ರೆ ಮತ್ತು ಅಂಶು ಅಂಬಾನಿ ನಟಿಸಿದ್ದಾರೆ. ಚಿತ್ರದ ಹೆಸರಿಗೆ ತಕ್ಕಂತೆ ನಾಗಾರ್ಜುನ ಮನ್ಮಥನಂತೆ ಕಾಣಿಸಿಕೊಂಡಿದ್ದಾರೆ. ನಾಯಕಿಯರ ಜೊತೆ ನಾಗಾರ್ಜುನ ಅವರ ಕೆಮಿಸ್ಟ್ರಿ, ಹಾಸ್ಯ ಸನ್ನಿವೇಶಗಳು, ದೇವಿ ಶ್ರೀ ಪ್ರಸಾದ್ ಸಂಗೀತ, ತ್ರಿವಿಕ್ರಮ್ ಶ್ರೀನಿವಾಸ್ ಸಂಭಾಷಣೆಗಳು, ಹೀಗೆ ಪ್ರತಿಯೊಂದು ಅಂಶವು ಈ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ. ಹೆಣ್ಣುಮಕ್ಕಳೆಂದರೆ ಇಷ್ಟವಿಲ್ಲದ ಮ್ಯಾನೇಜರ್ ಪಾತ್ರದಲ್ಲಿ ನಾಗಾರ್ಜುನ ಅವರ ನಟನೆ ತುಂಬಾ ಚೆನ್ನಾಗಿದೆ.