ದಕ್ಷಿಣ ಭಾರತದ ಟಾಪ್‌ 10 ನಟಿಯರು ಯಾರು? ಅವರ ನೈಜ ವಯಸ್ಸೆಷ್ಟು ಗೊತ್ತಾ?

First Published | Nov 16, 2023, 9:16 PM IST

ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಹಿರೋಯಿನ್‌ ಆಗಿ ದಕ್ಷಿಣ ಭಾರತದ ಸಿನಿಮಾ ರಂಗವನ್ನು ಆಳುತ್ತಿರುವ ಟಾಪ್‌ 10 ನಟಿಯರು, ಇನ್ನೂ 25 ವರ್ಷದವರಂತೆ ಕಾಣ್ತಾರೆ. ತಮನ್ನಾ, ರಶ್ಮಿಕಾ, ಸಮಂತಾ, ಶ್ರೀಲೀಲಾ, ರಚಿತಾ ರಾಮ್‌, ನಯನತಾರಾ, ತ್ರಿಷಾ ಸೇರಿದಂತೆ ಬ್ಯೂಟಿಫುಲ್‌ ನಟಿಯರ ನೈಜ ವಯಸ್ಸಿನ ಮಾಹಿತಿ ಇಲ್ಲಿದೆ ನೋಡಿ.

ದಕ್ಷಿಣ ಭಾರತದ ಟಾಪ್‌ ನಟಿಯರ ಪೈಕಿ ತಮನ್ನಾ ಭಾಟಿಯಾ (Tamanna Bhatia) ಹೆಚ್ಚು ಫೇಮಸ್ ಆಗಿದ್ದಾರೆ.  ಮೊದಲು ಜಾಹೀರಾತಿನ ಮೂಲಕ ತೆರೆ ಮೇಲೆ ಕಾಣಿಸಿಕೊಂಡ ತಮನ್ನಾ ದಶಕದಿಂದ ದಕ್ಷಿಣ ಭಾರತವನ್ನು ಆಳುತ್ತಿದ್ದಾರೆ. ಇವರು 1989ರ ಡಿಸೆಂಬರ್ 21ರಂದು ಜನಿಸಿದ್ದು, ಇವರಿಗೀಗ ಈಗ 33 ವರ್ಷವಾಗಿದೆ.

ಕರ್ನಾಟಕದ ಪ್ರಮುಖ ನಟಿಯಾಗಿರುವ ಹಾಗೂ ಬೇಡಿಕೆಯ ನಟಿ ರಚಿತಾ ರಾಮ್‌ (Rachita Ram) 1992ರ ಅಕ್ಟೋಬರ್ 3ರಂದು ಜನಿಸಿದ್ದಾರೆ. ಧಾರವಾಹಿ ಮೂಲಕ ಸಿನಿಮಾಗೆ ಬಂದ ರಚಿತಾಗೆ ಈಗ 31 ವರ್ಷವಾಗಿದೆ.

Tap to resize

ದಕ್ಷಿಣ ಭಾರತದಲ್ಲಿ ತನ್ನ ಚಾರ್ಮ್‌ ಕಳೆದುಕೊಳ್ಳದ ಬಹು ಬೇಡಿಕೆಯ ನಟಿಯರಲ್ಲಿ ತ್ರಿಶಾ ಕೃಷ್ಣನ್‌ (Trisha Krishnan) ಕೂಡ ಒಬ್ಬರಾಗಿದ್ದಾರೆ. ತ್ರಿಷಾ 1983ರ ಮೇ 4ರಂದು ಜನಿಸಿದ್ದು, ಅವರಿಗೀಗ 40 ವರ್ಷವಾಗಿದೆ.

ಕರ್ನಾಟಕದ ಮಡಿಕೇರಿ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಕನ್ನಡ, ತೆಲುಗು, ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾ ಮಾಡಿ, ನ್ಯಾಷನಲ್‌ ಕ್ರಶ್‌ ಎನಿಸಿಕೊಂಡಿದ್ದಾರೆ. ರಶ್ಮಿಕಾ 1996ರ ಏಪ್ರಿಲ್ 5ರಂದು ಜನಿಸಿದ್ದು, ಅವರಿಗೆ 27 ವರ್ಷ ವಯಸ್ಸಾಗಿದೆ.

 ಸುಮಾರು ಒಂದೂವರೆ ದಶಕಗಳ ಕಾಲ ತೆಲುಗು, ತಮಿಳು ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಲೇ ಇರುವ ಕೇರಳ ಮೂಲದ ನಟಿ ನಯನತಾರಾ (Nayanatara) ಈಗ ಪ್ಯಾನ್ ಇಂಡಿಯಾ ಸ್ಟಾರ್‌ ಕೂಡ ಆಗಿದ್ದಾರೆ. ಇವರು 1984ರ ನವೆಂಬರ್ 18ರಂದು ಜನಿಸಿದ್ದು ಇವರಿಗೀಗ 38 ವರ್ಷವಾಗಿದೆ.

ಸಿನಿಮಾದಲ್ಲಿ ಹೆಚ್ಚಾಗಿ ಮೈಮಾಟ ಪ್ರದರ್ಶನ ಮಾಡದೇ ಮುಖಭಾವದಲ್ಲಿಯೇ ಪ್ರಸಿದ್ಧಿ ಗಳಿಸಿದ ದಕ್ಷಿಣ ಭಾರತದ ಸ್ಟಾರ್‌ ನಟಿ ಕೀರ್ತಿ ಸುರೇಶ್‌ (Keerthy Suresh) 1992ರ ಅಕ್ಟೋಬರ್ 17ರಂದು ಜನಿಸಿದ್ದಾರೆ. ಅವರಿಗೀಗ 31 ವರ್ಷ ವಯದ್ದಾಗಿದೆ. 

