ಬಾಲಿವುಡ್‌ನಲ್ಲಿ ಶ್ರೀಲೀಲಾಗೆ ಸಾಲು ಸಾಲು ಆಫರ್‌ಗಳು ಸಿಗುತ್ತಿವೆ. ಹಿಂದಿ ಚೊಚ್ಚಲ ಚಿತ್ರಕ್ಕೂ ಮುನ್ನವೇ ಎರಡನೇ ಸಿನಿಮಾ ಆಫರ್ ಪಡೆದಿದ್ದಾರೆ. ಸದ್ಯ ಆಶಿಕಿ 3ರಲ್ಲಿ ನಟಿಸುತ್ತಿರುವ ಶ್ರೀಲೀಲಾ, ದೋಸ್ತಾನಾ 2ರಲ್ಲೂ ನಾಯಕಿಯಾಗಿ ನಟಿಸುವ ಸಾಧ್ಯತೆ ಇದೆ.
ಶ್ರೀಲೀಲಾ ಸದ್ಯ ಬಾಲಿವುಡ್‌ನಲ್ಲಿ ಸಾಲು ಸಾಲು ಆಫರ್‌ಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಹಿಂದಿಯಲ್ಲಿ ಪಾದಾರ್ಪಣೆ ಮಾಡುವ ಮುನ್ನವೇ ಎರಡನೇ ಸಿನಿಮಾ ಆಫರ್ ಪಡೆದಿದ್ದಾರೆ. ರಶ್ಮಿಕಾ ಮಂದಣ್ಣರಂತೆ ಶ್ರೀಲೀಲಾ ಕೂಡ ಬಾಲಿವುಡ್‌ನಲ್ಲಿ ನೆಲೆ ನಿಲ್ಲುವ ಸಾಧ್ಯತೆಗಳಿವೆ. ಸದ್ಯ ಆಶಿಕಿ ಫ್ರಾಂಚೈಸ್‌ನ ಮೂರನೇ ಭಾಗದಲ್ಲಿ ಕಾರ್ತಿಕ್ ಆರ್ಯನ್ ಜೊತೆ ನಟಿಸುತ್ತಿದ್ದಾರೆ.
25
ಅಧಿಕೃತ ಘೋಷಣೆ ಆಗಿಲ್ಲ
ಈ ಸಿನಿಮಾ ಸೆಟ್ಟೇರುವ ಮುನ್ನವೇ ದೋಸ್ತಾನಾ 2 ಚಿತ್ರದಲ್ಲಿ ಶ್ರೀಲೀಲಾ ನಾಯಕಿಯಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಿಸುತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಅಟ್ಲಿ ನಿರ್ದೇಶನದ ಜಾಹೀರಾತೊಂದರಲ್ಲಿ ರಣವೀರ್ ಸಿಂಗ್, ಶ್ರೀಲೀಲಾ ಮತ್ತು ಬಾಬಿ ಡಿಯೋಲ್ ಒಟ್ಟಿಗೆ ನಟಿಸಿದ್ದಾರೆ.
35
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹಾಟ್ ಟಾಪಿಕ್
ಈ ಜಾಹೀರಾತು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹಾಟ್ ಟಾಪಿಕ್ ಆಗಿದೆ. ಇದನ್ನು ಸುಮಾರು 150 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಶ್ರೀಲೀಲಾ ಕೆಂಪು ಡ್ರೆಸ್‌ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಬಾಡಿ ಲಾಂಗ್ವೇಜ್ ಬಾಲಿವುಡ್ ಶೈಲಿಗೆ ಹೊಂದುವುದರಿಂದ, ಬಿ-ಟೌನ್ ನಿರ್ಮಾಪಕರನ್ನು ಆಕರ್ಷಿಸಿದ್ದಾರೆ.
ಹಿಂದಿನ ಕೆಲವು ಫ್ಲಾಪ್‌ಗಳಿಂದ ಕಂಗೆಟ್ಟಿದ್ದ ಶ್ರೀಲೀಲಾ, ಪುಷ್ಪ-2 ಚಿತ್ರದ ಐಟಂ ಸಾಂಗ್ ಮೂಲಕ ಎಲ್ಲರನ್ನೂ ರಂಜಿಸಿದರು. ಪುಷ್ಪ-2 ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆಗಿದ್ದರಿಂದ ಶ್ರೀಲೀಲಾ ಹಾಡಿಗೆ ಒಳ್ಳೆಯ ಕ್ರೇಜ್ ಸಿಕ್ಕಿತು. ಈ ಹಾಡಿನಿಂದಲೇ ಅವರಿಗೆ ಹಿಂದಿಯಲ್ಲಿ ಸಾಲು ಸಾಲು ಆಫರ್‌ಗಳು ಬರುತ್ತಿವೆ ಎನ್ನಲಾಗಿದೆ. ಇತ್ತೀಚೆಗೆ ಬಿಡುಗಡೆಯಾದ Chings Ad ಆಕೆಗೆ ಬಾಲಿವುಡ್‌ನಲ್ಲಿ ಇನ್ನಷ್ಟು ಅವಕಾಶಗಳನ್ನು ತಂದುಕೊಡುವಂತಿದೆ.
55
ಟಾಲಿವುಡ್‌ನಲ್ಲಿ ಮತ್ತೆ ಸ್ಟಾರ್ ಆಗ್ತಾರಾ?
ಸದ್ಯ ಶ್ರೀಲೀಲಾ ತೆಲುಗಿನಲ್ಲಿ ಎರಡು, ಹಿಂದಿಯಲ್ಲಿ ಒಂದು ಮತ್ತು ತಮಿಳಿನಲ್ಲಿ ಒಂದು ಚಿತ್ರ ಮಾಡುತ್ತಿದ್ದಾರೆ. ಹಿಂದಿಯಲ್ಲಿ ಕಾರ್ತಿಕ್ ಆರ್ಯನ್ ಜೊತೆ 'ಆಶಿಕಿ 3' ಮತ್ತು ತಮಿಳಿನಲ್ಲಿ 'ಪರಾಶಕ್ತಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ರವಿತೇಜ ಜೊತೆ 'ಮಾಸ್ ಜಾತ್ರಾ' ಮತ್ತು ಪವನ್ ಕಲ್ಯಾಣ್ ಜೊತೆ 'ಉಸ್ತಾದ್ ಭಗತ್ ಸಿಂಗ್' ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಎರಡು ಚಿತ್ರಗಳು ಹಿಟ್ ಆದರೆ, ಶ್ರೀಲೀಲಾ ಮತ್ತೆ ಟಾಲಿವುಡ್‌ನಲ್ಲಿ ಸ್ಟಾರ್ ಪಟ್ಟಕ್ಕೇರುವುದು ಖಚಿತ.