ತೆಲುಗು ಸಿನಿಮಾ ಕ್ಷೇತ್ರದಲ್ಲಿ ಮಹಿಳಾ ಪ್ರಧಾನ ಪಾತ್ರದ ಸಿನಿಮಾ ಅರುಂಧತಿ ಮೂಲಕ ದೇಶಕ್ಕೆ ಪ್ರಸಿದ್ಧಿಯಾದ ಹಾಗೂ ಬಿಲ್ಲಾ ಸಿನಿಮಾದ ಮೂಲಕ ಹಾಟ್‌ ಬ್ಯೂಟಿ ಪ್ರದರ್ಶನ ಮಾಡಿದ ಅನುಷ್ಕಾ ಶೆಟ್ಟಿ (Anushka Shetty) ನಮ್ಮ ಕನ್ನಡದ ಕರಾವಳಿ ಬೆಡಗಿ ಆಗಿದ್ದಾರೆ. ಅವರು 1981ರಲ್ಲಿ ಜನಿಸಿದ್ದು, ಅವರಿಗೀಗ 42 ವರ್ಷವೆಂದು ಹೇಳಲಾಗುತ್ತಿದೆ.

ತೆಲುಗು, ತಮಿಳು ಸಿನಿಮಾ ಕ್ಷೇತ್ರದಲ್ಲಿ ಕಳೆದೆರಡು ದಶಕಗಳಿಂದ ನಾಯಕಿಯಾಗಿಯೇ ನಟಿಸುತ್ತಿರುವ ಕಾಜಲ್ ಅಗರ್ವಾಲ್ (Kajal agarwal) ಅವರಿಗೂ 38 ವರ್ಷ ವಯಸ್ಸಾಗಿದೆ. 1985ರ ಜೂನ್ 19ರಂದು ಜನಿಸಿದ್ದ ಕಾಜಲ್‌ ಕಳೆದೆರಡು ವರ್ಷಗಳ ಹಿಂದೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ.

ಕನ್ನಡದ ಮತ್ತೊಬ್ಬ ಬ್ಯೂಟಿ ನಟಿ ಶ್ರೀಲೀಲಾ (Sreeleela) ತೆಲುಗು ಚಿತ್ರರಂಗದಲ್ಲಿ ಸೆನ್ಸೆಷನ್ ಕ್ರಿಯೇಟ್ ಮಾಡಿದ್ದಾರೆ. 2001ರ ಜೂನ್ 14ರಂದು ಜನಿಸಿದ ಶ್ರೀಲೀಲಾ ಅವರಿಗೆ ಈಗ 22 ವರ್ಷವಾಗಿದೆ. ಇನ್ನು ದಶಕಗಳ ಕಾಲ ಸಿನಿಮಾ ಕ್ಷೇತ್ರದಲ್ಲಿ ಉಳಿಯುವ ಭರವಸೆ ನಟಿಯಾಗಿದ್ದಾರೆ.

ದಕ್ಷಿಣ ಭಾರತದ ಸ್ಟಾರ್‌ ನಟಿಯರಿಗೆ ಸೆಡ್ಡು ಹೊಡೆದಿದ್ದ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರಿಗೀಗ 36 ವರ್ಷ ವಯಸ್ಸಾಗಿದೆ. ಸ್ಟಾರ್‌ ನಟ ನಾಗಚೈತನ್ಯ ಅವರನ್ನು ಮದುವೆಯಾಗಿ ಡಿವೋರ್ಸ್‌ ಪಡೆದ ನಂತರ ಸ್ವತಂತ್ರವಾಗಿ ಜೀವನ ಮಾಡುತ್ತಿದ್ದರು. ಆದರೆ, ಕಳೆದ ಕೆಲ ತಿಂಗಳಿಂದ ಮಯೋಸೈಟಿಸ್ ಕಾಯಿಲೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತೆಲುಗು, ತಮಿಳು ಸಿನಿಮಾಗಳು ಸೇರಿದಂತೆ ಬಾಲಿವುಡ್‌ಗೂ ಎಂಟ್ರಿ ಕೊಟ್ಟ ಬಹುಭಾಷಾ ನಟ ಕಮಲ್‌ಹಾಸನ್‌ ಪುತ್ರಿ ಶೃತಿ ಹಾಸನ್‌ಗೆ (Shruthi Hassan) 37 ವರ್ಷವಾಗಿದೆ. ಇವರು 1986ರ ಜನವರಿ 28ರಂದು ಜನಿಸಿದ್ದಾರೆ.

ಕನ್ನಡತಿಯಾಗಿದ್ದರೂ ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಮಿಂಚುತ್ತಿರುವ ನಟಿ ಪೂಜಾ ಹೆಗ್ಡೆ (Pooja Hegde) 1990ರ ಅಕ್ಟೋಬರ್‌ 13 ರಂದು ಜನಿಸಿದ್ದಾರೆ. ಅವರಿಗೀಗ 33 ವರ್ಷವಾಗಿದೆ.

Latest Videos

click me!